ಕಣಿವೆ, ಜ. ೩: ಕುಶಾಲನಗರ ಈಗಾಗಲೇ ತಾಲೂಕಾಗಿ ಘೋಷಣೆಯಾಗಿರುವುದರಿಂದ ಕುಶಾಲನಗರದಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ೧೦೦ ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕಾದ ಕಾರಣ ಆಸ್ಪತ್ರೆಯ ಆವರಣದಲ್ಲಿರುವ ಲಯನ್ಸ್ ಜಾಗವನ್ನು ಮರಳಿ ಆರೋಗ್ಯ ಇಲಾಖೆಗೆ ಪಡೆದುಕೊಳ್ಳಲಾಗುತ್ತದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಮುಳ್ಳುಸೋಗೆ ಜನತಾ ಕಾಲನಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ ಸಂದರ್ಭ ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ ಆಸ್ಪತ್ರೆಯನ್ನು ಅಭಿವೃದ್ಧಿಗೊಳಿಸಲು ಸ್ಥಳಾವಕಾಶದ ಕೊರತೆ ಇರುವುದರಿಂದ ಆಸ್ಪತ್ರೆಯ ಜಾಗವೇ ಆಗಿರುವ ಲಯನ್ಸ್ ಜಾಗವನ್ನು ಮರಳಿ ಪಡೆಯಲಾಗುವುದು. ಲಯನ್ಸ್ ಸಂಸ್ಥೆಯವರು ಅಂರ್ರಾಷ್ಟಿçÃಯ ಕಣ್ಣಾಸ್ಪತ್ರೆ ಕಟ್ಟುವ ಉದ್ದೇಶದಿಂದ ೧೯೮೭ ರಲ್ಲಿ ಒಂದು ಎಕರೆ ಭೂಮಿಯನ್ನು ಪಡೆದುಕೊಂಡಿದ್ದರು. ಈ ಜಾಗವನ್ನು ಕೊಡುವಾಗ ಆರೋಗ್ಯ ಇಲಾಖೆ ಮೂರು ವರ್ಷದೊಳಗೆ ಆಸ್ಪತ್ರೆಯನ್ನು ಕಟ್ಟಬೇಕು. ಇಲ್ಲದಿದ್ದಲ್ಲಿ ಜಾಗವನ್ನು ಮರಳಿ ಪಡೆಯಲಾಗುವುದು ಎಂದು ಷರತ್ತು ವಿಧಿಸಿತ್ತು. ಆ ಷರತ್ತಿನ ಅನ್ವಯವೇ ಈ ಜಾಗವನ್ನು ಮರಳಿ ಪಡೆಯಲಾಗುತ್ತದೆ ಎಂದು ಶಾಸಕ ರಂಜನ್ ತಿಳಿಸಿದರು.