ಕಣಿವೆ, ಜ. ೩: ದಶಕಗಳಿಂದ ಹಾಳಾಗಿದ್ದ ಮುಳ್ಳುಸೋಗೆ ಗ್ರಾಮದ ಮುಖ್ಯರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಲು ರೂ. ೨೫ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್.ಮಂಜುಳಾ, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಸ್.ಶಿವಾನAದ, ಮಣಿ, ಬಿಜೆಪಿ ಪ್ರಮುಖರಾದ ಗಣಪತಿ, ಶಿವಪ್ಪ, ರಾಮಶೆಟ್ಟಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎಸ್.ಮೋಹನಕುಮಾರ್, ಸಹಾಯಕ ಅಭಿಯಂತರ ಪೀಟರ್, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಪಿಡಿಒ ಸುಮೇಶ್ ಮೊದಲಾದವರಿದ್ದರು.