ಮಡಿಕೇರಿ, ಜ. ೪ : ಐಪಿಎಲ್ ಮಾದರಿಯಲ್ಲಿ ‘ಯುವ ಬಂಟ್ಸ್’ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ‘ಬಂಟ್ಸ್ ಪ್ರೀಮಿಯರ್ ಲೀಗ್-೨೦೨೧’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಂಟ್ಸ್ ವಾರಿರ‍್ಸ್ ನೀಲುಮಾಡು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

ಫೈನಲ್ ಪಂದ್ಯಾಟದಲ್ಲಿ ಬಂಟ್ಸ್ ವಾರಿರ‍್ಸ್ ನೀಲುಮಾಡು ತಂಡ ನಿಗದಿತ ೩ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೨೯ ರನ್ ಕಲೆ ಹಾಕಿತು. ತಂಡ ಪರ ರಕ್ಷಿತ್ ಶೆಟ್ಟಿ ೨೫ ರನ್ ಕಲೆ ಹಾಕಿದರು. ಗುರಿ ಬೆನ್ನತ್ತಿದ ಬೊಟ್ಲಪ್ಪ ಬಂಟ್ಸ್ ತಂಡ ೫ ವಿಕೆಟ್ ಕಳೆದುಕೊಂಡು ೨೩ ರನ್ ದಾಖಲಿಸಲು ಮಾತ್ರ ಶಕ್ತವಾದ ಹಿನ್ನೆಲೆ ಬಂಟ್ಸ್ ವಾರಿರ‍್ಸ್ ನೀಲುಮಾಡು ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದರೆ, ಬೊಟ್ಲಪ್ಪ ಬಂಟ್ಸ್ ಚಾಲೆಂರ‍್ಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ಇದಕ್ಕೂ ಮೊದಲು ನಡೆದ ಕ್ವಾಲಿಫೈಯರ್ ಪಂದ್ಯಾಟದಲ್ಲಿ ಟಾಸ್ ಸೋತ ಬಂಟ್ಸ್ ಬ್ರಿಗೇಡ್ ತಂಡ ನಿಗದಿತ ೬ ಓವರ್‌ನಲ್ಲಿ ೭ ವಿಕೆಟ್‌ಗೆ ೩೭ ರನ್ ಕಲೆ ಹಾಕಿತು. ಗುರಿ ಬೆನ್ನತ್ತಿದ ಬೊಟ್ಲಪ್ಪ ಬಂಟ್ಸ್ ತಂಡ ೫.೫ ಓವರ್‌ನಲ್ಲಿ ಗುರಿ ತಲುಪಿ ಫೈನಲ್ ಪ್ರವೇಶ ಪಡೆಯಿತು. ನಂತರ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತ ಬಂಟ್ಸ್ ವಾರಿಯರ್ಸ್ ನೀಲುಮಾಡು ತಂಡ ೪ ವಿಕೆಟ್‌ಗೆ ೫೦ ರನ್ ಕಲೆ ಹಾಕಿತು. ಗುರಿಬೆನ್ನತ್ತಿದ ರೋರಿಂಗ್ ಬಂಟ್ಸ್ ತಂಡ ೭ ವಿಕೆಟ್ ಕಳೆದುಕೊಂಡು ೨೯ ರನ್ ದಾಖಲಿಸಿತು. (ಮೊದಲ ಪುಟದಿಂದ) ಪಂದ್ಯಾಟದಲ್ಲಿ ಬಂಟ್ಸ್ ಜಾಗ್ವಾರ್ಸ್, ಬೊಟ್ಲಪ್ಪ ಬಂಟ್ಸ್ ಚಾಲೆಂಜರ್ಸ್, ನೀಲುಮಾಡು ವಾರಿಯರ್ಸ್, ಬಂಟ್ಸ್ ಆವೆಂಜರ್ಸ್ ಹಾಕತ್ತೂರು, ಮಲೆನಾಡು ಪ್ಯಾಂಥರ್ಸ್, ರೋರಿಂಗ್ ಬಂಟ್ಸ್ ಕುಶಾಲನಗರ, ಸುರಭಿ ಸೂಪರ್ ಕಿಂಗ್ಸ್, ಬಂಟ್ಸ್ ಬ್ರಿಗೆಡ್ ಮಡಿಕೇರಿ ಸೇರಿದಂತೆ ಒಟ್ಟು ೮ ತಂಡಗಳು ಭಾಗವಹಿಸಿತ್ತು.

ಸಮಾರೋಪ ಸಮಾರಂಭ : ಉದ್ಯಮಿ ಐತಪ್ಪ ರೈ ಸಮಾರಂಭವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ರೈವೀಂದ್ರ ರೈ, ಬಿ.ಡಿ.ನಾರಾಯಣ ರೈ, ಬಿ.ಆರ್.ರತ್ನಾಕರ್ ಶೆಟ್ಟಿ, ರಮೇಶ್ ರೈ, ನಾಗೇಂದ್ರ ರೈ, ಲೀಗ್‌ನ ಆಯೋಜಕ ಬಿ.ಕೆ.ಶ್ರೀನಿವಾಸ್, ಯುವ ಬಂಟ್ಸ್ ಸದಸ್ಯರಾದ ಪ್ರಜೀತ್ ರೈ, ಜಗನ್ನಾಥ್ ರೈ, ಶರತ್ ಶೆಟ್ಟಿ, ಸದಾನಂದ್ ರೈ, ವಸಂತ್ ರೈ ಇತರರು ಪಾಲ್ಗೊಂಡಿದ್ದರು.