ಗೋಣಿಕೊಪ್ಪ ವರದಿ, ಜ. ೩: ನರ್ಸರಿ ಕೌಶಲ್ಯ ತರಬೇತಿ ಪಡೆದವರು ಸ್ವಉದ್ಯೋಗ ಅಥವಾ ಉದ್ಯೋಗ ಗಿಟ್ಟಿಸಿಕೊಂಡು ಬದುಕು ಕಟ್ಟಿಕೊಳ್ಳಲು ಅವಕಾಶವಿದೆ ಎಂದು ಜಿಲ್ಲಾ ನಬಾರ್ಡ್ ಮಹಾ ಪ್ರಬಂಧಕ ಪಿ.ವಿ. ಶ್ರೀನಿವಾಸ್ ಸಲಹೆ ನೀಡಿದರು. ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ, ಭಾರತೀಯ ಕೃಷಿ ಕೌಶಲ್ಯ ಅಭಿವೃದ್ಧಿಯ ಆಶ್ರಯದಲ್ಲಿ ಕೆವಿಕೆ ಸಭಾಂಗಣದಲ್ಲಿ ಆರಂಭಗೊAಡ ಒಂದು ತಿಂಗಳ ತೋಟಗಾರಿಕಾ ನರ್ಸರಿ ತರಬೇತಿ ಉದ್ಘಾಟಿಸಿ ಮಾತನಾಡಿದರು.
ದೀರ್ಘಕಾಲದ ಕೌಶಲ್ಯ ತರಬೇತಿಯ ಲಾಭ ಪಡೆದು ತೋಟದ ಅಭಿವೃದ್ಧಿ, ಸ್ವ ಉದ್ಯೋಗ ಮತ್ತು ಪರ್ಯಾಯ ಉದ್ಯೋಗ ಪಡೆಯಲು ಯೋಜನೆ ರೂಪಿಸಿಕೊಳ್ಳಬೇಕು ಎಂದರು. ತರಬೇತಿಯ ಮುಂದಾಳು ತೋಟಗಾರಿಕಾ ವಿಜ್ಞಾನಿ ಡಾ. ಪ್ರಭಾಕರ್ ಮಾತನಾಡಿ, ನರ್ಸರಿ ಸಂಬAಧಿಸಿದ ತಜ್ಞರನ್ನು ಕರೆಸಿ ಶಿಬಿರಾರ್ಥಿಗಳಿಗೆ ಉಪನ್ಯಾಸ, ಕ್ಷೇತ್ರ ಭೇಟಿ ಮತ್ತು ಸ್ವ ಅನುಭವ ಪಡೆಯಲು ತರಬೇತಿ ಉದ್ದೇಶವಾಗಿದೆ. ನಂತರ ಕೊನೆಯಲ್ಲಿ ಪರೀಕ್ಷೆ ನಡೆಸಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಇದರಿಂದ ತರಬೇತಿ ಪಡೆದವರಿಗೆ ಬೆಳೆಯಲು ಸಹಕಾರಿಯಾಗುತ್ತದೆ ಎಂದರು. ವಿಜ್ಞಾನಿ ವೀರೇಂದ್ರ ಕುಮಾರ್, ನರ್ಸರಿ ಉದ್ಯಮಿ ರಕ್ಷತ್ ಇದ್ದರು.