ಸೋಮವಾರಪೇಟೆ, ಜ. ೪: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನಾಚರಣೆಯ ಪ್ರಯುಕ್ತ ಇಲ್ಲಿನ ಇಂದಿರಾಗಾAಧಿ ಅಭಿಮಾನಿಗಳ ಸಂಘದ ವತಿಯಿಂದ ತಾ. ೯ರಂದು ೩೪ನೇ ವರ್ಷದ ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾ.೯ ರಂದು ಪೂರ್ವಾಹ್ನ ೧೧ ಗಂಟೆಯಿAದ ಇಲ್ಲಿನ ಸಾಕಮ್ಮನ ಬಂಗಲೆಯ ಮೈದಾನದಲ್ಲಿ ಕಬಡ್ಡಿ ಪಂದ್ಯಾಟ ಪ್ರಾರಂಭವಾಗಲಿದೆ. ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಟೂರ್ನಿ ನಡೆಸಲಾಗುತ್ತಿದ್ದು, ಮೊದಲ ಮೂರು ಸ್ಥಾನಗಳಿಸಿದ ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಯೊಂದಿಗೆ ನಗದು ಬಹುಮಾನ ನೀಡಲಾಗುವುದು ಎಂದರು.

ಪAದ್ಯಾವಳಿಯನ್ನು ಜಿ.ಪಂ. ಮಾಜಿ ಸದಸ್ಯ ಹೆಚ್.ಸಿ. ನಾಗೇಶ್, ಕುಸುಬೂರು ಎಸ್ಟೇಟ್ ವ್ಯವಸ್ಥಾಪಕ ಕುಶಾಲಪ್ಪ, ಪ. ಪಂ. ಅಧ್ಯಕ್ಷೆ ನಳಿನಿ ಗಣೇಶ್ ಅವರುಗಳು ಉದ್ಘಾಟಿಸಲಿ ದ್ದಾರೆ. ಸಂಜೆ ೫ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ದಾನಿಗಳಾದ ಹರಪಳ್ಳಿ ರವೀಂದ್ರ, ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್, ಪ.ಪಂ. ಉಪಾಧ್ಯಕ್ಷ ಸಂಜೀವ, ಸದಸ್ಯೆ ಶೀಲಾ ಡಿಸೋಜ ಅವರುಗಳು ಭಾಗವಹಿಸಿ ಬಹುಮಾನ ವಿತರಿಸಲಿದ್ದಾರೆ.

ಇದರೊಂದಿಗೆ ೧೯ ವರ್ಷ ದೊಳಗಿನ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾಟವನ್ನು ನಡೆಸಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ೯೪೪೯೭೯೧೭೯೧ ಅಥವಾ ೯೪೮೩೮೪೩೩೯೫ ಸಂಪರ್ಕಿಸಬಹುದು ಎಂದರು. ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಆನಂದ್ ಮತ್ತು ಚೆನ್ನಯ್ಯ ಉಪಸ್ಥಿತರಿದ್ದರು.