ಚೆಟ್ಟಳ್ಳಿ, ಜ. ೩: ೨೦೧೯-೨೦ನೇ ಸಾಲಿನ ಚೆಟ್ಟಳ್ಳಿ ವಿನಾಯಕ ಮನೋರಂಜನಾ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ದಂಬೆಕೋಡಿ ಹರೀಶ್ ಅವರ ಅಧ್ಯಕ್ಷತೆ ಯಲ್ಲಿ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ನಡೆಯಿತು.
ಮೃತಪಟ್ಟ ಸದಸ್ಯರಾದ ಕೋರನ ಮನು ಹಾಗೂ ಮುಳ್ಳಂಡ ಕೆ. ಗಣಪತಿ ಅವರಿಗೆ ಶಾಂತಿಕೋರಿ ಮೌನಾಚರಿಸಲಾಯಿತು. ಮಹಾಸಭೆಯ ವರದಿ ಹಾಗೂ ಆಡಳಿತ ಮಂಡಳಿ ವರದಿಯನ್ನು ಸಂಘದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಓದಿ ಸಭೆಯಲ್ಲಿ ಅಂಗೀಕರಿಸಲಾಯಿತು. ವಾರ್ಷಿಕ ಲೆಕ್ಕಪತ್ರವನ್ನು ಖಜಾಂಚಿ ಪರ್ಲಕೋಟಿ ತಿರುಪತಿ ಓದಿದರು. ಹೊಸ ಸದಸ್ಯರ ಸೇರ್ಪಡೆಯ ಬಗ್ಗೆ, ಸಂಘದ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು. ಕೋವಿಡ್-೧೯ರ ಕಾರಣ ಸಂಘದ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಸಂಘದ ಅಭಿವೃದ್ಧಿಗೆ ಸಹಕರಿಸ ಬೇಕೆಂದು ಅಧ್ಯಕ್ಷೀಯ ಭಾಷಣದಲ್ಲಿ ಡಿ.ಎಸ್. ಹರೀಶ್ ತಿಳಿಸಿದರು.
ಸಂಘದ ಜಂಟಿ ಕಾರ್ಯದರ್ಶಿ ಚೋಳಪಂಡ ಎಂ. ವಿಜಯ ವಂದಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಮುಳ್ಳಂಡ ಪುಸ್ಯ ರಂಜನ್, ಜಂಟಿ ಖಜಾಂಚಿ ಕೊಂಗೇಟಿರ ಲೋಕೇಶ್ ಅಚ್ಚಪ್ಪ, ಪೇರಿಯನ ಘನಶ್ಯಾಂ, ಮುಳ್ಳಂಡ ರತ್ತು ಚಂಗಪ್ಪ, ಬಲ್ಲಾರಂಡ ನಾಣಯ್ಯ ಹಾಜರಿದ್ದರು. ಪತ್ರಿಕಾ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಪುತ್ತರಿರ ಕರುಣ್ ಕಾಳಯ್ಯ ಅವರಿಗೆ ಸಂಘದ ವತಿಯಿಂದ ಸಂಘದ ಹಿರಿಯ ಸದಸ್ಯರಾದ ಪುತ್ತರಿರ ಗಣೇಶ್ ಭೀಮಯ್ಯ, ಪುತ್ತರಿರ ಟುಟ್ಟು ಕಾರ್ಯಪ್ಪ, ಬಲ್ಲಾರಂಡ ಕಾರ್ಯಪ್ಪ ಹಾಗೂ ಸಂಘದ ಅಧ್ಯಕ್ಷ ದಂಬೆಕೋಡಿ ಹರೀಶ್ ಅವರು ಸನ್ಮಾನಿಸಿ, ಗೌರವಿಸಿದರು.