ಮಡಿಕೇರಿ, ಜ. ೨: ದಕ್ಷಿಣ ಭಾರತದಲ್ಲಿ ಹೆಸರಾಂತ ಚಿತ್ರತಾರೆಯಾಗಿ ಇದೀಗ ಬಾಲಿವುಡ್‌ಗೂ ಪದಾರ್ಪಣೆ ಮಾಡುತ್ತಿರುವ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣಗೆ ಪ್ರತಿಷ್ಠಿತ ದಾದಾ ಫಾಲ್ಕೆ ಉತ್ತಮ ನಟಿ ಪ್ರಶಸ್ತಿ ಲಭ್ಯವಾಗಿದೆ. ತೆಲುಗು ಚಿತ್ರದಲ್ಲಿನ ನಟನೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿಗೆ ರಶ್ಮಿಕಾ ಆಯ್ಕೆಯಾಗಿದ್ದಾಳೆ.೨೦೨೦ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರ ಪಟ್ಟಿ ಘೋಷಣೆಯಾಗಿದ್ದು, ಹಲವು ಖ್ಯಾತ ನಟ-ನಟಿಯರೊಂದಿಗೂ ಈಕೆಗೂ ಈ ಪ್ರಶಸ್ತಿ ದೊರೆತಿರುವುದು ವಿಶೇಷವಾಗಿದೆ.

ತೆಲುಗು ಚಿತ್ರ ಡಿಯರ್ ಕಾಮ್ರೆಡ್‌ನಲ್ಲಿ ಯಾವುದೇ ಮೇಕಪ್ ಇಲ್ಲದಂತೆ ನ್ಯಾಚುರಲ್ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿ ದೊರೆತಿದೆ. ಪುತ್ರಿಗೆ ಸಂದಿರುವ ಈ ಪ್ರತಿಷ್ಠಿತವಾದ ಪ್ರಶಸ್ತಿಯ ಬಗ್ಗೆ ಆಕೆಯ ಪೋಷಕರಾದ ವೀರಾಜಪೇಟೆಯ ಮುಂಡಚಾಡಿರ ಮದನ್ ಮಂದಣ್ಣ ಹಾಗೂ ಸುಮನ್ ದಂಪತಿ ಹರ್ಷ ವ್ಯಕ್ತಪಡಿಸಿದ್ದಾರೆ.ಹಲವಾರು ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ ಇದೀಗ ಬಾಲಿವುಡ್‌ಗೂ ಎಂಟ್ರಿ ಕೊಡುತ್ತಿದ್ದು, ಇದೇ ಸಂದರ್ಭದಲ್ಲಿ ಈ ಗೌರವ ಲಭಿಸಿರುವ ಬಗ್ಗೆ ಅವರುಗಳು ‘ಶಕ್ತಿ’ಯೊಂದಿಗೆ ಸಂತಸ ಹಂಚಿಕೊAಡರು.