ಪೊನ್ನಂಪೇಟೆ, ಜ.೨: ಇಲ್ಲಿನ ‘ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ'ಕ್ಕೆ ಪುನರಾಯ್ಕೆಗೊಂಡಿರುವ (ನಿಸರ್ಗ ಜೇಸೀಸ್) ೧೦ನೇ ಘಟಕಾಡಳಿತ ಮಂಡಳಿ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭವು ತಾ.೪ರಂದು ನಡೆಯಲಿದೆ.
ಗೋಣಿಕೊಪ್ಪಲಿನ ಹರಿಶ್ಚಂದ್ರಪುರದಲ್ಲಿರುವ ಎಪಿಎಂಸಿ ಸಭಾಂಗಣದಲ್ಲಿ ಸಂಜೆ ೭ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಜೆ.ಸಿ.ಐ. ಭಾರತದ ವಲಯ-೧೪ರ ವಲಯಾಧ್ಯಕ್ಷ ಭರತ್ ಆಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಘಟಕದ ನಿಕಟಪೂರ್ವ ಅಧ್ಯಕ್ಷ ಎ.ಎಸ್. ಟಾಟು ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕರೂ ಆಗಿರುವ, ಮಡಿಕೇರಿಯ ರೋಟರಿ ಮಿಸ್ಟಿಹಿಲ್ಸ್ನ ಸ್ಥಾಪಕಾಧ್ಯಕ್ಷರಾದ ಬಿ.ಜಿ. ಅನಂತಶಯನ ಅವರು ಭಾಗವಹಿಸಲಿದ್ದಾರೆ. ವಲಯ ೧೪ರ ‘ಎ' ಪ್ರಾಂತ್ಯದ ವಲಯ ಉಪಾಧ್ಯಕ್ಷ ಎಂ. ಬಾಬು ಅವರು ಸಮಾರಂಭದ ಅನುಸ್ಥಾಪನಾಧಿಕಾರಿಯಾಗಿ ಆಗಮಿಸಲಿದ್ದಾರೆ.
ಭಾರತೀಯ ಜೇಸಿಸ್‌ನ ವಲಯ-೧೪ ರಲ್ಲಿರುವ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್)ಘಟಕದ ೧೦ನೇ ಘಟಕಾಡಳಿತ ಮಂಡಳಿಯ ಅಧ್ಯಕ್ಷರಾಗಿ ಉಪನ್ಯಾಸಕ ಎಂ.ಎನ್. ವನಿತ್ ಕುಮಾರ್, ಕಾರ್ಯದರ್ಶಿಯಾಗಿ ಎ.ಪಿ. ದಿನೇಶ್ (ದಿನು), ಕೋಶಾಧಿಕಾರಿಯಾಗಿ ಕುಪ್ಪಂಡ ದಿಲನ್ ಬೋಪಣ್ಣ, ಉಪಾಧ್ಯಕ್ಷರಾಗಿ ಎಚ್.ಆರ್. ಸತೀಶ್ (ನಿರ್ವಹಣೆ), ಜಿ.ಪಿ. ಸ್ವಾಮಿ (ಕಾರ್ಯಕ್ರಮ), ಪಿ.ಎಂ. ಮಹರೂಫ್ (ತರಬೇತಿ), ಎನ್. ಜಿ. ಸುರೇಶ್ (ಅಭಿವೃದ್ಧಿ ಮತ್ತು ಬೆಳವಣಿಗೆ), ಜಂಟಿ ಕಾರ್ಯದರ್ಶಿಯಾಗಿ ಎಂ.ಬಿ. ನೀತಿ ಅಯ್ಯಪ್ಪ, ನಿರ್ದೇಶಕರುಗಳಾಗಿ ಕ್ಯಾ.ಬಿ.ಎಂ. ಗಣೇಶ್, ಎಂ.ಎಸ್. ಸರ್ಫುದ್ದೀನ್, ಪಿ.ಪಿ. ಬಿದ್ದಪ್ಪ ಮತ್ತು ಶಿವಕುಮಾರ್, ಘಟಕದ ಜೇಸಿರೇಟ್ ವಿಭಾಗದ ಮುಖ್ಯಸ್ಥರಾಗಿ ಕೆ.ಜಸ್ಮಿ ಬೋಪಣ್ಣ ಹಾಗೂ ಜೂನಿಯರ್ ಜೇಸಿ ವಿಭಾಗದ ಮುಖ್ಯಸ್ಥರಾಗಿ ಎ.ಡಿ. ಚರಣ್ ಚಂಗಪ್ಪ ಅವರು ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಘಟಕದ ಪ್ರಕಟಣೆ ತಿಳಿಸಿದೆ.