ಮಡಿಕೇರಿ, ಜ.೨; ಇದೀಗ ಶಾಲಾ, ಕಾಲೇಜುಗಳು ಪ್ರಾರಂಭವಾಗಿರುವದರಿAದ ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ(ಅಶ್ವಿನಿ ಆಸ್ಪತ್ರೆ) ಪರೀಕ್ಷೆ ಮಾಡಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಿನ್ನೆಯಿಂದ ಹತ್ತನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಿವೆ. ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಕೋವಿಡ್ ಪರೀಕ್ಷೆಯ ವರದಿ ಕಡ್ಡಾಯವಾಗಿ ಹೊಂದಿರಬೇಕೆAಬ ನಿಯಮ ಇರುವದರಿಂದ ವಿದ್ಯಾರ್ಥಿಗಳು ಪರೀಕ್ಷೆ ಮಾಡಿಸಿಕೊಳ್ಳಲು ಜಿಲ್ಲಾಸ್ಪತ್ರೆಗೆ ತೆರಳುತಿದ್ದಾರೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೂ ಸೇರಿದಂತೆ ಇತರ ರೋಗಿಗಳು ಸರದಿ ಸಾಲಿನಲ್ಲಿ ನಿಂತಿದ್ದರು. ಆದರೆ, ಚೀಟಿ ಮಾಡಿಕೊಡುವ ಕೇಂದ್ರದಲ್ಲಿ ಓರ್ವ ಸಿಬ್ಬಂದಿ ಮಾತ್ರ ಇದ್ದುದರಿಂದ ನೋಂದಣಿ ಕಾರ್ಯ ತೀರಾ ವಿಳಂಬಗತಿಯಿAದ ನಡೆಯುತಿತ್ತು. ಬೆಳಿಗ್ಗೆಯಿಂದ ಸಾಲಿನಲ್ಲ್ಲಿ ನಿಂತಿದ್ದವರಿಗೆ ಮಧ್ಯಾಹ್ನವಾದರೂ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗದ್ದರಿಂದ ಸಹಜವಾಗಿಯೇ ಕೆರಳಿದ ಜನರು ಸಿಬ್ಬಂದಿಗಳ ವಿರುದ್ಧ ಹರಿಹಾಯ್ದ ಪ್ರಸಂಗ ಎದುರಾಯಿತು. ಸ್ಥಳದಲ್ಲಿದ್ದ ‘ಶಕಿ’್ತ ಪ್ರತಿನಿಧಿಯೊಂದಿಗೆ ಸಮಸ್ಯೆ ತೋಡಿಕೊಂಡ ಜನರು, ಶಾಸಕರ ಗಮನಕ್ಕೆ ತಂದು ಏನಾದರೂ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿಕೊಂಡರು. ಈ ಬಗ್ಗೆ ಸ್ಥಳದಲ್ಲಿದ್ದ ಗುತ್ತಿಗೆ ಪಡೆದ ಏಜನ್ಸಿಯ ಪ್ರಮುಖರಲ್ಲಿ ವಿಚಾರಿಸಿದ ಸಂದರ್ಭ ನೋಂದಣಿ ಕೇಂದ್ರದ ಮತ್ತೋರ್ವ ಸಿಬ್ಬಂದಿ ತುರ್ತು ಕಾರ್ಯ ನಿಮಿತ್ತ ರಜೆ ಮಾಡಿರುವದಾಗಿ ತಿಳಿಸಿದರು. ನಂತರದಲ್ಲಿ ಈ ಬಗ್ಗೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಕಾರ್ಯಪ್ಪ ಅವರ ಗಮನಕ್ಕೆ ತರಲಾಗಿ

(ಮೊದಲ ಪುಟದಿಂದ) ಅವರ ಸೂಚನೆ ಬಳಿಕ ಗುತ್ತಿಗೆದಾರ ಸಂಸ್ಥೆಯ ಪ್ರಮುಖರು ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ಕರೆಸಿದರು. ನಂತರದಲ್ಲಿ ನೋಂದಣಿ ಕಾರ್ಯ ನಡೆಯಿತಾದರೂ ಅದಾಗಲೇ ಊಟದ ಸಮಯವಾದ್ದರಿಂದ ಕೋವಿಡ್ ಪರೀಕ್ಷಾ ಕೇಂದ್ರದಲ್ಲಿದ್ದ ಸಿಬ್ಬಂದಿಗಳು ಪರೀಕ್ಷೆಗೆ ಬಂದವರನ್ನು ಮಧ್ಯಾಹ್ನ ೨.೩೦ರ ಬಳಿಕ ಬರುವಂತೆ ಹೇಳಿ ಕಳುಹಿಸಿದರು. ಮೊದಲೇ ಬೆಳಿಗ್ಗೆಯಿಂದ ಸಾಲಿನಲ್ಲಿ ನಿಂತು ಬಸವಳಿದಿದ್ದ ಜನರು ಹಿಡಿ ಶಾಪ ಹಾಕುತ್ತಲೇ ತೆರಳಿದರು.

ಶಾಲೆಗೆ ತೆರಳಬೇಕಾದ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಅಗತ್ಯವೆಂದು ತಿಳಿದಿದ್ದರೂ ಸಂಬAಧಿಸಿದವರು ಸರಿಯಾದ ವ್ಯವಸ್ಥೆ ಮಾಡಿಕೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಗೊಂಡಿದ್ದು, ಇನ್ನಾದರೂ ಈ ರೀತಿಯ ಅಚಾತುರ್ಯವಾಗ ದಂತೆ ಗಮನಹರಿಸುವಂತಾಗಲಿ ಎಂದು ಜನತೆ ಅಳಲು ತೋಡಿಕೊಂಡರು.