ಸೋಮವಾರಪೇಟೆ, ಜ.೨: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಬೈಕ್ ಡಿಕ್ಕಿಯಾಗಿ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಸಮೀಪದ ಮಾದಾಪುರದಲ್ಲಿ ನಡೆದಿದೆ.ಮಾದಾಪುರ ಸಮೀಪದ ಗರ್ವಾಲೆ ಗ್ರಾಮ ಬೈಕ್ ಡಿಕ್ಕಿಯಾಗಿ ಪಾದಚಾರಿ ಸಾವು

(ಮೊದಲ ಪುಟದಿಂದ) ನಿವಾಸಿ ಓಡಿಯಂಡ ನಂಜುAಡ (೬೫) ಎಂಬವರೇ ಮೃತಪಟ್ಟವರು. ತನ್ನ ಪತ್ನಿಯೊಂದಿಗೆ ಮಡಿಕೇರಿಗೆ ತೆರಳಿ, ನಿನ್ನೆ ದಿನ ಮಾದಾಪುರಕ್ಕೆ ವಾಪಸ್ ಆಗಿದ್ದರು. ಮಾದಾಪುರದಿಂದ ಗರ್ವಾಲೆ ಗ್ರಾಮಕ್ಕೆ ತೆರಳುವ ಸಂದರ್ಭ ಮಾದಾಪುರದ ಎಂ.ಡಿ. ಸ್ಟೋರ್ ಮುಂಭಾಗ ಕಾರೆಕಾಡಿನನದೀಮ್ ಎಂಬಾತ ಚಾಲಿಸುತ್ತಿದ್ದ ಬುಲ್ಲೆಟ್ ಬೈಕ್ ಡಿಕ್ಕಿಯಾಗಿದೆ.ಘಟನೆಯಿಂದ ತೀವ್ರ ಗಾಯಗೊಂಡ ನಂಜುAಡ ಅವರನ್ನು ಮಾದಾಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಈ ಬಗ್ಗೆ ಮೃತರ ಮಗ ಓಡಿಯಂಡ ಬೋಪಣ್ಣ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ತೆರಳಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.