ಮಡಿಕೇರಿ, ಜ. ೧: ಜಿಲ್ಲೆಯಲ್ಲಿ ನೂತನ ವರ್ಷಾಚರಣೆ ಕಾರ್ಯಕ್ರಮಗಳು ಸರಳವಾಗಿ ಯಾವುದೇ ಗೊಂದಲಗಳಿಲ್ಲದೆ ಶಾಂತಿಯುತವಾಗಿ ಜರುಗಿದೆ ಎಂದು ಎಸ್ಪಿ ಕ್ಷಮಾ ಮಿಶ್ರಾ ಅವರು ತಿಳಿಸಿದ್ದಾರೆ. ಪ್ರವಾಸಿಗರ ಸಂಖ್ಯೆ ತುಸು ಹೆಚ್ಚಿದ್ದರೂ ಎಲ್ಲೂ ನಿಯಮ ಉಲ್ಲಂಘನೆಯಾಗಲಿಲ್ಲ. ಪೊಲೀಸರು ಅಲ್ಲಲ್ಲಿ ಈ ಬಗ್ಗೆ ಸೂಕ್ತ ಗಮನ ಹರಿಸಿ ಕರ್ತವ್ಯ ನಿರ್ವಹಿಸಿರುವುದಾಗಿ ಅವರು ತಿಳಿಸಿದ್ದಾರೆ.