ಮಡಿಕೇರಿ, ಜ. ೧: ಇತರೆ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ೩೧೪ ಕ್ಲೇಮುಗಳಿಗೆ ಅರಣ್ಯ ಹಕ್ಕು ಪತ್ರ ನೀಡಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಅನುಮೋದನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಪುನರ್ ಪರಿಶೀಲಿಸಿ ಸಲ್ಲಿಕೆಯಾಗಿದ್ದ ೩೧೪ ಅರ್ಜಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಅನುಮೋದನೆ ನೀಡಿದ್ದಾರೆ.

ಉಪ ವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿಯಲ್ಲಿ ೨೩ ಪರಿಶಿಷ್ಟ ಪಂಗಡ ಮತ್ತು ೨೯೧ ಇತರೆ ವೈಯಕ್ತಿಕ ಕ್ಲೇಮುಗಳನ್ನು ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಮರು ಪರಿಶೀಲಿಸಿ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವಿವರಿಸಿದರು. ಇತರೆ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಇದೇ ಪ್ರಪ್ರಥಮ ಬಾರಿಗೆ ೩೧೪ ಅರ್ಜಿಗಳಿಗೆ ಅರಣ್ಯ ಹಕ್ಕು ಪತ್ರ ನೀಡುತ್ತಿರುವುದು ವಿಶೇಷವಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.

ಅರಣ್ಯ ಹಕ್ಕು ಪತ್ರ ಸಂಬAಧಿಸಿದAತೆ ಇತರೆ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ಜಿಲ್ಲಾ ಅರಣ್ಯ ಸಮಿತಿಗೆ ಮಾಹಿತಿ ಒದಗಿಸಬೇಕು. ಈಗಾಗಲೇ ಅನುಮೋದನೆ ನೀಡಲಾಗಿರುವ ಅರಣ್ಯಹಕ್ಕು ಅರ್ಜಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮವಹಿಸುವಂತೆ ಐಟಿಡಿಪಿ ಇಲಾಖಾ ಅಧಿಕಾರಿಗೆ ಸೂಚಿಸಿದರು.

ಈಗಾಗಲೇ ಅರಣ್ಯ ಹಕ್ಕು ಕಾಯ್ದೆಯಡಿ ಪರಿಶಿಷ್ಟ ಪಂಗಡದ ೨,೮೦೬ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಹಾಗೆಯೇ ಇತರೆ ಜನಾಂಗದವರು ೧,೧೮೫ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ ೧,೭೩೯ ಪರಿಶಿಷ್ಟ ಪಂಗಡದವರ ಅರ್ಜಿಗಳು ಅನುಮೋದನೆ ಗೊಂಡು ಹಕ್ಕು ಪತ್ರ ನೀಡಲಾಗಿದೆ. ಉಳಿದಂತೆ ೧,೦೬೭ ಅರ್ಜಿಗಳು ತಿರಸ್ಕೃತ ಗೊಂಡಿವೆ. ಹಾಗೆಯೇ ೧,೧೮೫ ಅರ್ಜಿಗಳು ತಿರಸ್ಕೃತಗೊಂಡಿವೆ. ಪರಿಶಿಷ್ಟ ಪಂಗಡದ ೬೯೦ ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗಿದೆ ಮತ್ತು ಇತರೆ ವರ್ಗದ ೧,೧೮೫ ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗಿದೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಸಿ.ಶಿವಕುಮಾರ್ ಅವರು ಮಾಹಿತಿ ನೀಡಿದರು.

ಪುನರ್ ಪರಿಶೀಲಿಸಿ ಅಂಗೀಕರಿಸಿದ ಅರ್ಜಿಗಳಿಗೆ ಸಂಬAಧಿಸಿದAತೆ ಪರಿಶಿಷ್ಟ ಪಂಗಡದ ೧೬೨, ಇತರೆ ಜನಾಂಗದ ೨೭೧ ಅರ್ಜಿಗಳನ್ನು ಪುನರ್ ಪರಿಶೀಲಿಸಿ ಅಂಗೀಕರಿಸಲಾಗಿದೆ. ಪರಿಶಿಷ್ಟ ಪಂಗಡದ ೪೦೫ ಮತ್ತು ಇತರೆ ವರ್ಗದ ೧೧೧ ಒಟ್ಟು ೫೧೬ ಅರ್ಜಿಗಳು ಪುನರ್ ಪರಿಶೀಲನೆಗೆ ಬಾಕಿ ಇದೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಅವರು ಮಾಹಿತಿ ನೀಡಿದರು.

ಸೋಮವಾರಪೇಟೆ ತಾಲೂಕಿನ ಬೇಳೂರು ಗ್ರಾ.ಪಂ.ವ್ಯಾಪ್ತಿಯ ಬಜೆಗುಂಡಿ ಹಾಡಿಯ ಪರಿಶಿಷ್ಟ ಪಂಗಡದ ನಾಲ್ಕು ಹಾಗೂ ಇತರೆ ೨೮೬ ಸಮುದಾಯಗಳ ಹಾಗೂ ೭ ನೇ ಹೊಸಕೋಟೆ ಗ್ರಾ.ಪಂ.ಯ ಬಿದ್ರಳ್ಳ ಹಾಡಿಯ ಇತರೆ ಸಮುದಾಯದಡಿ ೫, ಹಾಗೆಯೇ ವೀರಾಜಪೇಟೆ ತಾಲೂಕಿನ ಕೆ.ಬಾಡಗ ಗ್ರಾ.ಪಂ.ವ್ಯಾಪ್ತಿಯ ಬಾಳೆಕೋವು ಮಾರನಕೊಲ್ಲಿ ಹಾಡಿಯ ೭ ಪರಿಶಿಷ್ಟ ಪಂಗಡ, ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಮಜ್ಜಿಗೆಹಳ್ಳ ಫಾರ್ಮ್ ಹಾಡಿಯ ೧, ಬೊಂಬುಕಾಡು ಹಾಡಿಯ ೩, ನಾಲ್ಕೇರಿ ಗ್ರಾ.ಪಂ.ಯ ಬೊಮ್ಮಾಡು ಹಾಡಿ ೫, ಚೆನ್ನಯ್ಯನಕೋಟೆ ಗ್ರಾ.ಪಂ. ದಿಡ್ಡಳ್ಳಿ ಹಾಡಿಯ ೧ ಮತ್ತು ದಯ್ಯದಹಡ್ಲು ೨, ಒಟ್ಟು ಪರಿಶಿಷ್ಟ ಪಂಗಡದ ೨೩ ಮತ್ತು ಇತರೆ ೨೯೧ ಸೇರಿದಂತೆ ೩೧೪ ಕ್ಲೇಮುಗಳಿಗೆ ಅರಣ್ಯ ಹಕ್ಕು ಪತ್ರ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಕಂದೂ ಅವರು ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಬAಧ ಮಾಹಿತಿ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ, ನಿಲೇಶ್ ಸಿಂಧೆ, ಇತರರು ಇದ್ದರು.