ಮಡಿಕೇರಿ, ಡಿ. ೩೧: ಜಿಲ್ಲೆಯ ೧೦೧ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದು, ಫಲಿತಾಂಶವೂ ಹೊರಬಿದ್ದಿದೆ. ಕಳೆದ ಐದಾರು ತಿಂಗಳಿನಿAದ ಗ್ರಾ.ಪಂ.ಗಳಿಗೆ ಚುನಾವಣೆ ನಡೆಯದ್ದರಿಂದ ಈ

ತನಕ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿತ್ತು. ಇದೀಗ ಚುನಾವಣೆ ಮುಗಿದಿದ್ದು, ೨೦೨೧ರ ಹೊಸ ವರ್ಷದ ಆರಂಭಕ್ಕೆ ಹೊಸ ಆಡಳಿತ ಮಂಡಳಿ ರಚನೆಯಾಗಲಿದೆ. ೧೦೧ ಗ್ರಾ.ಪಂ. ಗಳಿಗೂ ಪ್ರತಿನಿಧಿಗಳ ಆಯ್ಕೆ ಅಂತಿಮ ಗೊಂಡಿದ್ದು, ಇನ್ನಷ್ಟೆ ಅಧ್ಯಕ್ಷ - ಉಪಾ ಧ್ಯಕ್ಷರ ಮೀಸಲಾತಿ ನಡೆಯಬೇಕಿದೆ. ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಕುರಿತಾಗಿ ಸರಕಾರದಿಂದ ಇನ್ನೂ ಅಧಿಕೃತ ಆದೇಶ ಬಂದಿಲ್ಲ. ಸರಕಾರದಿಂದ ಬರುವ ಮಾರ್ಗಸೂಚಿ ಯಂತೆ ವಿವಿಧ ಪಂಚಾಯಿತಿಗಳಲ್ಲಿ ಆಡಳಿತ ಮಂಡಳಿ ರಚನೆಗೆಮೀಸಲಾತಿಯನ್ನು ನಿಗದಿಪಡಿಸ ಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರದ ಆದೇಶ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಿರುವದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಚುನಾವಣಾ ಪ್ರಕ್ರಿಯೆ ಹಾಗೂ ಮತ ಎಣಿಕೆ ಸುಸೂತ್ರವಾಗಿ ಮುಕ್ತಾಯ ಗೊಂಡಿರುವ ಕುರಿತು ಜಿಲ್ಲಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದು, ಜನತೆಗೆ ಧನ್ಯವಾದ ಸಮರ್ಪಿಸಿದ್ದಾರೆ.

(ಮೊದಲ ಪುಟದಿಂದ)

ಮಹಿಳಾ ಸದಸ್ಯರ ಸಂಖ್ಯೆ ಅಧಿಕ

ಪ್ರಸಕ್ತ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮಹಿಳಾ ಸದಸ್ಯರು ಪುರುಷ ರಿಗಿಂತ ಅಧಿಕ ಸಂಖ್ಯೆಯಲ್ಲಿರುವದು ಈ ಬಾರಿಯ ವಿಶೇಷವಾಗಿದೆ. ಜಿಲ್ಲೆಯ ಒಟ್ಟು ೧೦೧ ಗ್ರಾ.ಪಂ.ಗಳಿಗೆ ಚುನಾವಣೆ ನಿಗದಿಯಾಗಿದ್ದು, ಒಟ್ಟು ೧೨೦೨ ನೂತನ ಸದಸ್ಯರ ಆಯ್ಕೆ ನಡೆಯಬೇಕಿತ್ತು. ಆದರೆ ಕಾರಣಾಂತರದಿAದ ಒಟ್ಟು ೧೦ ಸ್ಥಾನಗಳಿಗೆ ನಾಮಪತ್ರವೇ ಸಲ್ಲಿಕೆಯಾಗಿಲ್ಲ. ಮಡಿಕೇರಿ ತಾಲೂಕಿನಲ್ಲಿ ಹಾಗೂ ವೀರಾಜಪೇಟೆಯಲ್ಲಿ ತಲಾ ನಾಲ್ಕು ಹಾಗೂ ಸೋಮವಾರಪೇಟೆಯಲ್ಲಿ ೨ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ.

ಅವಿರೋಧವಾಗಿ ೧೦೦ ಮಂದಿ

ಈ ಬಾರಿ ಮಡಿಕೇರಿ ತಾಲೂಕಿನಲ್ಲಿ ೨೭, ಸೋಮವಾರಪೇಟೆ ೧೯ ಹಾಗೂ ವೀರಾಜಪೇಟೆಯಲ್ಲಿ ೫೪ ಮಂದಿ ಸೇರಿದಂತೆ ಒಟ್ಟು ೧೦೦ ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಮತದಾನದ ನಂತರ ೧೦೯೨ ಸದಸ್ಯರು

ಮತದಾನದ ಬಳಿಕ ಮಡಿಕೇರಿ ತಾಲೂಕಿನಲ್ಲಿ ೨೬೪, ಸೋಮವಾರಪೇಟೆಯಲ್ಲಿ ೪೬೨ ಹಾಗೂ ವೀರಾಜಪೇಟೆಯಲ್ಲಿ ೩೬೬ ಸದಸ್ಯರು ಸೇರಿ ಒಟ್ಟು ೧೦೯೨ ಸದಸ್ಯರು ಚುನಾಯಿತರಾಗಿದ್ದಾರೆ. ಇದರಿಂದಾಗಿ ಪ್ರಸ್ತುತ ಅವಿರೋಧವಾಗಿ ಆಯ್ಕೆಗೊಂಡ ೧೦೦ ಸದಸ್ಯರೂ ಸೇರಿದಂತೆ ಆಯ್ಕೆಗೊಂಡಿರುವ ಒಟ್ಟು ಸದಸ್ಯರ ಸಂಖ್ಯೆ ೧೧೯೨ ಆಗಿದೆ.

೬೧೮ ಮಹಿಳೆಯರು ೫೭೪ ಪುರುಷರು

ಒಟ್ಟು ಸದಸ್ಯರ ಪೈಕಿ ೫೭೪ ಪುರುಷರಾದರೆ, ೬೧೮ ಮಂದಿ ಮಹಿಳಾ ಸದಸ್ಯರು ಈ ಬಾರಿ ಜಿಲ್ಲೆಯಲ್ಲಿ ಪ್ರತಿನಿಧಿಗಳಾಗಿರುವದು ಗಮನಾರ್ಹವಾಗಿದೆ. ವಿವಿಧ ಮೀಸಲಾತಿಗಳಲ್ಲೂ ಮಹಿಳೆಯರಿಗೆ ಅಧಿಕ ಪ್ರಾತಿನಿದ್ಯವಿರುವದರಿಂದ ಮಹಿಳಾ ಸದಸ್ಯರ ಸಂಖ್ಯೆ ಜಿಲ್ಲೆಯಲ್ಲಿ ಅಧಿಕವಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಅನುಸೂಚಿತ ಜಾತಿ ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ೧೦, ಮಹಿಳಾ ಮೀಸಲು ಕ್ಷೇತ್ರದಲ್ಲಿ ೧೩, ಅನುಸೂಚಿತ ಪಂಗಡ ಸಾಮಾನ್ಯ ಕ್ಷೇತ್ರದಲ್ಲಿ ೧, ಮಹಿಳಾ ಮೀಸಲು ಕ್ಷೇತ್ರದಲ್ಲಿ ೨೫, ಹಿಂದುಳಿದ ವರ್ಗ (ಎ) ಸಾಮಾನ್ಯ ಕ್ಷೇತ್ರದಲ್ಲಿ ೨೦, ಮಹಿಳಾ ಮೀಸಲು ಕ್ಷೇತ್ರದಲ್ಲಿ ೩೯, ಹಿಂದುಳಿದ ವರ್ಗ (ಬಿ) ಸಾಮಾನ್ಯ ಕ್ಷೇತ್ರದಲ್ಲಿ ೧೧, ಮಹಿಳಾ ಕ್ಷೇತ್ರದಲ್ಲಿ ೪, ಸಾಮಾನ್ಯ ಕ್ಷೇತ್ರದ ಸಾಮಾನ್ಯ ವರ್ಗದಲ್ಲಿ ೯೯, ಮಹಿಳಾ ಮೀಸಲು ಕ್ಷೇತ್ರದಲ್ಲಿ ೯೨ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನಲ್ಲಿ ಅನುಸೂಚಿತ ಜಾತಿ ಸಾಮಾನ್ಯ ಕ್ಷೇತ್ರದಲ್ಲಿ ೨೭, ಮಹಿಳಾ ಮೀಸಲು ಕ್ಷೇತ್ರದಲ್ಲಿ ೫೪, ಅನುಸೂಚಿತ ಪಂಗಡ ಸಾಮಾನ್ಯ ಕ್ಷೇತ್ರದಲ್ಲಿ ೬, ಮಹಿಳಾ ಮೀಸಲು ಕ್ಷೇತ್ರದಲ್ಲಿ ೪೨, ಹಿಂದುಳಿದ ವರ್ಗ (ಎ) ಸಾಮಾನ್ಯ ಕ್ಷೇತ್ರದಲ್ಲಿ ೨೪, ಮಹಿಳಾ ಮೀಸಲು ಕ್ಷೇತ್ರದಲ್ಲಿ ೫೮, ಹಿಂದುಳಿದ ವರ್ಗ (ಬಿ) ಸಾಮಾನ್ಯ ಕ್ಷೇತ್ರದಲ್ಲಿ ೧೫, ಮಹಿಳಾ ಕ್ಷೇತ್ರದಲ್ಲಿ ೪, ಸಾಮಾನ್ಯ ಕ್ಷೇತ್ರದ ಸಾಮಾನ್ಯ ವರ್ಗದಲ್ಲಿ ೧೫೯, ಮಹಿಳಾ ಮೀಸಲು ಕ್ಷೇತ್ರದಲ್ಲಿ ೯೨ ಅಭ್ಯರ್ಥಿಗಳು ಜಯಶಾಲೆಯಾಗಿದ್ದಾರೆ.

ವೀರಾಜಪೇಟೆ ತಾಲೂಕಿನಲ್ಲಿ ಅನುಸೂಚಿತ ಜಾತಿ ಸಾಮಾನ್ಯ ಕ್ಷೇತ್ರದಲ್ಲಿ ೧೪, ಮಹಿಳಾ ಮೀಸಲು ಕ್ಷೇತ್ರದಲ್ಲಿ ೩೯, ಅನುಸೂಚಿತ ಪಂಗಡ ಸಾಮಾನ್ಯ ಕ್ಷೇತ್ರದಲ್ಲಿ ೩೮, ಮಹಿಳಾ ಮೀಸಲು ಕ್ಷೇತ್ರದಲ್ಲಿ ೫೭, ಹಿಂದುಳಿದ ವರ್ಗ (ಎ) ಸಾಮಾನ್ಯ ಕ್ಷೇತ್ರದಲ್ಲಿ ೧೩, ಮಹಿಳಾ ಮೀಸಲು ಕ್ಷೇತ್ರದಲ್ಲಿ ೩೭, ಹಿಂದುಳಿದ ವರ್ಗ (ಬಿ) ಸಾಮಾನ್ಯ ಕ್ಷೇತ್ರದಲ್ಲಿ ೧೧, ಮಹಿಳಾ ಕ್ಷೇತ್ರದಲ್ಲಿ ೧, ಸಾಮಾನ್ಯ ಕ್ಷೇತ್ರದ ಸಾಮಾನ್ಯ ವರ್ಗದಲ್ಲಿ ೧೨೬, ಮಹಿಳಾ ಮೀಸಲು ಕ್ಷೇತ್ರದಲ್ಲಿ ೮೪ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.