ಮಡಿಕೇರಿ, ಜ. ೧: ಕೊರೊನಾ ಪರಿಸ್ಥಿತಿಯಿಂದ ಬಂದ್ ಆಗಿದ್ದ ಶಾಲಾ, ಕಾಲೇಜು ಬರೋಬ್ಬರಿ ಎಂಟು ತಿಂಗಳ ಬಳಿಕ ಆರಂಭವಾಯಿತು. ಮನೆಯಲ್ಲಿ ಕಂಪ್ಯೂಟರ್, ಮೊಬೈಲ್ ಎದುರು ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದ ವಿದ್ಯಾರ್ಥಿಗಳು ಹೊಸ ವರ್ಷದ ಮೊದಲ ದಿನ ಉತ್ಸಾಹದಿಂದ ಶಾಲೆಗೆ ಆಗಮಿಸಿದರು. ಹಲವು ತಿಂಗಳ ಬಳಿಕ ಶಾಲೆ ಕಡೆ ಮುಖ ಮಾಡಿದ ವಿದ್ಯಾರ್ಥಿಗಳು ಸ್ನೇಹಿತರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಬೆರೆತಿದ್ದು ವಿಶೇಷವಾಗಿತ್ತು. ಸ್ಯಾನಿಟೈಸರ್ ಬಳಕೆ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು. ತರಗತಿಗಳನ್ನು ಸ್ಯಾನಿಟೈಸ್ ಮಾಡಲಾಗುತಿತ್ತು.

ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಆರಂಭಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಸ್‌ಎಸ್‌ಎಲ್‌ಸಿ ಜಿಲ್ಲಾವಾರು ಇಂದು ಶೇ. ೬೮ ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ. ಸರಕಾರಿ ಶಾಲೆ ಮತ್ತು ಅನುದಾನಿತ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಖಾಸಗಿ ಶಾಲೆಯಲ್ಲಿ ಮಕ್ಕಳ ಪ್ರಮಾಣ ತುಸು ಕಡಿಮೆ ಇದೆ. ಗ್ರಾಮೀಣ ಮತ್ತು ನಗರ ಭಾಗದಲ್ಲಿ ಹಾಜರಾತಿಯಲ್ಲಿ ಹೆಚ್ಚಿನ ವ್ಯತ್ಯಾಸ ಇರಲಿಲ್ಲ. ಬಹುತೇಕ ಸರಕಾರಿ ಶಾಲೆಯಲ್ಲಿ ಮಕ್ಕಳನ್ನು ಸಂಭ್ರಮದಿAದಲೇ ಸ್ವಾಗತಿಸಲಾಗಿದೆ. ಶಾಲೆಯ ಗೇಟ್‌ಗೆ ತಳಿರು ತೋರಣ ಕಟ್ಟಿ, ಸಿಹಿ ಹಂಚಿ ಮಕ್ಕಳನ್ನು ಬರಮಾಡಿ ಕೊಳ್ಳಲಾಗಿದೆ. ಶಾಲೆಯ ಆರಂಭದ ತರಗತಿಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಕೋವಿಡ್ ನಿಯಮ ಪಾಲನೆಯೊಂದಿಗೆ ಪಾಠ ಪ್ರವಚನಗಳು ಕೂಡ ನಡೆದಿದೆ. ವಿವಿಧ ಶಾಲೆಗಳಿಗೆ ಡಿಡಿಪಿಐ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ೫೩೪ ಪ್ರಾಥಮಿಕ ಶಾಲೆಗಳಿದ್ದು, ೧೮೭ ಪ್ರೌಢಶಾಲೆ ಇದೆ. ಒಟ್ಟು ೭೫,೩೭೭ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಎಸ್‌ಎಸ್‌ಎಲ್‌ಸಿಯಲ್ಲಿ ೨೫೦೦ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ೧೬೫೫ ವಿದ್ಯಾರ್ಥಿಗಳು ಹಾಜರಾದರು.

(ಮೊದಲ ಪುಟದಿಂದ) ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ನೇರವಾಗಿ ಬೆಳಗ್ಗಿನಿಂದ ತರಗತಿ ಆರಂಭವಾದರೆ, ಮಧ್ಯಾಹ್ನದ ನಂತರ ವಿದ್ಯಾಗಮ ಮೂಲಕ ೬ ರಿಂದ ೯ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು.

೧೦,೩೩೦ ಪಿಯು ವಿದ್ಯಾರ್ಥಿಗಳಿದ್ದು, ಜಿಲ್ಲೆಯಲ್ಲಿ ೬೫ ಕಾಲೇಜುಗಳಿದೆ. ಇದರಲ್ಲಿ ೧೪ ಸರ್ಕಾರಿ, ೧೩ ಅನುದಾನಿತ, ೩೪ ಅನುದಾನ ರಹಿತ, ೪ ವಸತಿ ಕಾಲೇಜುಗಳಿದೆ. ಶೇ. ೫೦ ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾದರು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ವಿಷ್ಣುಮೂರ್ತಿ ತಿಳಿಸಿದ್ದಾರೆ.

ಶಿಕ್ಷಕರು ಹಾಗೂ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕೊರೊನಾ ಕುರಿತು ಜಾಗೃತಿ ಮೂಡಿಸಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಮಾಸ್ಕ್ ಧರಿಸಲು ಹಾಗೂ ಸ್ಯಾನಿಟೈಸರ್ ಬಳಸುವಂತೆ ಶಿಕ್ಷಕರು ತಿಳಿ ಹೇಳುತ್ತಿದ್ದರು.

ವಿದ್ಯಾರ್ಥಿಗಳನ್ನು ಅಂತರದಲ್ಲಿ ಕೂರಿಸಿ ಬೋಧನೆ ಮಾಡಲಾಯಿತು. ಶಿಕ್ಷಕರು ಕೊರೊನಾ ಪರೀಕ್ಷೆಗೆ ಒಳಗಾಗಿ ನಂತರ ಸೇವೆಗೆ ಹಾಜರಾದರು. ಕಡ್ಡಾಯವಾಗಿ ಪೋಷಕರ ಒಪ್ಪಿಗೆ ಪತ್ರ ತಂದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿತ್ತು.

ವಸತಿ ನಿಲಯಗಳಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ವರದಿ ನೀಡಿದ ಬಳಿಕ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಜಿಲ್ಲೆಯ ವಿವಿಧೆಡೆಗಳಲ್ಲಿ ಇರುವ ವಸತಿ ನಿಲಯಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು.

ಹೊಸ ವರ್ಷದ ಮೊದಲ ದಿನದಂದು ಆರÀಂಭವಾದ ತರಗತಿಗೆ ಸೋಮವಾರದಿಂದ ಮಕ್ಕಳನ್ನು ಕಳುಹಿಸುವ ಇಂಗಿತವನ್ನು ಪೋಷಕರು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಸೋಮವಾರದಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಮಡಿಕೇರಿಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ

ದ್ವಿತೀಯ ಪಿಯುಸಿ ತರಗತಿ ಆರಂಭವಾಗಿರುವ ಹಿನ್ನೆಲೆ, ಮಡಿಕೇರಿಯ ಪದವಿಪೂರ್ವ ಕಾಲೇಜಿನ ಸಿಬ್ಬಂದಿಗಳು ಗೇಟ್ ಬಳಿ ತಳಿರು ತೋರಣ ಕಟ್ಟಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದರು. ಕಾಲೇಜಿನಲ್ಲಿ ಸಕಲ ಸಿದ್ಧತೆಯನ್ನೂ ಮಾಡಲಾಗಿತ್ತು. ದ್ವಿತೀಯ ಪಿಯುಸಿಯಲ್ಲಿ ಒಟ್ಟು ೨೦೩ ವಿದ್ಯಾರ್ಥಿಗಳಿದ್ದು, ೬೯ ವಿದ್ಯಾರ್ಥಿಗಳಷ್ಟೇ ಆಗಮಿಸಿದ್ದರು. ಮೊದಲ ದಿನ ಶೇ. ೩೪ರಷ್ಟು ಮಾತ್ರ ವಿದ್ಯಾರ್ಥಿಗಳು ಹಾಜರಿದ್ದರು. ಅದರಲ್ಲೂ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದದು ಕಂಡುಬAತು.

ನಗರದ ಸಂತ ಮೈಕಲರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶಿಸುವುದಕ್ಕೂ ಮುನ್ನ ಸ್ಯಾನಿಟೈಸೇಷನ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಯ್ತು. ಆರಂಭದ ದಿನವೇ ಶೇ. ೮೦ರಷ್ಟು ವಿದ್ಯಾರ್ಥಿಗಳು ಹಾಜರಾಗಿ ಗಮನ ಸೆಳೆದರು. ೧೦ನೇ ತರಗತಿಯಲ್ಲಿ ೨೦೦ ವಿದ್ಯಾರ್ಥಿಗಳಿದ್ದು, ೧೬೦ ವಿದ್ಯಾರ್ಥಿಗಳು ಹಾಜರಿದ್ದರು.

ಮಧ್ಯಾಹ್ನದವರೆಗೆ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆಯಿತು. ಗ್ರಾಮೀಣ ಪ್ರದೇಶಗಳಲ್ಲಿ ಬಸ್ ವ್ಯವಸ್ಥೆ ಇಲ್ಲದೇ ಹಾಗೂ ವಸತಿ ನಿಲಯಗಳ ಬಗ್ಗೆ ಗೊಂದಲದಿAದ ಕೆಲ ವಿದ್ಯಾರ್ಥಿಗಳು ಹಾಜರಾಗಿಲ್ಲ ಎಂದು ಮಡಿಕೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವಿಜಯನ್ ತಿಳಿಸಿದರು.ಸೋಮವಾರಪೇಟೆ: ಕೊರೊನಾ ಹಿನ್ನೆಲೆ ಮುಚ್ಚಲ್ಪಟ್ಟಿದ್ದ ಸೋಮವಾರಪೇಟೆ ತಾಲೂಕಿನ ಶಾಲೆಗಳು ಇಂದು ಸರ್ಕಾರದ ಮಾರ್ಗಸೂಚಿಯನ್ವಯ ಪುನರಾರಂಭಗೊAಡಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂಗಳನ್ನು ನೀಡಿ ಸ್ವಾಗತ ಮಾಡಿದರು. ಇದರೊಂದಿಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಶಿಕ್ಷಕರು ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು. ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವದು, ಸ್ಯಾನಿಟೈಸರ್ ಹಚ್ಚಿಕೊಳ್ಳುವದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲೂಕಿನಲ್ಲಿ ೧೬೯ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳು, ೩೨ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳು ಇಂದು ಪುನರಾರಂಭಗೊAಡವು. ೬೨ ಖಾಸಗಿ ಶಾಲೆಗಳ ಪೈಕಿ ೨೫ ಶಾಲೆಗಳು ಇಂದು ತೆರೆಯಲ್ಪಟ್ಟವು.

ಉಳಿದಂತೆ ಶಾಲೆಗಳ ಸ್ಯಾನಿಟೈಸೇಷನ್, ಕೊಠಡಿಗಳ ಸ್ವಚ್ಛತಾ ಕಾರ್ಯ ನಡೆದ ನಂತರ ಶಾಲೆಗಳು ತೆರೆಯಲು ಖಾಸಗಿ ಶಾಲೆಗಳು ಸಿದ್ಧತೆ ಕೈಗೊಂಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಅವರು ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

ಸೋಮವಾರಪೇಟೆ ಪಟ್ಟಣ ಸುತ್ತಮುತ್ತಲಲ್ಲಿರುವ ಬಹುತೇಕ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು ಇಂದು ತೆರೆಯಲ್ಪಟ್ಟಿದ್ದು, ಒಟ್ಟಾರೆ ತಾಲೂಕಿನಾದ್ಯಂತ ಶೇ. ೭೯ರಷ್ಟು ವಿದ್ಯಾರ್ಥಿಗಳ ಹಾಜರಾತಿ ಕಂಡುಬAತು.

ಕ್ಷೇತ್ರಶಿಕ್ಷಣಾಧಿಕಾರಿ ಪಾಂಡು ಅವರು ತಾಲೂಕಿನ ಸುಂಟಿಕೊಪ್ಪ, ಗುಡ್ಡೆಹೊಸೂರು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ. ೪೮ ಇತ್ತು. ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ನೀಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಹೇಳಿ, ಥರ್ಮಲ್ ಸ್ಕಾö್ಯನಿಂಗ್ ಮಾಡಿದ ನಂತರ ಕೊಠಡಿಯ ಒಳಗೆ ಪ್ರವೇಶ ಕಲ್ಪಿಸಲಾಯಿತು.

ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಶೇ. ೪೩ ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಸಂತ ಜೋಸೆಫರ ಪದವಿ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಶೇ.೮೦ರಷ್ಟು ಹಾಜರಾತಿಯಿತ್ತು. ಬಿಟಿಸಿಜಿ ಕಾಲೇಜಿನಲ್ಲಿ ಅಂತಿಮ ಪದವಿ ತರಗತಿಯ ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು.

೯ ತಿಂಗಳ ಗೃಹವಾಸದ ನಂತರ ಇಂದು ವಿದ್ಯಾರ್ಥಿಗಳು ತರಗತಿಗಳಿಗೆ ಸಂಭ್ರಮದಿAದ ಆಗಮಿಸಿದ್ದರು. ಶಾಲೆಯ ಒಳಗೆ ಮಾತ್ರ ಸಾಮಾಜಿಕ ಅಂತರ ಕಂಡುಬAದರೆ, ಶಾಲೆಯ ಹೊರಭಾಗ, ರಸ್ತೆಗಳಲ್ಲಿ ತಮ್ಮ ಸ್ನೇಹಿತರೊಂದಿಗೆ ಗುಂಪು ಗುಂಪಾಗಿ ತೆರಳುತ್ತಿದ್ದುದು ಕಂಡುಬAತು.ಹಾಗೂ ಖಾಸಗಿ ಶಾಲಾ ಕಾಲೇಜುಗಳು ಇಂದು ತೆರೆಯಲ್ಪಟ್ಟಿದ್ದು, ಒಟ್ಟಾರೆ ತಾಲೂಕಿನಾದ್ಯಂತ ಶೇ. ೭೯ರಷ್ಟು ವಿದ್ಯಾರ್ಥಿಗಳ ಹಾಜರಾತಿ ಕಂಡುಬAತು.

ಕ್ಷೇತ್ರಶಿಕ್ಷಣಾಧಿಕಾರಿ ಪಾಂಡು ಅವರು ತಾಲೂಕಿನ ಸುಂಟಿಕೊಪ್ಪ, ಗುಡ್ಡೆಹೊಸೂರು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ. ೪೮ ಇತ್ತು. ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ನೀಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಹೇಳಿ, ಥರ್ಮಲ್ ಸ್ಕಾö್ಯನಿಂಗ್ ಮಾಡಿದ ನಂತರ ಕೊಠಡಿಯ ಒಳಗೆ ಪ್ರವೇಶ ಕಲ್ಪಿಸಲಾಯಿತು.

ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಶೇ. ೪೩ ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಸಂತ ಜೋಸೆಫರ ಪದವಿ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಶೇ.೮೦ರಷ್ಟು ಹಾಜರಾತಿಯಿತ್ತು. ಬಿಟಿಸಿಜಿ ಕಾಲೇಜಿನಲ್ಲಿ ಅಂತಿಮ ಪದವಿ ತರಗತಿಯ ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು.

೯ ತಿಂಗಳ ಗೃಹವಾಸದ ನಂತರ ಇಂದು ವಿದ್ಯಾರ್ಥಿಗಳು ತರಗತಿಗಳಿಗೆ ಸಂಭ್ರಮದಿAದ ಆಗಮಿಸಿದ್ದರು. ಶಾಲೆಯ ಒಳಗೆ ಮಾತ್ರ ಸಾಮಾಜಿಕ ಅಂತರ ಕಂಡುಬAದರೆ, ಶಾಲೆಯ ಹೊರಭಾಗ, ರಸ್ತೆಗಳಲ್ಲಿ ತಮ್ಮ ಸ್ನೇಹಿತರೊಂದಿಗೆ ಗುಂಪು ಗುಂಪಾಗಿ ತೆರಳುತ್ತಿದ್ದುದು ಕಂಡುಬAತು.ಪೊನ್ನAಪೇಟೆ: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ಎರಡನೇ ಹಂತದ ವಿದ್ಯಾಗಮ ಕಾರ್ಯಕ್ರಮ ಯೋಜನೆಗೆ ಸಂಭ್ರಮದ ಚಾಲನೆ ನೀಡುವ ಮೂಲಕ ಅತಿಥಿಗಳು ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಂಡರು.

ಶಾಲೆಯ ಮುಖ್ಯ ದ್ವಾರವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶಾಲೆಗೆ ಬಹಳ ದಿನಗಳ ನಂತರ ಖುಷಿಯಿಂದಲೇ ಆಗಮಿಸಿದ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ, ಸಿಹಿ ಹಂಚಿ, ಬ್ಯಾಂಡ್ ವಾದನದೊಂದಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತ ಗಣೇಶ್ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಶುಭ ಕೋರಿದರು. ಪೊನ್ನಂಪೇಟೆ ಕ್ಲಸ್ಟರ್ ಸಿಆರ್‌ಪಿ ತಿರುನೆಲ್ಲಿಮಾಡ ಜೀವನ್, ಶಾಲೆಯ ಶಿಕ್ಷಕರಾದ ಫಿಲೋಮಿನಾ, ಝಾನ್ಸಿ, ಶಕೀಲಬಾನು, ಗಂಗಮ್ಮ, ಮಂಗಳಾAಗಿ, ರೋಜಿ, ಗಂಗಾಮಣಿ, ವಿನಿತ, ನಿಂಗರಾಜು, ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಹಾಗೂ ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು. ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜುವಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂದಿನಿAದ ತರಗತಿ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಯಿತು.ಸಿದ್ದಾಪುರ: ಸಿದ್ದಾಪುರ, ನೆಲ್ಯಹುದಿಕೇರಿ, ಅಮ್ಮತ್ತಿ ಭಾಗದಲ್ಲಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಹಾಗೂ ಪ್ರೌಢಶಾಲೆಗಳು ಆರಂಭಗೊAಡಿತು. ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತರಗತಿಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಕಾಲೇಜಿನ ಉಪನ್ಯಾಸಕರುಗಳಾದ ಜೆಸ್ಟಿನ್ ಕೊರಿಯಾ, ಲೋಕೇಶ್, ಭಾಗ್ಯಜ್ಯೋತಿ ಹಾಗೂ ಅಧ್ಯಾಪಕ ಅನಿಲ್ ಮಕ್ಕಳ ಕೋವಿಡ್-೧೯ ತಪಾಸಣೆಯನ್ನು ಮಾಡಿದರು. ತರಗತಿಗಳಲ್ಲಿ ಶೇ. ೫೦ ರಷ್ಟು ಮಕ್ಕಳು ಆಗಮಿಸಿ ಶಾಲಾ ಕೊಠಡಿಗಳಲ್ಲಿ ಅಂತರ ಕಾಯ್ದುಕೊಂಡರು.

ಅಮ್ಮತ್ತಿ ಭಾಗದ ಒಂಟಿಯAಗಡಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ವಿದ್ಯಾಗಮವನ್ನು ಮಾಡಲಾಯಿತು. ಅಲ್ಲದೇ ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ಹಂಚಲಾಯಿತು. ಹೂವುಗಳನ್ನು ನೀಡಿ ಶಿಕ್ಷಕರು ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡರು. ಕೊಂಡAಗೇರಿ, ಹಚ್ಚಿನಾಡು, ದೇವಣಿಗರಿ, ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಕೋವಿಡ್-೧೯ ಪರಿಶೀಲನೆ ಮಾಡಿ ಮಕ್ಕಳನ್ನು ಬರಮಾಡಿಕೊಂಡರು. ಸಿದ್ದಾಪುರ ಹಾಗೂ ಸುತ್ತಮುತ್ತಲಿನಲ್ಲಿರುವ ಖಾಸಗಿ ಶಾಲಾ ಕಾಲೇಜುಗಳು ಕೂಡ ಇಂದಿನಿAದ ಆರಂಭಗೊAಡಿತ್ತು. ಕೆಲವು ಶಾಲೆಗಳ ಗೇಟ್‌ನ್ನು ಅಲಂಕರಿಸಲಾಗಿತ್ತು. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಸಂತಸದಿAದ ತೆರಳುತ್ತಿರುವ ದೃಶ್ಯ ಕಂಡು ಬಂದಿತು.ಸುAಟಿಕೊಪ್ಪ: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊAಡಿದ್ದು ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಗೊಂಡಿತ್ತು. ಸುಂಟಿಕೊಪ್ಪ ಪದವಿ ಪೂರ್ವ ಕಾಲೇಜಿನ ಒಟ್ಟು ಸಂಖ್ಯಾ ಬಲದಲ್ಲಿ ಶೇಕಡ ೩೩% ಮಕ್ಕಳು ಆಗಮಿಸಿದರು,ಸಂತಮೇರಿ ಪದವಿ ಕಾಲೇಜು ೨೩ ಗರಗಂದೂರಿನ ಡಿ.ಚೆನ್ನಮ್ಮ ಜೂನಿಯರ್ ಕಾಲೇಜಿನಲ್ಲಿ ೫೦ ಮಂದಿ ವಿದ್ಯಾರ್ಥಿಗಳು ಹಾಜರಾದರು. ತಾ.೩೧ ರಂದು ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲಾ ಶಾಲಾ ಕಾಲೇಜುಗಳನ್ನು ಸ್ಯಾನಿಟೈಸರ್‌ಗೊಳಿಸಲಾಗಿತ್ತು.

ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ ಬರಮಾಡಿಕೊಂಡರು. ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಅತ್ಯಂತ ಲವಲವಿಕೆಯಿಂದ ಶಾಲಾವರಣ ಪ್ರವೇಶಿಸಿದರು. ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯಲ್ಲಿ ೧೦ನೇ ತರಗತಿಯ ೧೮ ವಿದ್ಯಾರ್ಥಿಗಳು ಮಕ್ಕಳು ಮಾತ್ರ ಹಾಜರಾದರು. ಕೊಡಗರಹಳ್ಳಿಯ ಸುಂಟಿಕೊಪ್ಪನಾಡು ಪ್ರೌಢಶಾಲೆಯಲ್ಲಿ ೧೫ ವಿದ್ಯಾರ್ಥಿಗಳು ಮಕ್ಕಳು ಆಗಮಿಸಿದರು. ಕೊಡಗರಹಳ್ಳಿ ಶಾಂತಿನಿಕೇತನ ೬೭, ಡಿ.ಚೆನ್ನಮ್ಮ ಜೂನಿಯರ್ ಕಾಲೇಜಿನ ೧೦ನೇ ತರಗತಿಗೆ ೪೦ ವಿದ್ಯಾರ್ಥಿಗಳು, ಕಾನ್‌ಬೈಲ್ ಪ್ರೌಢಶಾಲೆ, ೭ನೇ ಹೊಸಕೋಟೆ ಪ್ರೌಢಶಾಲೆ ಅರ್ಧದಷ್ಟು ವಿದ್ಯಾರ್ಥಿಗಳು ಮಾತ್ರ ಹಾಜರಾದರು.

- ಹೆಚ್. ಜೆ. ರಾಕೇಶ್, ವಿಜಯ್, ಡಿ.ಎಂ.ಆರ್., ಹೆಚ್.ಕೆ. ಜಗದೀಶ್, ಚನ್ನನಾಯಕ್, ನರೇಶ್ಚಂದ್ರ, ವಾಸು, ರಾಜು ರೈ, ಚಿತ್ರ: ಲಕ್ಷಿö್ಮÃಶ್‌ಶನಿವಾರಸಂತೆ : ಶನಿವಾರಸಂತೆ ಕ್ಲಸ್ಟರ್ ವ್ಯಾಪ್ತಿಯ ೮ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳನ್ನು ಆರಂಭಿಸಲಾಯಿತು.

೬ ರಿಂದ ೧೦ನೇ ತರಗತಿವರೆಗಿನ ವಿದ್ಯಾರ್ಥಿಗಳು ವೇಳಾಪಟ್ಟಿ ಅನುಸಾರ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಶಾಲೆಗೆ ಹಾಜರಾದರು. ಆ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ಮಾಡಿ, ಪುಷ್ಪಗುಚ್ಚ ನೀಡಿ ಸ್ವಾಗತಿಸಲಾಯಿತು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ೧೫, ಭಾರತಿ ವಿದ್ಯಾಸಂಸ್ಥೆಗೆ ೩೨, ವಿಘ್ನೇಶ್ವರ ಪ್ರೌಢಶಾಲೆಗೆ ೩೬, ಸುಪ್ರಜ ಗುರುಕುಲಕ್ಕೆ ೧೬, ಕಾವೇರಿ ವಿದ್ಯಾಸಂಸ್ಥೆಗೆ ೧೭, ಬಾಪೂಜಿ ವಿದ್ಯಾಸಂಸ್ಥೆಗೆ ೧೫ ಹಾಗೂ ಚಿಕ್ಕಕೊಳತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ೧೦ ವಿದ್ಯಾರ್ಥಿಗಳು ಹಾಜರಾದರು ಎಂದು ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ತಿಳಿಸಿದರು. ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಮಾಸ್ಕ್ ಧರಿಸಿ ಕರ್ತವ್ಯ ನಿರ್ವಹಿಸಿದರು.