೪ಮಡಿಕೇರಿ, ಡಿ. ೩೧ : ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಕಳೆದ ೬ ದಿನಗಳಿಂದ ನಡೆಯುತ್ತಿದ್ದ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊAಡಿತು. ವರ್ಷದ ಕೊನೆಯ ದಿನವಾದ ತಾ.೩೧ ರ ಬೆಳಗ್ಗೆ ೬ ರಿಂದ ಗಣಪತಿ ಹೋಮ, ಪುನರ್ವಸು ನಕ್ಷತ್ರ ಮಕರ ಲಗ್ನದಲ್ಲಿ ಅಷ್ಟಬಂಧ ಲೇಪನ, ಪರಿಕಲಾಶಾ ಭಿಷೇಕ, ಮೀನ ಲಗ್ನದಲ್ಲಿ ಬ್ರಹ್ಮಕಲಶಾ ಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆಗಳು ಶ್ರದ್ಧಾಭಕ್ತಿ ಯಿಂದ ನೆರವೇರಿತು. (ಮೊದಲ ಪುಟದಿಂದ) ಡಿ ೨೬ ರಿಂದ ಆರಂಭಗೊAಡ ಧಾರ್ಮಿಕ ಕಾರ್ಯ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ದೇವಾಲಯದಲ್ಲಿ ಹೆಚ್ಚಿನ ಭಕ್ತಾದಿಗಳು ಕಂಡು ಬಂದರು. ಕೋವಿಡ್ ಮಾರ್ಗಸೂಚಿಯಂತೆ ಮಾಸ್ಕ್ ಧರಿಸಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಸುಮಾರು ೬೦೦ ಮಂದಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಸದಸ್ಯರುಗಳು ತೊಡಗಿಸಿ ಕೊಂಡಿದ್ದರು.
ಇದೀಗ ಅಷ್ಟಬಂಧ ಲೇಪಿಸಿರುವದರಿಂದ ಇನ್ನು ೪೮ ದಿನಗಳ ಕಾಲ ದೇವಾಲಯದಲ್ಲಿ ಶಿವಲಿಂಗ ಹಾಗೂ ಇತರ ವಿಗ್ರಹಗಳಿಗೆ ಯಾವದೇ ಅಭಿಷೇಕ ನಡೆಸುವಂತಿಲ್ಲ. ೪೮ ದಿನ ಕಳೆದು ದೃಢ ಕಲಶವಾದ ಬಳಿಕ ಅಭಿಷೇಕ ಸೇವೆಗಳನ್ನು ಭಕ್ತಾದಿಗಳು ಮಾಡಿಸಬಹುದಾಗಿದೆ ಎಂದು ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ತಿಳಿಸಿದ್ದಾರೆ.