ಕೂಡಿಗೆ, ಡಿ. ೩೧: ಕುಶಾಲನಗರ ಹೋಬಳಿಯ ತೊರೆನೂರು ಗ್ರಾಮದಲ್ಲಿ ಶ್ರೀ ಸತ್ಯಮ್ಮ ದೇವಿಯ ಧಾರ್ಮಿಕ ಉತ್ಸವ ಸಮಿತಿ ವತಿಯಿಂದ ಶ್ರೀ ಸತ್ಯಮ್ಮ ದೇವಿಯ ೧೨ನೇ ವರ್ಷದ ಧಾರ್ಮಿಕ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ಕೋವಿಡ್ - ೧೯ ಹಿನ್ನೆಲೆಯಲ್ಲಿ ಭಕ್ತಾದಿಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಉತ್ಸವದಲ್ಲಿ ಪಾಲ್ಗೊಂಡರು.
ತೊರೆನೂರು ವಿರಕ್ತಮಠದ ಪರಿಸರದ ಕಾವೇರಿ ನದಿ ಬಳಿಯಿಂದ ಆರಂಭಗೊAಡ ದೇವರ ಉತ್ಸವವು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿತು. ಬಳಿಕ ಸತ್ಯಮ್ಮ ಕುಟುಂಬಸ್ಥರ ಗದ್ದುಗೆ ಬಳಿ ಸಂಪನ್ನಗೊAಡಿತು.
ಮೆರವಣಿಗೆಯಲ್ಲಿ ವೀರಗಾಸೆ ನೃತ್ಯವು ಗಮನ ಸೆಳೆಯಿತು. ಮೆರವಣಿಗೆಯುದ್ದಕ್ಕೂ ನಂದಿಧ್ವಜ ಕಂಬದ ಕುಣಿತ ಮೆರಗು ನೀಡಿತು. ೧೦೮ ಕಲಶ ಹೊತ್ತ ಮಹಿಳೆಯರು ಸರದಿ ಸಾಲಿನಲ್ಲಿ ಸಾಗಿದರು.
ನಂತರ ಗದ್ದುಗೆಯಲ್ಲಿ ನಡೆದ ಹೋಮ- ಹವನ ಮತ್ತಿತರ ಧಾರ್ಮಿಕ ಕೈಂಕರ್ಯಗಳನ್ನು ಸೋಮವಾರಪೇಟೆಯ ಬಸವಕುಮಾರ್ ಸ್ವಾಮಿ ನೇತೃತ್ವದಲ್ಲಿ ನೆರವೇರಿತು.
ಧಾರ್ಮಿಕ ಉತ್ಸವದಲ್ಲಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ, ಜಿಲ್ಲಾ ವೀರಶೈವ ಜಂಗಮ ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ವೇದಬ್ರಹ್ಮ ಕೆ.ಬಿ. ಸೋಮಶೇಖರ್ ಶಾಸ್ತಿç, ಜಿಲ್ಲಾ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ. ಶಿವಪ್ಪ, ಪ್ರಧಾನ ಕಾರ್ಯದರ್ಶಿ ಟಿ.ಎಸ್. ಶಾಂಭಮೂರ್ತಿ, ಸಹ ಕಾರ್ಯದರ್ಶಿ ಹೆಚ್.ಪಿ. ಉದಯ್ ಕುಮಾರ್, ಉತ್ಸವ ಸಮಿತಿಯ ಪ್ರಮುಖರಾದ ಟಿ.ಬಿ. ಚಂದ್ರಶೇಖರ್, ಟಿ.ವಿ. ಶಿವಮೂರ್ತಿ, ಟಿ.ಪಿ. ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.