ಶ್ರೀಮಂಗಲ, ಡಿ. ೩೧: ಯುಕೊ ಸಂಘಟನೆಯ ವತಿಯಿಂದ ಆಚರಿಸುವ ‘ಯುಕೊ ಕೊಡವ ಮಂದ್ ನಮ್ಮೆ’ಯನ್ನು ತಾ. ೧೨ ರಂದು ಬೈರನಾಡ್ ಮಂದ್‌ನ ಆಶೀರ್ವಾದದೊಂದಿಗೆ ಅಮ್ಮತ್ತಿ ಒಂಟಿಯAಗಡಿಯ ಪಚ್ಚಾಟ್ ಊರ್ ಮಂದ್‌ನಲ್ಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ತಾ. ೧೨ ರಂದು ಏಳನೇ ವರ್ಷದ ಮಂದ್ ನಮ್ಮೆಯನ್ನು ಕೋವಿಡ್ ನಿಯಾಮಾವಳಿಗಳನ್ನು ಅನುಸರಿಸಿಕೊಂಡು ಸರಳವಾಗಿ ಹಾಗೂ ಸಾಂಪ್ರಾದಾಯಿಕವಾಗಿ ಆಚರಿಸಲಾಗುವುದು ಎಂದು ಯುನೈಟೆಡ್ ಕೊಡವ ಅರ್ಗನೈಸೇಷನ್ ಟ್ರಸ್ಟ್ನ (ಯುಕೊ) ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾಹಿತಿ ನೀಡಿದರು.

ಪೊನ್ನಂಪೇಟೆ ನಡೆದ ಸಂಘಟನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮಂಜು ಚಿಣ್ಣಪ್ಪ ಅವರು, ಕೊಡವ ಮಂದ್ ನಮ್ಮೆ ಆಚರಣೆಯ ಹಿಂದೆ ಕೊಡವ ಸಂಸ್ಕೃತಿಯನ್ನು ಉಳಿಸಿ ಪೋಷಿಸುವ ಸ್ಪಷ್ಟ ಉದ್ದೇಶವಿದ್ದು, ಕೊಡವ ಸಂಸ್ಕೃತಿಯಲ್ಲಿನ ವೈವಿದ್ಯತೆಯನ್ನು ಪರಿಚಯಿಸುವುದರೊಂದಿಗೆ ಯುವ ಪೀಳಿಗೆಯನ್ನು ಕೊಡವ ಸಂಸ್ಕೃತಿಯತ್ತ ಆಕರ್ಷಿಸುವ ಯೋಜನೆ ಇದಾಗಿದ್ದು, ಮುಂದೊAದು ದಿನ ಪ್ರಪಂಚದಾದ್ಯAತ ಇರುವ ಕೊಡವರು ತಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಮಾದರಿಯಾಗಲಿದೆ ಎಂದು ಅವರು ತಿಳಿಸಿದರು.

‘ಕೊಡವ ಮಂದ್ ನಮ್ಮೆ’ ಆಚರಣೆ ಪ್ರಾರಂಭವಾದಾಗಿನಿAದ ಅನೇಕ ಮುಚ್ಚಲ್ಪಟ್ಟಿದ್ದ ಪಾರಂಪರಿಕ ಮಂದ್‌ಗಳು ಪುನಃ ತೆರೆಯಲ್ಪಟ್ಟಿದೆ. ಪ್ರಸಕ್ತ ಸಾಲಿನಲ್ಲಿ ೪೫ ವರ್ಷಗಳಿಂದ ಮುಚ್ಚಿ ಹೋಗಿದ್ದ ನಾಲ್ಕೇರಿ ಊರ್ ಮಂದ್ ಮತ್ತು ೩೫ ವರ್ಷಗಳಿಂದ ಮುಚ್ಚಿ ಹೋಗಿದ್ದ ಬೈರಂಬಾಡದ ಬೈರನಾಡ್ ಮಂದ್ ಪುನರಾರಂಭವಾಗಿದೆ ಎಂದು ಮಾಹಿತಿ ನೀಡಿದರು.

ಈ ವರ್ಷದ ಮಂದ್ ನಮ್ಮೆಯಲ್ಲಿ ಕೋವಿಡ್ ೧೯ ಮುಂಜಾಗ್ರತೆಯ ದೃಷ್ಠಿಯಿಂದ ಕೊಡವ ಮಂದ್‌ಗಳ ನಡುವೆ ಏರ್ಪಾಡಿಸಲಾಗುತ್ತಿದ್ದ ಕೋಲಾಟ್, ಬೊಳಕಾಟ್, ಉಮ್ಮತ್ತಾಟ್ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರುತ್ತದೆ.

ಪರೆಯಕಳಿ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಕೊಂಬ ಮೀಸೆರ ಬಂಬೊ, ಬೋಜಿ ಜಡೆರ ಬೋಜಕ್ಕ, ಬೋಜಿ ಜಡೆರ ಬೋಜಿ ಮೋವ ಎಂಬ ಸ್ಪರ್ಧೆ ನಡೆಯಲಿದೆ. ಇದಲ್ಲದೇ ವಿಶೇಷವಾಗಿ ಕೊಡವರ ಐತಿಹಾಸಿಕ ಹಾಗೂ ಪಾರಂಪರಿಕ ಬದುಕನ್ನು ವೇದಿಕೆಯ ಮೇಲೆ ಪ್ರದರ್ಶನಗೊಳ್ಳಲಿದೆ. ‘ಕೊಡವಾಮೆಲ್ ಪಳೆಯಾಮೆರ ಬೋಜ’ ಎಂಬ ವಿಶಿಷ್ಟವಾದ ರ‍್ಯಾಂಪ್ ಶೋವನ್ನು ಆಯೋಜಿಸಲಾಗಿದೆ. ಸ್ಪರ್ಧಿಸುವ ಮಂದ್ ಹಾಗೂ ತಂಡಗಳು ಮೊದಲೇ ನೋಂದಾಯಿಸಿಕೊಳ್ಳಬೇಕೆAದು ತಿಳಿಸಿದ್ದಾರೆ.

ಸಭೆಯಲ್ಲಿ ನೆಲ್ಲಮಕ್ಕಡ ಮಾದಯ್ಯ, ಚೆಪ್ಪುಡಿರ ಸುಜುಕರುಂಬಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಮದ್ರೀರ ಮಹೇಶ್ ಮುತ್ತಪ್ಪ ಹಾಜರಿದ್ದರು.