ಕುಶಾಲನಗರ, ಡಿ. ೩೦: ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಗ್ರಾಮಪಂಚಾಯ್ತಿ ೨೦೨೦ರ ಚುನಾವಣೆಯ ಮತ ಎಣಿಕೆ ಕಾರ್ಯ ಕುಶಾಲನಗರ ದಲ್ಲಿ ಬಹುತೇಕ ಸುಸೂತ್ರವಾಗಿ ನಡೆದರೂ ಕೊನೆ ಗಳಿಗೆಯಲ್ಲಿ ಹಲವು ಗೊಂದಲಗಳು ಕಂಡುಬAದವು. ನಿಗದಿತ ಸಮಯದಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭಗೊAಡರೂ ನಂತರದ ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಎಲ್ಲಾ ನೀತಿ ನಿಯಮಗಳು ಗಾಳಿಗೆ ತೂರಿದಂತೆ ಕಂಡುಬAತು. ತಕ್ಷಣ ಕಾರ್ಯಪ್ರವೃತ್ತರಾದ

(ಮೊದಲ ಪುಟದಿಂದ) ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ತಹಬದಿಗೆ ತರುವಲ್ಲಿ ಯಶಸ್ವಿಯಾಗುವುದರೊಂದಿಗೆ ಎಣಿಕೆ ಕಾರ್ಯ ನಡೆಯಿತು.

ಈ ಬಾರಿ ಮತ ಎಣಿಕೆಯನ್ನು ಕುಶಾಲನಗರದ ಹಾರಂಗಿ ರಸ್ತೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ನಡೆಸಿದರೂ ಕೆಲವು ಅವ್ಯವಸ್ಥೆಗಳು ಅತಿರೇಕಕ್ಕೆ ತಿರುಗಿ ಅಭ್ಯರ್ಥಿಯೊಬ್ಬ ಗಾಯ ಗೊಳ್ಳುವುದರೊಂದಿಗೆ ಹಲವರಿಗೆ ಅಲ್ಪಸ್ವಲ್ಪ ಘಾಸಿ ಉಂಟಾದ ದೃಶ್ಯಗಳು ಕಂಡುಬAದವು.

ಸೋಮವಾರಪೇಟೆ ತಾಲೂಕಿನ ೪೦ ಗ್ರಾಪಂಗಳ ೪೮೩ ಜನಪ್ರತಿನಿಧಿಗಳ ಆಯ್ಕೆಗೆ ಸ್ಪರ್ಧಿಸಿದ ೧೪೪೮ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಮತ ಎಣಿಕೆ ಸಂದರ್ಭ ತಾಲೂಕಿನ ಎಲ್ಲೆಡೆಗಳಿಂದ ಆಗಮಿಸಿದ ಅಭ್ಯರ್ಥಿಗಳ ಬೆಂಬಲಿಗರ ಸಂಖ್ಯೆ ಒತ್ತಡದಿಂದ ಪ್ರಾರಂಭದಲ್ಲಿ ಕೆಲವು ಗೊಂದಲಗಳು ಗೋಚರಿಸಿದವು.

ಬೆಳಗ್ಗೆ ೮ ಗಂಟೆಗೆ ಪ್ರಾರಂಭಗೊAಡ ಅಂಚೆ ಮತ ಎಣಿಕೆ ನಂತರ ೩೮ ಕೊಠಡಿಗಳಲ್ಲಿ ಪ್ರತಿ ಗ್ರಾಪಂ ಕ್ಷೇತ್ರದ ಮತ ಪೆಟ್ಟಿಗೆಗಳನ್ನು ಒಯ್ಯುವುದರೊಂದಿಗೆ ಎಣಿಕೆ ಕಾರ್ಯ ನಡೆದಿದೆ. ಅಭ್ಯರ್ಥಿಗಳ ಸಂಖ್ಯೆಯ ಒತ್ತಡ ಹೆಚ್ಚಾಗಿದ್ದ ಕ್ಷೇತ್ರಗಳ ಎಣಿಕೆ ಕಾರ್ಯವನ್ನು ಪ್ರತ್ಯೇಕ ಕೊಠಡಿಗಳಲ್ಲಿ ನಡೆಸಲಾಯಿತು. ಎಲ್ಲೆಡೆಗಳಿಂದ ಬಂದ ಅಭ್ಯರ್ಥಿಗಳು, ಏಜೆಂಟರು ಕೊಠಡಿಗಳನ್ನು ಹುಡುಕಾಟದಲ್ಲಿ ತೊಡಗಿದ್ದು ಕಂಡುಬAದು ಇನ್ನೊಂದೆಡೆ ಅಭ್ಯರ್ಥಿಗಳ ಸಾವಿರಾರು ಸಂಖ್ಯೆಯಲ್ಲಿ ನೆರೆದ ಬೆಂಬಲಿಗರು ಏಕಾಏಕಿ ಮತದಾನ ಕೇಂದ್ರದೊಳಗೆ ನುಗ್ಗಲು ಪ್ರಾರಂಭಿಸಿದರು. ಈ ಸಂದರ್ಭ ಪೊಲೀಸರು ಅವರನ್ನು ಹಿಂತೆರಳುವAತೆ ಸೂಚಿಸಿದ ಸಂದರ್ಭ ಹೆಬ್ಬಾಲೆ ಗ್ರಾಪಂ ಅಭ್ಯರ್ಥಿ ಚಂದ್ರಹಾಸ ಎಂಬವರು ಕಾಲೇಜಿನ ಆವರಣದಲ್ಲಿದ್ದ ಗುಂಡಿಯೊAದಕ್ಕೆ ಆಯತಪ್ಪಿ ಬಿದ್ದು ಕಾಲು ಗಾಯವಾದರೆ ಇನ್ನೊಬ್ಬರು ಮಹಿಳೆಗೂ ಕೂಡ ಗಾಯ ಉಂಟಾಯಿತು. ಚಂದ್ರಹಾಸ ಅವರನ್ನು ತಕ್ಷಣ ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ ಕರೆ ತರಲಾಯಿತು. ಈ ಸಂದರ್ಭ ಆವರಣದೊಳಗೆ ಬರಲು ಹವಣಿಸುತ್ತಿದ್ದ ಅಭ್ಯರ್ಥಿಗಳು, ಏಜೆಂಟರುಗಳು ಒಳಬರಲು ಪರದಾಡಬೇಕಾದ ಪರಿಸ್ಥಿತಿ ಕೂಡ ಸೃಷ್ಠಿಯಾಯಿತು. ಪೊಲೀಸರು ಮತ್ತು ಹಲವರ ನಡುವೆ ಮಾತಿನ ಚಕಮಕಿ ಕೂಡ ಉಂಟಾಯಿತು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಮತ್ತಿತರ ಅಧಿಕಾರಿಗಳು ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಈ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಆದೇಶ ನೀಡಿದರು. ಜನರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸುವಂತೆ ಕೂಡ ಸೂಚನೆ ನೀಡಿ ಸ್ವಲ್ಪಕಾಲ ಮತ ಎಣಿಕೆ ಕೇಂದ್ರದ ಅಧಿಕಾರಿಗಳಾದ ಉಪವಿಭಾಗಾಧಿಕಾರಿ ಈಶ್ವರ್‌ಕುಮಾರ್ ಖಂಡು, ತಾಲೂಕು ತಹಶೀಲ್ದಾರ್ ಗೋವಿಂದರಾಜ್ ಮತ್ತು ನೋಡಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಎಣಿಕೆ ಕೇಂದ್ರಕ್ಕೆ ಆಗಮಿಸಿದ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಸುಮಾರು ಮೂರು ಗಂಟೆಗಳ ಕಾಲ ಮತ ಎಣಿಕೆ ಕೇಂದ್ರದಲ್ಲಿದ್ದು ಕೆಲವು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಅಪ್ಪಚ್ಚುರಂಜನ್, ಎಣಿಕೆ ಕಾರ್ಯ ಅಚ್ಚುಕಟ್ಟಾಗಿ ನಡೆಯುತ್ತಿದೆ. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಜನರಿಗೆ ಉಂಟಾಗಿರುವ ಸಮಸ್ಯೆಗಳನ್ನು ಸರಿಪಡಿಸಲು ಸೂಚಿಸಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಗಳಿಸುವುದರೊಂದಿಗೆ ಶೇ.೮೦ ರಷ್ಟು ಗ್ರಾಪಂ ಸದಸ್ಯರ ಗೆಲವು ನಿಶ್ಚಿತ ಎಂದರು.

ಉಳಿದAತೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಬಿ.ಎಸ್.ಅನಂತಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಜೆಡಿಎಸ್ ಜಿಲ್ಲಾ ಪ್ರಮುಖ ಇಸಾಖ್ ಖಾನ್ ಮತ್ತಿತರ ಪ್ರಮುಖರು ಕೂಡ ಕೇಂದ್ರಕ್ಕೆ ಭೇಟಿ ನೀಡಿದರು. ಕೆಲವೊಂದು ಕ್ಷೇತ್ರದ ಮತ ಎಣಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮರುಎಣಿಕೆ ಕೂಡ ನಡೆಯಿತು. -ಚಂದ್ರಮೋಹನ್