ಸುಂಟಿಕೊಪ್ಪ, ಡಿ.೩೦: ಕಂಬಿಬಾಣೆ ಬೂದಾನ ಪೈಸಾರಿಯ ನಿವಾಸಿ ಸರೋಜ ಎಂಬವರ ಮನೆಯ ಅಡುಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯ ಮೇಲ್ಚಾವಣಿ ಸೇರಿದಂತೆ ಗೃಹ ಉಪಯೋಗಿ ವಸ್ತುಗಳು ಹಾನಿಯಾಗಿರುವ ಘಟನೆ ನಡೆದಿದೆ. ಬೂದಾನ ಪೈಸಾರಿ ನಿವಾಸಿಯಾದ ಸರೋಜ ಅವರ ಮಗ ಮಣಿ ಎಂಬವರು ಮನೆಯಲ್ಲಿ ವಾಸವಾಗಿದ್ದು, ಇಂದು ಎಂದಿನAತೆ ಮನೆಯ ಅಡುಗೆ ಕೆಲಸ ಮುಗಿಸಿ ಮನೆಯಿಂದ ಕೂಲಿ ಕೆಲಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯ ಮೇಲ್ಚಾವಣಿ ಹಾರಿ, ಗೋಡೆಗಳು ಬಿರುಕು ಬಿಟ್ಟಿದ್ದು, ಮನೆಯ ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಧÀ್ವಂಸಗೊAಡಿದೆ. ಸಕಾಲದಲ್ಲಿ ಸ್ಥಳೀಯ ನಿವಾಸಿಗಳು ಬೆಂಕಿಯನ್ನು ನಂದಿಸದಿದ್ದಲ್ಲಿ ಭಾರೀ (ಮೊದಲ ಪುಟದಿಂದ) ಅನಾಹುತ ಸಂಭವಿಸುವ ಸಾಧ್ಯತೆಯು ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಿಲಿಂಡರ್ ಸ್ಫೋಟದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಪೊಲೀಸ್ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.