ಸೋಮವಾರಪೇಟೆ, ಡಿ. ೩೦: ಕವಿ ಹೃದಯ ಅಸಾಮಾನ್ಯ. ಅಲ್ಲಿ ಚಿಂತನೆಗಳ ನಾಗಾಲೋಟ, ವೈವಿಧ್ಯ-ವೈರುಧ್ಯಗಳ ಸಮಾಗಮ. ಕಂಡಿದ್ದು-ಕಾಣದ್ದು-ಕಲ್ಪನೆಗಳು-ವಾಸ್ತವತೆಯ ಮಿಳಿತಕ್ಕೆ ಮೊದಲು ಸಿಲುಕುವುದೇ ಕವಿ ಮನಸ್ಸು. ಇಂತಹ ಕವಿ ಮನಸ್ಸುಗಳಿಗೆ ತನ್ನ ಭಾವನೆಗಳಿಗೆ ಅಕ್ಷರದ ರೂಪ ನೀಡಿ ಕೇಳುಗರ ಮುಂದೆ ಪ್ರಸ್ತುತಪಡಿಸುವ ಅವಕಾಶವನ್ನು ಇಲ್ಲಿನ ಸೃಷ್ಟಿಯ ಚಿಗುರು ಕವಿ ಬಳಗ ಕಲ್ಪಿಸಿದ್ದು, ಕವಿಗೋಷ್ಠಿಯಲ್ಲಿ ಮೂಡಿಬಂದ ಕವನಗಳ ಸಾಲುಗಳು ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿತು.

ಸೋಮವಾರಪೇಟೆಯಲ್ಲಿ ಸದಾ ಒಂದಿಲ್ಲೊAದು ಸಾಹಿತ್ಯ ಸೇವೆ ನಡೆಸುತ್ತಾ, ಕವಿಗಳು, ಸಾಹಿತಿಗಳು, ಕಲಾಸಕ್ತರಿಗೆ ವೇದಿಕೆಗಳನ್ನು ಕಲ್ಪಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುತ್ತಾ ಬಂದಿರುವ ಸೃಷ್ಟಿಯ ಚಿಗುರು ಕವಿ ಬಳಗದ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಕವಿಗೋಷ್ಠಿ ಕಾರ್ಯಕ್ರಮ, ಕೇಳುಗರ ಮನದಲ್ಲಿ ಚಿಂತನೆಗಳ ಹೊಳೆ ಹರಿಸುವಲ್ಲಿ ಸಫಲವಾಯಿತು. ಮಹಾತ್ಮರ ಆತ್ಮಗಳು ಹೆಸರಿನಲ್ಲಿ ಕವನ ವಾಚಿಸಿದ ಸಾಹಿತಿ ಪುಟ್ಟಣ್ಣ ಆಚಾರ್ಯ ಅವರು ಪೋಷಕರು ಹಾಗೂ ಪೂರ್ವಜರ ನೆನಪುಗಳನ್ನು ಕಣ್ಣಮುಂದೆ ತಂದು ಕೊಂಡರು. ಸುಶೀಲ ಹಾನಗಲ್ಲು ವಾಚಿಸಿದ ಸಮಾನತೆ ಕವನದಲ್ಲಿ ಸಮಾಜದಲ್ಲಿ ಸಮಾನತೆಗಾಗಿ ಆಗ್ರಹಿಸಿದರು. ಸುಮನಾ ಗೌತಮ್ ಅವರು ನಿಜ ಶರಣಾಗತಿ ಕವನದಲ್ಲಿ ಗುಡಿ ಗೋಪುರ-ಮಂದಿರ ಮಸೀದಿಗಳ ಬದಲು ಕಾಯಕದಲ್ಲೇ ನಿಜವಾದ ಸಾರ್ಥಕತೆ ಕಾಣಬೇಕು ಕಾರ್ಯಕ್ರಮ, ಕೇಳುಗರ ಮನದಲ್ಲಿ ಚಿಂತನೆಗಳ ಹೊಳೆ ಹರಿಸುವಲ್ಲಿ ಸಫಲವಾಯಿತು. ಮಹಾತ್ಮರ ಆತ್ಮಗಳು ಹೆಸರಿನಲ್ಲಿ ಕವನ ವಾಚಿಸಿದ ಸಾಹಿತಿ ಪುಟ್ಟಣ್ಣ ಆಚಾರ್ಯ ಅವರು ಪೋಷಕರು ಹಾಗೂ ಪೂರ್ವಜರ ನೆನಪುಗಳನ್ನು ಕಣ್ಣಮುಂದೆ ತಂದು ಕೊಂಡರು. ಸುಶೀಲ ಹಾನಗಲ್ಲು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಜಲಾ ಕಾಳಪ್ಪ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಳಿನಿ ಗಣೇಶ್, ಉಪಾಧ್ಯಕ್ಷ ಬಿ. ಸಂಜೀವ, ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ತಾಲೂಕು ಘಟಕದ ಅಧ್ಯಕ್ಷ ಜವರಪ್ಪ, ಕ.ರವೇ. ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ದೀಪಕ್, ಜಾನಪದ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ. ಮುರುಳೀಧರ್, ಮಹಿಳಾ ಸಮಾಜದ ಅಧ್ಯಕ್ಷೆ ಉಷಾತೇಜಸ್ವಿ ಉಪಸ್ಥಿತರಿದ್ದರು.