ಮಡಿಕೇರಿ, ಡಿ. ೨೮: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ಅಮೇರಿಕಾ ರಾಷ್ಟç ಅಲ್ಲಿನ ಪ್ರತಿಷ್ಠಿತವಾದ ಬಿರುದಾದ ‘ಲೀಜನ್ ಆಫ್ ಮೆರಿಟ್’ ಅನ್ನು ನೀಡಿ ಗೌರವಿಸಿದೆ. ಅಧ್ಯಕ್ಷ ಟ್ರಂಪ್ ಅವರು ಮೋದಿ ಅವರಿಗೆ ಈ ಗೌರವವನ್ನು ನೀಡಿದ್ದಾರೆ. ಇದೇ ಬಿರುದನ್ನು ಪಡೆದ ಪ್ರಥಮ ಭಾರತೀಯ ಕೊಡಗಿನವರಾದ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರು. ೧೯೫೦ರಲ್ಲಿ ಅವರು ಭಾರತದ ಕಮಾಂಡರ್ ಇನ್ ಚೀಫ್ ಆಗಿದ್ದ ಸಂದರ್ಭದಲ್ಲಿ ಅಮೇರಿಕಾದ ಆಗಿನ ಅಧ್ಯಕ್ಷರಾದ ಹ್ಯಾರಿ ಎಸ್ ಟ್ರುಮಾನ್ ಅವರು ‘ಲೀಜನ್ ಆಫ್ ಮೆರಿಟ್’ ಅನ್ನು ಕಾರ್ಯಪ್ಪ ಅವರಿಗೆ ಪ್ರದಾನ ಮಾಡಿದ್ದರು. ಭಾರತದ ಜನರಲ್ ಸತ್ಯವಂತ್ ಮಲ್ಲಾನ ಶ್ರೀನಾಗೇಶ್ ಅವರಿಗೆ ಈ ಗೌರವ ಲಭಿಸಿತ್ತು. ಇದೀಗ ಪ್ರಧಾನಿ ಮೋದಿಯವರಿಗೆ ಬಿರುದು ನೀಡಲಾಗಿದೆ. ಕಾರ್ಯಪ್ಪ ಅವರು ೧೯೫೦ರಲ್ಲಿ ‘ಲೀಜನ್ ಆಫ್ ಮೆರಿಟ್’ ಗಳಿಸಿದ ಕ್ಷಣದ ವೀಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಕಂಡುಬAದಿದೆ.