ಕಣಿವೆ, ಡಿ. ೨೯ : ಆನೆಕಾಡು ಅರಣ್ಯದಂಚಿನ ತೀರದಲ್ಲಿನ ಹೆದ್ದಾರಿಯ ಇಕ್ಕೆಲಗಳಲ್ಲಿದ್ದ ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳನ್ನು ಅರಣ್ಯ ಸಿಬ್ಬಂದಿಗಳು ಆಯ್ದು ಸ್ವಚ್ಛಗೊಳಿಸಿದರು.

ಕಳೆದ ಒಂದು ವಾರಗಳಿಂದ ಕೊಡಗಿಗೆ ಅಪಾರ ಸಂಖ್ಯೆಯಲ್ಲಿ ಧಾವಿಸಿದ ಪ್ರವಾಸಿಗರು ತಾವು ತಂದ ಊಟ, ಉಪಹಾರಗಳನ್ನು ಸೇವಿಸಿ ತ್ಯಾಜ್ಯಗಳನ್ನು ಅಲ್ಲೇ ಬಿಸಾಕಿದ್ದರು. ಅರಣ್ಯದಾವರಣ ಸದಾ ಕಾಲ ಸ್ವಚ್ಛಂದವಾಗಿರಬೇಕು ಎಂಬ ಕಾರಣಕ್ಕೆ ಮತ್ತು ವನ್ಯಜೀವಿಗಳು ತ್ಯಾಜ್ಯಗಳನ್ನು ತಿನ್ನುತ್ತವೆ ಎಂಬ ಕಾರಣಕ್ಕೆ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ತಮ್ಮ ಸಿಬ್ಬಂದಿಗಳ ಮುಖೇನ ಸ್ವಚ್ಛತಾ ಕಾರ್ಯ ನಡೆಸಿದರು.

ಸಾರ್ವಜನಿಕರು ಹಾಗೂ ಪ್ರವಾಸಿಗರು ಅರಣ್ಯದಂಚಿನಲ್ಲಿ ವಾಹನಗಳನ್ನು ನಿಲುಗಡೆಗೊಳಿಸಬಾರದು. ಯಾವುದೇ ವಸ್ತುಗಳನ್ನು ಬಿಸಾಕಬಾರದು. ಪ್ರತಿಯೊಬ್ಬರೂ ಸ್ವಚ್ಛ ಕೊಡಗು ಪರಿಕಲ್ಪನೆಯನ್ನು ಮನಗಂಡು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಈ ಸಂದರ್ಭ ಕರೆ ನೀಡಿದರು.