ಮಡಿಕೇರಿ, ಡಿ. ೨೮: ಪೊಲೀಸ್ ಇಲಾಖೆಯಲ್ಲಿನ ಕಾರ್ಯಕ್ಷಮತೆ ಹಾಗೂ ದಕ್ಷ-ಧೈರ್ಯಶಾಲಿ ಅಧಿಕಾರಿಯಾಗಿ ‘ಟೈಗರ್ ಅಶೋಕ್’ ಎಂದೇ ಹೆಸರಾಗಿರುವ ಜಿಲ್ಲೆಯ ವರಾದ ಬಿದ್ದಂಡ ಅಶೋಕ್ ಕುಮಾರ್ ಅವರು ಬರೆದಿರುವ ‘ಪೊಲೀಸ್ ವ್ಹಿಸಲ್’ ಎಂಬ ಕೃತಿ ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಇದು ಅವರ ಮೂರನೇ ಕೃತಿಯಾಗಿದ್ದು, ಪೊಲೀಸ್ ಇಲಾಖೆಯಲ್ಲಿನ ಸಾಹಸಗಾಥೆಯ ವಿಚಾರವನ್ನು ಒಳಗೊಂಡಿದ್ದು, ಕೃತಿಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಗೊಂಡಿದೆ.

ಈ ಹಿಂದೆ ಅಶೋಕ್ ಕುಮಾರ್ ಅವರು ಬರೆದಿರುವ ಬುಲೆಟ್ ಸವಾರಿ ಹಾಗೂ ಹುಲಿಯ ನೆನಪುಗಳು ಎಂಬ ಪುಸ್ತಕವನ್ನು ಬರೆದಿದ್ದು, ಈ ಪುಸ್ತಕಗಳಿಗೂ ಭಾರೀ ಬೇಡಿಕೆ ಕಂಡುಬAದಿತ್ತು.

ಅಶೋಕ್ ಕುಮಾರ್ ಹಾಗೂ ಅವರ ಪುಸ್ತಕದ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಇಲ್ಲಿ ಯಥಾವತ್ ಆಗಿ ನೀಡಲಾಗಿದೆ.

ನಾನು ಮೊಟ್ಟ ಮೊದಲ ಬಾರಿಗೆ ಬಿ.ಬಿ. ಅಶೋಕ್ ಕುಮಾರ್ ಅವರನ್ನು ಭೇಟಿಯಾಗಿದ್ದು, ೧೯೯೫ ರಲ್ಲಿ. ಆಗ ತಾನೇ ನಾನು ಬೆಂಗಳೂರು ನಗರದ ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ ಆಗಿ ಪಶ್ಚಿಮ ವಿಭಾಗಕ್ಕೆ ನೇಮಕಗೊಂಡಿದ್ದೆ. ಈ ಹಿಂದೆ ನಾನು ಎಸ್.ಪಿ.ಯಾಗಿ ಬಳ್ಳಾರಿ ಮತ್ತು ರಾಯಚೂರಿನಲ್ಲಿ ಕರ್ತವ್ಯ ಮಾಡಿದ್ದರೂ, ಗೊತ್ತು ಗುರಿಯಿಲ್ಲದ ಬೆಂಗಳೂರು ಮಹಾನಗರ ನನ್ನ ಪಾಲಿಗೆ ಪರಿ ಶೋಧಿಸದ ಹೊಸ ಪ್ರಾಂತವಾಗಿತ್ತು. ನನ್ನ ಇಲಾಖೆಯಲ್ಲಿದ್ದ ಹಾಗೂ ನನ್ನ ಒಳಿತನ್ನು ಬಯಸುವ ಹಿತೈಷಿಗಳು ನನಗೊಂದು ಎಚ್ಚರಿಕೆಯನ್ನು ನೀಡಿದ್ದರು.

ಅದೇನೆಂದರೆ ಬೆಂಗಳೂರು ನಗರದ ಪಶ್ಚಿಮ ವಿಭಾಗದ ಸರಹದ್ದಿನ ಕಾನೂನು ಸುವ್ಯವಸ್ಥೆ ಮತ್ತು ಅಪರಾಧಗಳ ನಿಯಂತ್ರಣದ ಜೊತೆಗೆ ಇಲಾಖೆಯಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ನಿರ್ವಹಿಸುವುದು ದೊಡ್ಡ ಸವಾಲಿನ ಶ್ರಮದ ಕೆಲಸವೆಂದು ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ ನನ್ನ ಆಗಿನ ಮೂರೂವರೆ ವರ್ಷದ ಅಧಿಕಾರದ ಅವಧಿಯಲ್ಲಾಗಲಿ ಮತ್ತು ಇಂದಿನವರೆಗೆ ನನಗೆ ಅದು ಸವಾಲಿನ ಕೆಲಸವೆಂದು ಅನ್ನಿಸಲೇ ಇಲ್ಲ. ಬಹುತೇಕ ಪೊಲೀಸ್ ಅಧಿಕಾರಿಗಳು ಅತ್ಯಂತ ದಿಟ್ಟತನ ಮತ್ತು ವಚನಬದ್ಧರಾಗಿ ಕರ್ತವ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಇವರೆಲ್ಲರ ಪೈಕಿ ನನಗೆ ಬಿ.ಬಿ. ಅಶೋಕ್ ಕುಮಾರ್ ಅವರ ಜೊತೆ ವಿಶೇಷವಾದ ಬಾಂಧವ್ಯ ಬೆಳೆಯಿತು. ಅವರು ಆಗ ಬೆಂಗಳೂರು ನಗರದ ಜಗಜೀವನ ರಾಂ ನಗರ ಪೊಲೀಸ್ ಠಾಣೆ (ಜೆ.ಜೆ. ನಗರ-ಈಗ ಪಾದರಾ ಯನಪುರ)ಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದರು. ಈ ಠಾಣೆಯು ಅತೀ ಹೆಚ್ಚಾದ ಸಮಸ್ಯೆಗಳಿಂದ, ಸೂಕ್ಷö್ಮ ಕೋಮುಪೀಡಿತ ಪ್ರದೇಶದ ಜೊತೆ ಅತೀ ಕಡಿಮೆ ಬೇಡಿಕೆ ಇರುವ ಠಾಣೆಯಾಗಿತ್ತು. ಇಲ್ಲಿಗೆ ಯಾವೊಬ್ಬ ಪೊಲೀಸ್ ಇನ್ಸ್ಪೆಕ್ಟರ್ ವರ್ಗಾವಣೆ ಯಾಗಲು ಬಯಸದ ಮತ್ತು ವರ್ಗಾವಣೆಯಾದರೆ ಅಲ್ಲಿಂದ ಮೊದಲು ವರ್ಗಾವಣೆ ಯಾಗಿ ಹೊರ ಹೋಗಲು ಪ್ರಯತ್ನಿಸುತ್ತಿದ್ದರು.

ಇಂತಹ ಪ್ರಕ್ಷÄಬ್ಧ ವಾತಾವರಣದ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳಿಗೂ ಹಾಗೂ ಸಾರ್ವಜನಿಕರಿಗೂ ದಯಾಪರ, ಮಧುರವಾದ ಬಾಂಧವ್ಯ ಬೆಸೆಯದೆ, ಹಲವರು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದರು. ಆದರೆ ಬಿ.ಬಿ. ಅಶೋಕ್ ಕುಮಾರ್‌ರವರು ಇದಕ್ಕೆ ಅಪವಾದವಾಗಿದ್ದರು. ಇವರು ಇಲ್ಲಿಯ ಸಾರ್ವಜನಿಕರೊಡನೆ ಅತ್ಯಂತ ಜನಾದರಣೀಯ ಹಾಗೂ ಹಿಂದೂ, ಮುಸ್ಲಿಂ, ಕ್ರೆöÊಸ್ತ ಮತ್ತು ಎಲ್ಲಾ ಜಾತಿಯ ಬಡ, ಶ್ರೀಮಂತರೊಡನೆ ಜಾತಿ ಭೇದವಿಲ್ಲದೆ ಜನಪ್ರಿಯರಾಗಿದ್ದರು. ಇವರು ಈ ಪ್ರದೇಶದ ನೂರಾರು ಯುವಕ, ಯುವತಿಯರಿಗೆ ವಿಶ್ವಾಸನೀಯ ಸಲಹೆಗಾರರಾಗಿದ್ದರು.

ಇವರ ವಿಶೇಷವಾದ ನಡತೆ ಹೆಚ್ಚಾಗಿ ದಂಡ ವಿಧಿಸುವ ಬದಲು ಸುಧಾರಣೆಗೆ ಮತ್ತು ಬದಲಾವಣೆಗೆ ಹೆಚ್ಚು ಒತ್ತು ಕೊಟ್ಟಿದ್ದರು. ಇವರು ಜೆ.ಜೆ. ನಗರ ಠಾಣೆಯಲ್ಲಿ ನಾಲ್ಕು ವರ್ಷಕ್ಕಿಂತ ಹೆಚ್ಚು ಕಾಲ ಕರ್ತವ್ಯದಲ್ಲಿದ್ದದ್ದು ವಿಸ್ಮಯವಲ್ಲ (೧೯೯೪ ರಿಂದ ೧೯೯೮).

ಕೆಲವೇ ತಿಂಗಳಲ್ಲಿ ನಾನು ಅವರನ್ನು ಂಟಿಣi-ಡಿoತಿಜಥಿ squಚಿಜ ದಳಕ್ಕೆ ಉಳಿದ ಬೆಂಗಳೂರು ನಗರದ ಐದು ಪೊಲೀಸ್ ಇನ್ಸ್ಪೆಕ್ಟರ್‌ಗಳ ಜೊತೆ ಆಯ್ಕೆ ಮಾಡಿದೆ. ಮುಂದೆ ಮೂರು ವರ್ಷ ಂಟಿಣi-ಡಿoತಿಜಥಿ squಚಿಜನಲ್ಲಿ ಅಶೋಕ್ ಕುಮಾರ್ ರವರು ಪ್ರಮುಖವಾದ ಪಾತ್ರವಹಿಸಿ ಉಳಿದ ಅಧಿಕಾರಿಗಳೊಡನೆ ಬೆಂಗಳೂರು ನಗರದ ಪೊಲೀಸರಿಗೆ ಮತ್ತು ನನಗೆ ಹೆಚ್ಚು ಗೌರವ ತಂದರು. ಇವರು ಸಾವಿರಾರು ಯುವಕ, ಯುವತಿಯರಿಗೆ ಇವರದೇ ಆದ ವ್ಯಕ್ತಿತ್ವದ ವಿಶೇಷ ಕರ್ತವ್ಯದ ಪ್ರಖ್ಯಾತಿ ಯಿಂದ ಆದರ್ಶದ ಮಾದರಿ ಯಾಗಿದ್ದಾರೆ. ಅಶೋಕ್‌ಕುಮಾರ್ ಸುಮಾರು ಮೂರೂವರೆ ವರ್ಷಗಳ ಕಾಲ ನನ್ನೊಂದಿಗೆ ಸುಮಾರು ೧೦-೧೨ ಬಾರಿ ಹಲವು ಪ್ರಮುಖ ಕಾರ್ಯಾಚರಣೆ ಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಂಟಿಣi-ಡಿoತಿಜಥಿ squಚಿಜನಲ್ಲಿದ್ದ ನಾವೆಲ್ಲರೂ ಸಹೋದರರ ಬಾಂಧವ್ಯದಲ್ಲಿದ್ದೆವು. ಹಲವು ಬಾರಿ ನಾವು ಜೊತೆಯಲ್ಲಿ ಚರ್ಚಿಸಿದ್ದೇವೆ. ವಾದ ಮಾಡಿದ್ದೇವೆ. ಭಿನ್ನಾಭಿಪ್ರಾಯ ಪಟ್ಟಿದ್ದೇವೆ. ಆದರೆ ಒಂದು ಬಾರಿ ತೀಕ್ಷ÷್ಣವಾದ ನಿರ್ಧಾರ ತೆಗೆದುಕೊಂಡ ಮೇಲೆ ಂಟಿಣi-ಡಿoತಿಜಥಿ squಚಿಜನ ಎಲ್ಲಾ ಸದಸ್ಯರು ಸಾಂಘಿಕ ವಾಗಿ ಒಂದೇ ಉದ್ದೇಶದಿಂದ, ವಚನ ಬದ್ಧತೆಯಿಂದ, ಸಂಕಲ್ಪದ ಗುರಿಯನ್ನು ಮುಟ್ಟಿದ್ದೇವೆ. ಉತ್ಸಾಹದಿಂದ ಗೆದ್ದು ಸಂಭ್ರಮಿಸಿದ್ದೇವೆ. ಂಟಿಣi-ಡಿoತಿಜಥಿ squಚಿಜನ ಮುಂದಾಳತ್ವವನ್ನು ವಹಿಸಿದ್ದ ನಾನು ಮೂರೂವರೆ ವರ್ಷ ಎಲ್ಲಾ ಸದಸ್ಯರೊಡನೆ ಕರ್ತವ್ಯದಲ್ಲಿದ್ದು, ಪೂಜ್ಯ ಭಾವನೆಯಿಂದ ಧನ್ಯನಾಗಿದ್ದೆ.

ಆ ಗತಕಾಲದ ಚಿರಸ್ಮರಣೀಯ ನೆನಪುಗಳು ನನ್ನ ಜೀವನದಲ್ಲಿ ಅವಿಸ್ಮರಣೀಯ ಹಾಗೂ ಅವರ್ಣನೀಯ ಕ್ಷಣಗಳು. ಅದು ಸಿನಿಮೀಯ ರೀತಿಯ ರೇಷ್ಮೆ ವ್ಯಾಪಾರಿಯಾದ ‘ಜೈಪೂರಿಯಾ’ರವರ ಅಪಹರಣದ ಪ್ರಕರಣವಾಗಿರಬಹುದು ಅಥವಾ ಅರ್ಧ ಡಜನ್ ಬೇರೆ ಬೇರೆ ಪ್ರಕರಣಗಳಲ್ಲಿ ಮುಗ್ಧ ಅಮಾಯಕ ಮಕ್ಕಳನ್ನು ಅಪಹರಿಸಿದ ಘಟನೆಗಳು, ಮತ್ತೊಂದು ಬಾಲಿವುಡ್ ಸಿನಿಮಾದ ರೀತಿಯಲ್ಲಿ ಒಂದು ಕುಖ್ಯಾತ ಗ್ಯಾಂಗ್ ದುಷ್ಕರ್ಮಿಗಳಲ್ಲಿ ಪ್ರಮುಖರಾದ ಇಬ್ಬರು ಪಂಜಾಬ್ ರಾಜ್ಯದ ಇಂಜಿನಿ ಯರಿಂಗ್ ಆಡಿoಠಿ ouಣ ವಿದ್ಯಾರ್ಥಿ ಗಳು ವಿದೇಶಿ ಪಿಸ್ತೂಲ್‌ಗಳನ್ನು ಉಪಯೋಗಿಸಿ ಹಾಡಹಗಲೇ ಕೊಲೆ ಯತ್ನ, ಹಣ ದರೋಡೆ, ಅhಚಿiಟಿ Sಟಿಚಿಣಛಿhiಟಿg ಪ್ರಕರಣದಲ್ಲಿ ಬೆಂಗಳೂರನ್ನು ಬೆಚ್ಚಿ ಬೀಳಿಸಿದವರನ್ನು ಬೆನ್ನಟ್ಟಿದ ನಮ್ಮ ತಂಡ ದೆಹಲಿಯ ಭದರ್‌ಪುರ್ ಚೆಕ್‌ಪೋಸ್ಟ್ನಲ್ಲಿ ರೋಚಕವಾಗಿ ದುಷ್ಕರ್ಮಿಗಳಿಬ್ಬರನ್ನು ಬಂಧಿಸಿದ ಘಟನೆ, ನಟೋರಿಯಸ್ ರೌಡಿ ಡೆಡ್ಲಿ ಸೋಮ ಮತ್ತು ಬಸವನ ಎನ್‌ಕೌಂಟರ್ ಮುಂತಾದ ಭಾವೋದ್ರೇಕದ ಎಲ್ಲಾ ಕಾರ್ಯಾ ಚರಣೆಗಳಲ್ಲಿ ಅಶೋಕ್ ಕುಮಾರ್ ರವರ ಮುದ್ರೆ ಹಾಕಿ ಗುರುತು ಮಾಡಿದ ಕಾರ್ಯವೈಖರಿಯ ಶೈಲಿ, ರಚನಾಕ್ರಮ ವಿಶೇಷ.

‘ಅವರೊಬ್ಬ ಅಸಾಮಾನ್ಯ ಪೊಲೀಸ್ ಅಧಿಕಾರಿ’. ನಾನೆಂದು ಮರೆಯಲಾಗದ ಪ್ರಕರಣವೆಂದರೆ, ಲಂಡನ್‌ನಿAದ ಬೆಂಗಳೂರಿಗೆ ಬಂದಿದ್ದ ಬ್ರಿಟೀಷ್ ಪ್ರವಾಸಿ ಪ್ರೇಮಿಗಳ ಪೈಕಿ ಹೆಣ್ಣು ಮಗಳನ್ನು ಅನಾಮಧೇಯ ಆಟೋ ಡ್ರೆöÊವರ್‌ನೊಬ್ಬ ಅಮಾನು ಷವಾಗಿ ಅತ್ಯಾಚಾರವೆಸಗಿ ನಿಗೂಢವಾಗಿ ಕಣ್ಮರೆಯಾಗಿದ್ದ. ನಮ್ಮ ಪೂರ್ಣ ತಂಡ ರಾತ್ರಿ-ಹಗಲೆನ್ನದೆ ಲಕ್ಷಾಂತರ ಆಟೋರಿಕ್ಷಾಗಳನ್ನು ಸೂಕ್ಷö್ಮವಾಗಿ ಪರಿಶೀಲಿಸಿತು. ಹೃದಯ ವಂತಿಕೆಯ (ಉoಟಜeಟಿ ಊeಚಿಡಿಣ) ಮತ್ತು ಮಾನವೀ ಯತೆಯ ಪ್ರತೀಕವಾದ ಅಶೋಕ್‌ಕುಮಾರ್ ರವರು ಸಂತೈಸಲಾಗದ ಆ ಬ್ರಿಟೀಷ್ ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ಕುಟುಂಬದವರೊಡನೆ ಆರೈಕೆ ಮಾಡಿ ಮನೆಯ ಸದಸ್ಯೆಯಂತೆ ನೋಡಿಕೊಂಡರು. ಆತ್ಮೀಯವಾಗಿ ಮಾತನಾಡಿ ಮಹತ್ವದ ‘ಸುಳಿವು’ ವೊಂದನ್ನು ಪಡೆದು ಅತ್ಯಾಚಾರಿಯನ್ನು ಬಂಧಿಸುವುದರಲ್ಲಿ ಂiÀಶಸ್ವಿಯಾದರು.

ನAತರ ಮುಂದೆ ಬೆಂಗಳೂರು ನಗರದಿಂದ ನನ್ನ ವರ್ಗವಾದ ಮೇಲೆ ನಾನೆಂದು ಪುನಃ ಅಶೋಕ್ ಕುಮಾರ್‌ರೊಡನೆ ಕರ್ತವ್ಯ ಮಾಡಲಿಲ್ಲ. ಅಶೋಕ್‌ಕುಮಾರ್ ೨೦೧೨ರಲ್ಲಿ ಇಲಾಖೆಯಿಂದ ನಿವೃತ್ತಿಯಾದರೂ ನಮ್ಮಿಬ್ಬರ ವೃತ್ತಿಯ ಮತ್ತು ಆತ್ಮೀಯತೆಯ ಬಂಧನಕ್ಕೆ ಧಕ್ಕೆಯಾಗಿಲ್ಲ.

ಅವರ ಮೂವತ್ತೆöÊದು ವರ್ಷದ ಸುಧೀರ್ಘ ಪೊಲೀಸ್ ಸೇವೆಯಲ್ಲಿ ಪತ್ತೆ ಮಾಡಿರುವ ನೂರಕ್ಕಿಂತ ಹೆಚ್ಚು ಕೊಲೆ, ಕೊಲೆ ಯತ್ನ, ಡಕಾಯಿತಿ, ಅಪಹರಣ ಮುಂತಾದ ಭಾವೋದ್ರೇಕ, ಘೋರ, ಪಾತಕ ಅಪರಾಧಗಳನ್ನು ಭೇದಿಸಿ ಆರೋಪಿಗಳನ್ನು ಹೆಡೆಮುರಿಕಟ್ಟಿ ಜೈಲಿಗೆ ತಳ್ಳಿದ್ದಾರೆ ಹಾಗೂ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಸಹ ಯಶಸ್ವಿಯಾಗಿದ್ದಾರೆ.

ಇವರು ಪೊಲೀಸ್ ಸೇವೆಯಲ್ಲಿ ಜೀವದ ಹಂಗನ್ನು ತೊರೆದು, ಶೌರ್ಯ ಪ್ರದರ್ಶನದಿಂದ, ಅಸಾಧಾರಣ, ನಿಷ್ಕಳಂಕ, ದಕ್ಷತೆ ಮತ್ತು ಅರ್ಪಣಾ ಮನೋಭಾವ ವನ್ನು ಪ್ರದರ್ಶಿಸಿದ ನಿಸ್ವಾರ್ಥ ಸೇವೆಗಾಗಿ ಇವರಿಗೆ ಭಾರತದ ರಾಷ್ಟçಪತಿಗಳು ೧೯೮೬ರಲ್ಲಿ ‘ಶೌರ್ಯ ಪದಕ’ (Pಡಿesiಜeಟಿಣ’s ಅಚಿಟಟeಟಿಣಡಿಥಿ ಒeಜಚಿಟ). ೧೯೯೮ ‘ಪೊಲೀಸ್ ವಿಶಿಷ್ಟ ಸೇವಾ ಪದಕ’ (Pಡಿesiಜeಟಿ’s ಒeಡಿiಣoಡಿious Seಡಿviಛಿe ಒeಜಚಿಟ) ಹಾಗೂ ೨೦೦೬ರಲ್ಲಿ ‘ಪೊಲೀಸ್ ಶ್ಲಾಘನೀಯ ಸೇವಾ ಪದಕ’ (Pಡಿesiಜeಟಿ’s ಆisಣiಟಿguisheಜ Seಡಿviಛಿe ಒeಜಚಿಟ) ನೀಡಿ ಗೌರವಿಸಿರುತ್ತಾರೆ.

ಈ ಮೇಲಿನ ಮೂರು ಪದಕಗಳನ್ನು ಪಡೆದ ಕರ್ನಾಟಕದ ಅತೀ ವಿರಳ ಪೊಲೀಸ್ ಅಧಿಕಾರಿ ಗಳಲ್ಲಿ ಬಿ.ಬಿ. ಅಶೋಕ್‌ಕುಮಾರ್ ಒಬ್ಬರು ಎನ್ನುವುದು ಹೆಗ್ಗಳಿಕೆ.

ಆದರೆ ಇವರಿಗೆ ಈ ಪದಕಗಳ ಜೊತೆಗೆ ತಮ್ಮ ಸುದೀರ್ಘ ಸೇವೆಯಲ್ಲಿ ಸಿಕ್ಕಿರುವ ‘ಸಂತೃಪ್ತಿ ಮತ್ತು ಆತ್ಮವಿಶ್ವಾಸ, ಸಹೋದ್ಯೋಗಿಗಳ ರಾಜನಿಷ್ಠೆ ಮತ್ತು ಸಾರ್ವಜನಿಕರ ಪ್ರೀತಿ, ಮಮತೆ ಮತ್ತು ವಾತ್ಸಲ್ಯ’ವೇ ಹೆಚ್ಚು.ಇವರು ಸೇವೆಯಿಂದ ನಿವೃತ್ತರಾದ ಮೇಲೆ ‘ತಾವು ನಿಂತ ನೀರಾಗದೆ ಸದಾ ಹರಿಯುತ್ತಿರಬೇಕು, ಸ್ಥಾವರವಾಗದೆ ಜಂಗಮನಾಗ ಬೇಕೆಂಬ’ ಮಾತಲ್ಲಿ ನಂಬಿಕೆಯ ನ್ನಿಟ್ಟವರು. ಅದರ ಫಲಶ್ರುತಿಯಾಗಿ ಇವರು ವೃತ್ತಿಯಲ್ಲಿದ್ದಾಗ ಮಲೈಮಹದೇಶ್ವರ ಬೆಟ್ಟದ ಕಾಡಿನಲ್ಲಿ ಬ್ರಹ್ಮರಾಕ್ಷಸನಾಗಿದ್ದ ನರಹಂತಕ, ದಂತಚೋರ ‘ವೀರಪ್ಪನ್’ ಮತ್ತು ಅವನ ತಂಡದ ಭಯೋತ್ಪಾದನ ಮತ್ತು ಭೀಭತ್ಸ ಕೃತ್ಯಗಳ ವಿರುದ್ಧ ಪೊಲೀಸರ ಕಾರ್ಯಾಚರಣೆಯ ಎಸ್.ಟಿ.ಎಫ್. ತಂಡದ ಜೊತೆ ಹೋರಾಟದಲ್ಲಿ ತಾವು ಭಾಗಿಯಾಗಿದ್ದ ಶ್ರೇಯಸ್ಕರ ಮತ್ತು ಸಾಹಸಮಯ ಕಾರ್ಯಗಳನ್ನು ೨೦೧೫ರಲ್ಲಿ ‘ಹುಲಿಯ ನೆನಪುಗಳು’ ಎಂಬ ಮತ್ತು ಅವರ ಕರ್ತವ್ಯದ ಅವಧಿಯಲ್ಲಿ ತಾವು ಪತ್ತೆ ಹಚ್ಚಿದ ಪ್ರಕರಣಗಳನ್ನು ‘ಬುಲೆಟ್ ಸವಾರಿ’ ಎಂಬ ಮತ್ತೊಂದು ಪುಸ್ತಕಗಳ ರೂಪದಲ್ಲಿ ಬರೆದು ಹೊರತಂದಿ ರುತ್ತಾರೆ. ಈ ಎರಡು ಕನ್ನಡ ಪುಸ್ತಕಗಳು ಕರ್ನಾಟಕದ ಜನರ ಮನ್ನಣೆ ಪಡೆದು ಏಳನೆಯ ಮುದ್ರಣ ಕಂಡಿದೆ.

ಈಗ ಬಿ.ಬಿ. ಅಶೋಕ್ ಕುಮಾರ್ ರವರು ತಮ್ಮ ಮೂರನೆಯ ಪುಸ್ತಕವಾದ ‘ಪೊಲೀಸ್ ವ್ಹಿಸಲ್’ (Poಟiಛಿe Whisಣಟe) ಎಂಬದನ್ನು ಬರೆದು ಹೊರ ತರುತ್ತಿದ್ದಾರೆ. ಇದರಲ್ಲಿ ತಮ್ಮ ‘ಆತ್ಮಕಥೆ’ ಹಾಗೂ ತಮ್ಮ ಸೇವಾವಧಿಯಲ್ಲಿ ಪತ್ತೆ ಮಾಡಿದಂತಹ ಕುತೂಹಲಕರ, ಭಾವೋದ್ರೇಕ ಅಪರಾಧಗಳನ್ನು ಭೇದಿಸಿದ ರೀತಿಯನ್ನು ಅಕ್ಷರ ತೋರಣವಾಗಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದನ್ನು ಕಾಣಬಹುದು. ಇವರು ಬರೆದ ಕೃತಿಗಳು ಪೊಲೀಸ್ ಇಲಾಖೆಯ ಗೌರವವನ್ನು ಇಮ್ಮಡಿಗೊಳಿಸಿರುವುದಲ್ಲದೆ, ಯುವ ಪೊಲೀಸ್ ಅಧಿಕಾರಿಗಳಿಗೆ ಸ್ಫೂರ್ತಿಯ ಚಿಲುಮೆಯೂ ಆಗಲಿದೆ ಎನ್ನುವ ದೃಢ ನಂಬಿಕೆ ನನ್ನದು.

ನನಗೆ ಅತ್ಯಂತ ರೋಮಾಂಚನ ಮತ್ತು ಹೆಚ್ಚಿನ ತೃಪ್ತಿಯ ಅನುಭವ ತಂದ ಈ ಪ್ರಕರಣಗಳ ಕಾರ್ಯಾ ಚರಣೆಯನ್ನು ಅಶೋಕ್ ಕುಮಾರ್‌ರವರು ತಮ್ಮ ‘ಪೊಲೀಸ್ ವ್ಹಿಸಲ್’ ಕೃತಿಯಲ್ಲಿ ನಮ್ಮ ಕಣ್ಣ ಮುಂದೆ ಸೊಗಸಾದ ದೃಶ್ಯ-ಕಾವ್ಯವಾಗಿ ಅಕ್ಷರ ತೊರೆಯಾಗಿ ಹರಿಸಿದ್ದಾರೆ. ಆ ಅನುಭವ ನಮಗೆ ಗೆಲುವಿನ ಮತ್ತು ಸಂತಸದ ಕ್ಷಣವಾಗಿತ್ತು. ಅಶೋಕ್ ಕುಮಾರ್‌ರವರ ಈ ಅನುಭವಗಳು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸ್ಫೂರ್ತಿ ನೀಡುವ ದಾರಿದೀಪ ವಾಗಲಿ ಎಂದು ಹಾರೈಸುತ್ತೇನೆ.

- ಪ್ರವೀಣ್ ಸೂದ್,

ಡಿ.ಜಿ-ಐ.ಜಿ.ಪಿ., ಕರ್ನಾಟಕ