ಶನಿವಾರಸAತೆ, ಡಿ. ೨೮: ಪಟ್ಟಣದ ಶ್ರೀರಾಮ ಮಂದಿರದಲ್ಲಿ ಹನುಮ ಜಯಂತಿ ಶ್ರದ್ಧಾಭಕ್ತಿಯಿಂದ ಜರುಗಿತು.

ಮಂದಿರವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಹನುಮ ದೇವರ ಮೂರ್ತಿ ಹಾಗೂ ಶ್ರೀರಾಮ, ಸೀತಾ, ಲಕ್ಷö್ಮಣ ಮೂರ್ತಿಗಳನ್ನೂ ವಿವಿಧ ರೀತಿಯ ಪುಷ್ಪಗಳಿಂದ, ತುಳಸಿ ಮಾಲೆಯಿಂದ ಅಲಂಕರಿಸಲಾಗಿತ್ತು.

ಪ್ರಧಾನ ಅರ್ಚಕ ಪ್ರಸನ್ನ ರಾವ್, ಅರ್ಚಕರಾದ ಶಿವಶಂಕರ್ ಭಟ್, ವೆಂಕಟೇಶ್ ಭಟ್, ಸುದರ್ಶನ್ ಭಟ್ ಹಾಗೂ ಪ್ರಭಾಕರ್ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ಹೋಮ- ಹವನ, ಪೂರ್ಣಾಹುತಿ ನೆರವೇರಿತು. ತೀರ್ಥ ಪ್ರಸಾದ ವಿನಿಯೋಗದ ನಂತರ ಅನ್ನ ಸಂತರ್ಪ ಣೆಯನ್ನು ಏರ್ಪಡಿಸಲಾಗಿತ್ತು. ಪಟ್ಟಣದ ಜನತೆ ಪೂಜಾ ಕಾರ್ಯ ಗಳಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿ ದ್ದರು. ಶ್ರೀರಾಮ ಸೇವಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.