ಗೋಣಿಕೊಪ್ಪ ವರದಿ, ಡಿ. ೨೯: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ವತಿಯಿಂದ ನಡೆಯುತ್ತಿರುವ ಬಾಲಕ, ಬಾಲಕಿಯರ ಹಾಕಿ ಟೂರ್ನಿಯಲ್ಲಿ ೬ ತಂಡಗಳು ಗೆಲುವಿನ ನಗೆ ಬೀರಿದ್ದು ಒಂದು ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯ ವಾಯಿತು. ಬುಧವಾರ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.
೧೫ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸ್ಟೆçöÊಕರ್ಸ್ ಹಾಗೂ ಬ್ಲಾಸ್ಟರ್ಸ್ ನಡುವಿನ ಪಂದ್ಯ ೨-೨ ಗೋಲುಗಳ ಡ್ರಾ ಫಲಿತಾಂಶ ನೀಡಿತು. ಸ್ಟೆçöÊಕರ್ಸ್ ತಂಡದ ಕಾವ್ಯಶ್ರೀ ೨ ಗೋಲು, ಬ್ಲಾಸ್ಟರ್ಸ್ ತಂಡದ ಜಾಹ್ನವಿ, ಸಿಂಚನ ತಲಾ ಒಂದೊAದು ಗೋಲು ಹೊಡೆದರು.
೧೫ ವರ್ಷದ ಬಾಲಕರಲ್ಲಿ ವಾರಿಯರ್ಸ್ ತಂಡವು ಬ್ಲಾಸಂ ತಂಡವನ್ನು ೩-೧ ಗೋಲುಗಳಿಂದ ಮಣಿಸಿತು. ವಾರಿಯರ್ಸ್ ತಂಡದ ಪೂವಣ್ಣ ೨, ಬ್ಲಾಸಂ ತಂಡದ ಭೀಮಯ್ಯ, ಪೊನ್ನಣ್ಣ ಒಂದೊAದು ಗೋಲು ಹೊಡೆದರು.
ಫ್ಲೆöÊಬಾಯ್ಸ್ ತಂಡವು ೩-೧ ಗೋಲುಗಳಿಂದ ಅವೆಂಜರ್ಸ್ ವಿರುದ್ಧ ಜಯಿಸಿತು. ಫ್ಲೆöÊಬಾಯ್ಸ್ ತಂಡದ ಉತ್ತಪ್ಪ, ಆರ್ಯನ್, ನಂಜುAಡ, ಅವೆಂಜರ್ಸ್ ತಂಡದ ಲಿಖಿತ್ ಕಾಳಯ್ಯ ಗೋಲು ಹೊಡೆದರು.
ಲೆಪರ್ಡ್ಸ್ ತಂಡವು ಬ್ಲಾಸಂ ವಿರುದ್ಧ ೪-೦ ಗೋಲುಗಳ ಜಯ ಸಾಧನೆ ಮಾಡಿತು. ಪೂವಯ್ಯ ೨, ಯಶಸ್, ಕುಶಾಲ್ ಬೋಪಯ್ಯ ಗೋಲು ಹೊಡೆದರು.
೧೯ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವೈಪರ್ಸ್ ತಂಡವು ರೆಟಲೇಟರ್ಸ್ ವಿರುದ್ದ ೪-೧ ಗೋಲು ಗಳ ಜಯ ಪಡೆಯಿತು. ವೈಪರ್ಸ್ ತಂಡದ ಶ್ರವಣ್ ೨, ಗೌರವ್, ಪೂವಯ್ಯ, ರೆಟಲೇಟರ್ಸ್ ತಂಡದ ಪೂವಣ್ಣ ಗೋಲು ಬಾರಿಸಿದರು.
ಸ್ನಿಪರ್ಸ್ ಹಾಗೂ ವಿಜಾರ್ಡ್ಸ್ ತಂಡಗಳ ನಡುವಿನ ಪಂದ್ಯ ೧-೧ ಗೋಲುಗಳ ಡ್ರಾ ಫಲಿತಾಂಶ ನೀಡಿತು. ಸ್ನಿಪರ್ಸ್ ತಂಡದ ರವಿನ್, ವಿಜಾರ್ಡ್ಸ್ ತಂಡದ ವಿಶ್ವಾಸ್ ಗೋಲು ಹೊಡೆದರು.
ಮತ್ತೊಂದು ಪಂದ್ಯದಲ್ಲಿ ಸ್ನಿಪರ್ಸ್ ತಂಡವು ವೈಪರ್ಸ್ ತಂಡವನ್ನು ೩-೧ ಗೋಲುಗಳಿಂದ ಮಣಿಸಿತು. ಸ್ನಿಪರ್ಸ್ನ ಪುನಿತ್, ಹುಮೈಜ್, ಬಿಪಿನ್, ವೈಪರ್ಸ್ ತಂಡದ ಯಶ್ವಂತ್ ಗೋಲು ಹೊಡೆದು ಮಿಂಚಿದರು.