ಕುಶಾಲನಗರ, ಡಿ ೨೭: ಬಾಲಕಿಯೊಬ್ಬಳು ಸೈಕಲ್ನಿಂದ ಬಿದ್ದು ಘಾಸಿಗೊಂಡು ಮೃತಪಟ್ಟ ಘಟನೆ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯಲ್ಲಿ ನಡೆದಿದೆ.ಮೂಲತಃ ಮೈಸೂರು ಜಿಲ್ಲೆಯ ಬನ್ನೂರು ಗ್ರಾಮದ ಕುಮಾರ ಮತ್ತು ಮಂಜುಳಾ ಎಂಬವರ ಪುತ್ರಿ ಮೇಘನಾ (೧೨) ಮೃತ ಬಾಲಕಿ. ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಗೆ ಸಂಬAಧಿಕರ ಮನೆಗೆ ಕಳೆದ ವಾರ ಆಗಮಿಸಿದ್ದ ಮೇಘನಾ ಮನೆಯ ಬಳಿ ಸ್ನೇಹಿತರೊಂದಿಗೆ ಸೈಕಲ್ ತುಳಿಯುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಶನಿವಾರ ಸಂಜೆ ಸೈಕಲ್ನಿಂದ ಕೆಳಗೆ ಬಿದ್ದ ಮೇಘನಾಳ ಪಕ್ಕೆಲುಬು ಭಾಗಕ್ಕೆ ಸೈಕಲ್ ಪೆಡಲ್ ತಾಗಿ ತೀವ್ರ ಅಸ್ವಸ್ಥಗೊಂಡಿದ್ದಳು.ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿ ಮನೆಗೆ ತೆರಳಿದ್ದರು. ರಾತ್ರಿ ೧೦ ಗಂಟೆ ವೇಳೆಗೆ ತೀವ್ರ ಅಸ್ವಸ್ಥಗೊಂಡ ಬಾಲಕಿ ಆಸ್ಪತ್ರೆಗೆ ಕರೆತಂದ ಸಂದರ್ಭ ಚಿಕಿತ್ಸೆ ಫಲಕಾರಿ ಯಾಗದೆ ಮೃತ ಪಟ್ಟಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಮೃತ ಬಾಲಕಿ ೭ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.