ನಾಪೆÉÇÃಕ್ಲು, ಡಿ. ೨೭ : ಸ್ಥಳೀಯ ಪದವಿ ಕಾಲೇಜಿಗೆ ಸೇರಿದ ೪ ಎಕರೆ ಮೈದಾನಕ್ಕೆ ಸೇರಿದ ಜಾಗದಲ್ಲಿ ಅಕೇಶಿಯ ಮತ್ತು ಮ್ಯಾಂಜಿಯA ಮರಗಳಲ್ಲಿ ಸುಮಾರು ೧೫ ಕ್ಕೂ ಹೆಚ್ಚು ಮರಗಳು ಒಣಗಿದ್ದು. ಒಣಗಿದ ಮರಗಳನ್ನು ಕಳ್ಳಕಾಕರು ಕದಿಯುತ್ತಿರುವ ವಿಷಯ ತಿಳಿದು ಬಂದಿದ್ದ ಹಿನ್ನೆಲೆ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಒಣಗಿದ ಮರಗಳನ್ನು ಮಾರಾಟ ಮಾಡಲು ತೀರ್ಮಾನಿಸಿದಂತೆ ಸುಮಾರು ೧೫ ಒಣಗಿದ ಮರಗಳನ್ನು ಮಾರಾಟ ಮಾಡಿ ಅದರ ಹಣವನ್ನು ಕಾಲೇಜಿನ ಖಾತೆಗೆ ಜಮ ಮಾಡಲಾಗಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಹೇಳಿದರು. ತಾ, ೨೭ ರ ಪತ್ರಿಕೆಯಲ್ಲಿ “ವÀÀÄÄಂದುವರಿದ ಮರÀ ಹನನ” ಎಂಬ ಸುದ್ದಿಗೆ ಕಾಲೇಜಿನ ಜಾಗಕ್ಕೆ ಭೇಟಿ ನೀಡಿ ಪ್ರತಿಕ್ರಿಯಿಸಿರುವ ಅವರು. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಭಿವೃದ್ಧಿ ಸಮಿತಿಯ ಸದಸ್ಯ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ಪಾಡಿಯಮ್ಮಂಡ ಮುರುಳಿ ಕರುಂಬಮ್ಮಯ್ಯ ಮಾತನಾಡಿ ಒಣಗಿದ ಮರಗಳನ್ನು ಕಿಡಿಗೇಡಿಗಳು ಕದಿಯುತ್ತಿದ್ದು ಇದನ್ನು ತಪ್ಪಿಸಲು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಾಸಕ ಕೆ.ಜಿ.ಬೋಪಯ್ಯ ಅವರ ಗಮನಕ್ಕೆ ತಂದು, ಮತ್ತು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಾಗ ಈ ಮರಗಳನ್ನು ಕಡಿದು ಮಾರಾಟ ಮಾಡಲು ಪರವಾನಗಿಯ ಅವಶ್ಯಕತೆ ಇಲ್ಲ ಎಂದ ಹಿನ್ನೆಲೆಯಲ್ಲಿ ಒಣಗಿದ ಮರಗಳನ್ನು ಕಡಿದು ಮಾರಲಾಗಿದೆ ಎಂದರು.

ಈ ಸಂದರ್ಭ ಬಿ.ಜೆ.ಪಿ. ಪಕ್ಷದ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಉಪಾಧ್ಯಕ್ಷ ಕೆಲೇಟಿರ ದೀಪು ದೇವಯ್ಯ ಇದ್ದರು.