ಕೂಡಿಗೆ, ಡಿ. ೨೭: ಕುಶಾಲನಗರ ಪ್ರಥಮ ದರ್ಜೆ ಕಾಲೇಜಿನ ರೂ. ೩ ಕೋಟಿ ೯೫ ಲಕ್ಷ ವೆಚ್ಚದ ಹೆಚ್ಚುವರಿ ಕಟ್ಟಡದ ಕಾಮಗಾರಿ ಬರದಿಂದ ಸಾಗುತ್ತಿದೆ.

ಕಳೆದ ಹತ್ತು ತಿಂಗಳ ಹಿಂದೆ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಇರುವುದನ್ನು ಗಮನಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಾಲೇಜು ಅಭಿವೃದ್ಧಿ ಸಮಿತಿ ಯವರಿಂದ ಮತ್ತು ಪ್ರಾಂಶುಪಾಲರಿAದ ಮಾಹಿತಿಯನ್ನು ಪಡೆದು ನೇರವಾಗಿ ರಾಜ್ಯ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಮುಖೇನ ಕಾಮಗಾರಿಗೆ ಕ್ರಿಯಾಶೀಲ ಯೋಜನೆಯನ್ನು ತಯಾರಿಸಿ ಮೊದಲ ಹಂತದ ಹಣವನ್ನು ಬಿಡುಗಡೆಗೊಳಿಸಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಅದರಂತೆಯೇ ಇಲಾಖೆಯ ಮೂಲಕ ಟೆಂಡರ್ ಪ್ರಕ್ರಿಯೆ ನಡೆದು ಈಗಾಗಲೇ ಕಾಮಗಾ ರಿಯು ಶೇ. ೭೫ ರಷ್ಟು ಮುಕ್ತಾಯ ಗೊಂಡಿದೆ. ಈ ಕಾಮಗಾರಿಯು ಕಾಲೇಜಿನ ಹತ್ತು ಹೆಚ್ಚುವರಿ ಕೊಠಡಿ ಮತ್ತು ಕಾರ್ಯವನ್ನು ನಡೆಯಲು ಸಭಾಂಗಣ ಸೇರಿದಂತೆ ಕಂಪ್ಯೂಟರ್ ಕೊಠಡಿಗಳ ನೂತನ ಮಾದರಿಯ ಕಾಮಗಾರಿಯು ನಡೆಯುತ್ತಿದೆ. ಕಟ್ಟಡದ ನಿರ್ಮಾಣದಿಂದ ಹೆಚ್ಚಿನ ಸಂಖ್ಯೆ ಯಲ್ಲಿರುವ ವಿದ್ಯಾರ್ಥಿಗಳಿಗೆ ತರಗತಿ ಯನ್ನು ನಡೆಸಲು ಬಹು ಉಪಯುಕ್ತ ವಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಲಿಂಗಮೂರ್ತಿ ತಿಳಿಸಿದ್ದಾರೆ.