*ಗೋಣಿಕೊಪ್ಪಲು, ಡಿ. ೨೭: ಗೋಣಿಕೊಪ್ಪಲು ಮುಳಿಯ ಆಭರಣ ಮಳಿಗೆಯಲ್ಲಿ ೧೦ ದಿನಗಳ ಕಾಲ ಬೆಳ್ಳಿ ಆಭರಣಗಳು ಮತ್ತು ಬೆಳ್ಳಿ ಪರಿಕರಗಳ ಉತ್ಸವ ಸಿಲ್ವೇರಿಯಾ ಆರಂಭಗೊAಡಿದೆ.
ಗೋಣಿಕೊಪ್ಪಲು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯಕ ವ್ಯವಸ್ಥಾಪಕಿ ಕಟ್ಟೇರ ಪಾರ್ವತಿ, ಗೋಣಿಕೊಪ್ಪಲು ಸುದ್ದಿ ಸಂಸ್ಥೆ ಸಂಚಾಲಕ ಟಿ.ಎಲ್.ಶ್ರೀನಿವಾಸ್ ಹಾಗೂ ಗೋಣಿಕೊಪ್ಪಲು ಸ್ವಯಂ ಪ್ರೇರಣಾ ಬಳಗದ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು ಅವರುಗಳು ಜಂಟಿಯಾಗಿ ಬೆಳ್ಳಿ ಉತ್ಸವಕ್ಕೆ ಚಾಲನೆ ನೀಡಿದರು. ಬೆಳ್ಳಿಯ ಪೀಚೆಕತ್ತಿ, ಬೆಳ್ಳಿ ತಟ್ಟೆ, ದೀಪ, ಕಿವಿಯೋಲೆ, ಉಂಗುರ, ನೆಕ್ಲೇಸ್, ಬ್ರಾಸ್ಲೆಟ್,ಬಳೆ, ಕಾಲುಗೆಜ್ಜೆ, ಚೈನ್ ಇತ್ಯಾದಿಗಳ ಪ್ರದರ್ಶನ ಮತ್ತು ಮಾರಾಟವಿದೆ ಎಂದು ವ್ಯವಸ್ಥಾಪಕ ಅಶೋಕ್ ಬಂಗೇರ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಳಿಯದ ಎಂ.ಸಿ.ದರ್ಶನ್ ಉತ್ತಪ್ಪ ಉಪಸ್ಥಿತರಿದ್ದರು. ಸೌಮ್ಯ ಪ್ರಾರ್ಥಿಸಿದರು.