ಮಡಿಕೇರಿ, ಡಿ. ೨೭: ಜನವರಿ ೨೬, ೨೦೨೧ ರಂದು ದೆಹಲಿಯಲ್ಲಿ ನಡೆಯುವ ರಾಷ್ಟçಮಟ್ಟದ ಗಣ ರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳಲು ಕೊಡಗು ಜಿಲ್ಲೆಯ ಎನ್‌ಸಿಸಿ ಸೀನಿಯರ್ ವಿಭಾಗದಿಂದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಇಬ್ಬರು ಕೆಡೆಟ್‌ಗಳಾದ ಇಂದ್ರಜಿತ್ ಎಂ.ಎಸ್ ಮತ್ತು ಯಶಸ್ವಿ. ಸಿ.ಟಿ ಇವರುಗಳು ಕಾಲೇಜಿನ ಎನ್‌ಸಿಸಿ ಅಧಿಕಾರಿಯಾದ ಮೇಜರ್ ಡಾ. ರಾಘವ್ ಬಿ ಹಾಗೂ ‘೧೯ನೇ ಕರ್ನಾಟಕ ಬೆಟಾಲಿಯನ್’ನ ಅಧಿಕಾರಿಗಳÀ ಮಾರ್ಗದರ್ಶನದಲ್ಲಿ ಆಯ್ಕೆಯಾಗಿದ್ದಾರೆ.
ದ್ವಿತೀಯ ಬಿ.ಬಿ.ಎ ವಿದ್ಯಾರ್ಥಿಯಾದ ಇಂದ್ರಜಿತ್ ಎಂ.ಎಸ್ ತಾಳತ್‌ಮನೆಯ ನಿವಾಸಿಯಾದ ಸುಬ್ರಮಣಿ.ಎಂ.ಜಿ ಮತ್ತು ಸುಜಾತ ಎಂ.ಎಸ್ ದಂಪತಿಯ ಪುತ್ರ. ದ್ವಿತೀಯ ಬಿಎಸ್‌ಸಿಯ ಯಶಸ್ವಿ ಸಿ.ಟಿ. ಪಾರಾಣೆ, ಕೊಣಂಜಗೇರಿ ನಿವಾಸಿಗಳಾದ ಚಾವಂಡ ಮನು ತಮ್ಮಯ್ಯ ಮತ್ತು ಸಮಿತ ಅವರ ಪುತ್ರಿಯಾಗಿದ್ದಾಳೆ.