ಮಡಿಕೇರಿ, ಡಿ. ೨೭: ಜಿಲ್ಲೆಯ ಕವಯತ್ರಿಯರಾದ ಹೊಸೂರು ಸಂಗೀತಾ ರವಿರಾಜ್ ವಿರಚಿತ ನಿರುತ್ತರ ಹಾಗೂ ಪೂಜಾರೀರ ಕೃಪಾ ದೇವರಾಜ್ ಬರೆದ ಭಾವದ ಕದ ತಟ್ಟಿ ಕವನ ಸಂಕಲನಗಳು ಬಿಡುಗಡೆಗೊಂಡವು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿರುತ್ತರ ಸಂಕಲನವನ್ನು ಶಕ್ತಿ ಸಹಾಯಕ ಸಂಪಾದಕ ಬಿ.ಜಿ. ಅನಂತಶಯನ ಬಿಡುಗಡೆ ಮಾಡಿದರೆ, ಭಾವದ ಕದತಟ್ಟಿ ಸಂಕಲನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ್ ಬಿಡುಗಡೆ ಗೊಳಿಸಿದರು. ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಇನ್ನಿತರರು ಪಾಲ್ಗೊಂಡಿದ್ದರು.