ಮಡಿಕೇರಿ, ಡಿ. ೨೭ : ನಗರದ ಶ್ರೀ ಓಂಕಾರೇಶ್ವರ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಹಿನ್ನೆಲೆ ಇಂದು ಬೆಳಗ್ಗೆ ೬ ಗಂಟೆಯಿAದ ಗಣಪತಿ ಹೋಮ, ಬಿಂಬ ಶುದ್ಧಿ, ಕಲಶ ಪೂಜೆ (ಚತುಃಶುದ್ಧಿ, ಪಂಚಕ ಧಾರೆ), ಬಿಂಬ ಶುದ್ಧಿ ಕಲಶಾಭಿಷೇಕ, ಅಂಕುರ ಪೂಜೆ, ಪ್ರೋಕ್ತ ಹೋಮ, ಪ್ರಾಯಶ್ಚಿತ ಹೋಮ, ಹೋಮ ಕಲಶಾಭಿಷೇಕಗಳು, ಸಂಜೆ ೭ ಗಂಟೆಗೆ ದುರ್ಗಾಪೂಜೆ, ಅಂಕುರ ಪೂಜೆ ನೆರವೇರಿತು. ಬ್ಮಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನೆರವೇರಿತು.
ತಾ.೨೮ (ಇಂದು) ರಂದು ಬೆಳಗ್ಗೆ ೬ ಗಂಟೆಯಿAದ ಗಣಪತಿ ಹೋಮ, ಅಂಕುರ ಪೂಜೆ, ಚೋರ ಶಾಂತಿ, ಸ್ವಶಾಂತಿ, ಅದ್ಭುತ ಶಾಂತಿ ಹೋಮಗಳು, ಹೋಮ ಕಲಶಾಭಿಷೇಕ, ರಾತ್ರಿ ೭ ಗಂಟೆಯಿAದ ಅಂಕುರ ಪೂಜೆ, ದುರ್ಗಾ ನಮಸ್ಕಾರ ಪೂಜೆ, ಬ್ರಹ್ಮ ಕಲಶ ಮಂಟಪ ಸಂಸ್ಕಾರ ನಡೆಯಲಿದೆ.