ಕುಶಾಲನಗರ, ಡಿ. ೨೭: ಕೊಡಗು ಜಿಲ್ಲೆ ಮತ್ತೆ ಪ್ರವಾಸಿಗರಿಂದ ತುಂಬಿ ತುಳುಕಲು ಆರಂಭಗೊAಡಿದೆ. ಕೊರೊನಾ ಸೋಂಕಿನ ನಡುವೆ ಕಳೆದ ೧೦ ತಿಂಗಳ ಅವಧಿಯಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರ ಭೇಟಿ ಬಹುತೇಕ ಕ್ಷೀಣಗೊಂಡು ಜಿಲ್ಲೆಯ ಪ್ರವಾಸಿ ಕೇಂದ್ರಗಳು ಬಿಕೋ ಎನ್ನುವಂತಾಗಿತ್ತು. ಇದೀಗ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆ ಮೈಸೂರು ಮತ್ತು ಹಾಸನ ಭಾಗದಿಂದ ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಚೇತರಿಕೆ ಕಂಡುಬAದಿದೆ.
ಕುಶಾಲನಗರದ ಕಾವೇರಿ ಬುಕ್ಕಿಂಗ್‌ಗಳು ಪ್ರಾರಂಭಗೊAಡಿವೆ ಎಂದು ಸ್ಥಳೀಯ ಹೊಟೇಲ್ ಉದ್ಯಮಿ ಬಾಲಕೃಷ್ಣ ತಿಳಿಸಿದ್ದಾರೆ. ಕುಶಾಲನಗರ ಸಮೀಪದ ಟಿಬೇಟಿಯನ್ ನಿರಾಶ್ರಿತರ ಶಿಬಿರದಲ್ಲಿರುವ ಗೋಲ್ಡನ್ ಟೆಂಪಲ್ ಇನ್ನಷ್ಟೇ ಪ್ರವಾಸಿಗರ ಭೇಟಿಗೆ ಅನುಮತಿ ಕಲ್ಪಿಸಬೇಕಾಗಿದೆ.