ಅಮ್ಮತ್ತಿ, ಡಿ. ೨೭: ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚುನಾವಣೆ ಅಭ್ಯರ್ಥಿಗಳಿಗೆ ನೀಡಲಾಗಿದ್ದ ಮತದಾರರ ಪಟ್ಟಿ ಹಾಗೂ ಮತಗಟ್ಟೆಯಲ್ಲಿದ್ದ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸ ಕಂಡುಬAದ ಹಿನ್ನೆಲೆ ಚುನಾವಣಾ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಅಭ್ಯರ್ಥಿಗಳ ಹೆಸರು ನೋಂದಾವಣೆ ಸಂದರ್ಭದಲ್ಲಿ ಹಾಗೂ ಹೆಸರು ಪರಿಶೀಲನೆ ಸಂದರ್ಭದಲ್ಲಿ ನೀಡಲಾಗಿರುವ ಮತದಾರರ ಪಟ್ಟಿಯ ಪ್ರಕಾರ ಮತದಾರರಿಗೆ ಅಭ್ಯರ್ಥಿಗಳು ಮತದಾರರ ಚೀಟಿಯನ್ನು ನೀಡಿಲಾಗಿತ್ತು. ಆದರೆ ಇದೀಗ ಮತದಾರರ ಪಟ್ಟಿ ಬದಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಭ್ಯರ್ಥಿ ಬಿದ್ದಂಡ ಪ್ರಥಮ ಕರುಂಬಯ್ಯ, ಮತದಾರರ ಪಟ್ಟಿ ಬದಲಾವಣೆಯಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು