ಕುಶಾಲನಗರ, ಡಿ. ೨೬: ಹೊಸ ವರ್ಷಾಚರಣೆ ಹಿನ್ನೆಲೆ ಕುಶಾಲನಗರ ಪೊಲೀಸ್ ವಿಶ್ರಾಂತಿ ಗೃಹದಲ್ಲಿ ಹೋಂಸ್ಟೇ, ರೆಸಾರ್ಟ್ ಮಾಲೀಕರ ಸಭೆ ನಡೆಯಿತು.

ಡಿವೈಎಸ್ಪಿ ಹೆಚ್.ಎಂ. ಶೈಲೇಂದ್ರ ಅಧ್ಯಕ್ಷತೆಯಲ್ಲಿ ಕುಶಾಲನಗರ ಪಟ್ಟಣ, ಗ್ರಾಮಾಂತರ ಹಾಗೂ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹೋಂಸ್ಟೇ, ರೆಸಾರ್ಟ್ ಮಾಲೀಕ ರೊಂದಿಗೆ ನಡೆದ ಸಭೆಯಲ್ಲಿ ಕೋವಿಡ್-೧೯ ಹಿನ್ನೆಲೆ ಸರಕಾರದ ಮಾರ್ಗಸೂಚಿ ಪಾಲನೆ ಸಂಬAಧ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಪೊಲೀಸರು ಮಾಹಿತಿ ನೀಡಿದರು.

ಈ ಸಂದರ್ಭ ಮಾತನಾಡಿದ ಡಿವೈಎಸ್ಪಿ ಶೈಲೇಂದ್ರ, ಪ್ರವಾಸಿಗರು ನಿಯಮವನ್ನು ಮೀರದಂತೆ ಹೋಂಸ್ಟೆ, ರೆಸಾರ್ಟ್ ಮಾಲೀಕರು ಎಚ್ಚರವಹಿಸಬೇಕಿದೆ ಎಂದರು.

ವೃತ್ತ ನಿರೀಕ್ಷಕ ಎಂ. ಮಹೇಶ್ ಮಾತನಾಡಿ, ಕೊಡಗಿನಲ್ಲಿ ಹೋಂಸ್ಟೇ ಎಂಬ ಅರ್ಥಕ್ಕೆ ತದ್ವಿರುದ್ದವಾಗಿ ಪ್ರವಾಸೋದ್ಯಮ ನಡೆಯುತ್ತಿರುವುದು ಆತಂಕದ ವಿಷಯ.

ಮಧ್ಯವರ್ತಿಗಳು, ಹೋಂಸ್ಟೆ, ರೆಸಾರ್ಟ್ ಗಳನ್ನು ಬಾಡಿಗೆ ಪಡೆದವರು, ವ್ಯವಸ್ಥಾಪಕರು ಕೆಲವೆಡೆ ಅನಧಿಕೃತ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ನೀಡಿದರು. ಇವುಗಳ ಬಗ್ಗೆ ರೆಸಾರ್ಟ್ ಮಾಲೀಕರು ಎಚ್ಚರವಹಿಸಬೇಕಿದೆ ಎಂದರು.

ಸಭೆಯಲ್ಲಿ ಹೊಟೇಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್, ಪ್ರಮುಖ ರಾದ ಕೆ.ಕೆ. ಭಾಸ್ಕರ್ ಸೇರಿದಂತೆ ಹೋಂಸ್ಟೆ, ರೆಸಾರ್ಟ್ ಮಾಲೀಕರು, ಠಾಣಾಧಿಕಾರಿಗಳಾದ ಗಣೇಶ್, ಶಿವಶಂಕರ್, ವೆಂಕಟರಮಣ ಇದ್ದರು.