ಮಡಿಕೇರಿ, ಡಿ. ೨೬: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ತಾ. ೨೪ರಂದು ಮಡಿಕೇರಿಯ ಓಂಕಾರ ಸದನ ಸಭಾಂಗಣದಲ್ಲಿ ಜರುಗಿತು. ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಅಭಿವೃದ್ಧಿ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಿತು. ಎಂ.ಬಿ. ದೇವಯ್ಯ ಅವರು ಮಾತನಾಡಿ, ಸಂಘದ ಅಭ್ಯುದಯಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು. ಪ್ರಸ್ತುತ ಸಾಲಿನಲ್ಲಿ ೩೭.೯೪ ಲಕ್ಷ ರೂ. ಲಾಭವನ್ನು ಗಳಿಸಿದ್ದು, ಸಂಘದ ಮಡಿಕೇರಿಯ ಮುಖ್ಯ ಕಚೇರಿ ೪೧.೨೪ ರೂ.ಗಳಷ್ಟು ನಷ್ಟದಲ್ಲಿದೆ ಎಂದು ಹೇಳಿದರು.
ಹಿಂದಿನ ಸಾಲಿನಲ್ಲಿ ಒಟ್ಟು ರೂ. ೧೪.೪೭ ಕೋಟಿ ಕ್ರೋಢೀಕೃತ ನಷ್ಟವಾಗಿದ್ದು, ವರದಿ ಸಾಲಿನ ವರ್ಷಾಂತ್ಯಕ್ಕೆ ೧೪.೦೭ ಕೋಟಿ ರೂ. ನಷ್ಟದಲ್ಲಿ ಮುಂದುವರೆಯುತ್ತಿದೆ. ಹುಣಸೂರಿನಲ್ಲಿರುವ ೩೦ ಎಕರೆ ಖಾಲಿ ಜಾಗದಲ್ಲಿ ವಾಣಿಜ್ಯೋದ್ದೇಶದ ಕಟ್ಟಡಗಳನ್ನು ನಿರ್ಮಾಣ ಮಾಡಿ ಸಂಘದ ಆದಾಯವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಇದಕ್ಕೆ ಸರ್ವ ಸದಸ್ಯರ ಒಪ್ಪಿಗೆ ಬೇಕು ಎಂದು ಮನವಿ ಮಾಡಿದರು. ಡಿಸಿಸಿ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ಪಾವತಿಯಲ್ಲಿ ರಿಯಾಯಿತಿ ನೀಡಿರುವುದಲ್ಲದೆ, ಮಾಸಿಕ ಕಂತುಗಳ ಅನುಕೂಲವನ್ನು ಮಾಡಿಕೊಟ್ಟಿದೆ. ಸಂಘಕ್ಕೆ ಸೇರಿದ ಮಡಿಕೇರಿಯ ಕಟ್ಟಡದಲ್ಲಿ ಈ ಸ್ಟಾö್ಯಂಪಿAಗ್, ಆರ್ಟಿಸಿ ಮತ್ತಿತರ ಸೌಲಭ್ಯಗಳ ಸೇವಾ ಕೇಂದ್ರವನ್ನು ಆರಂಭಿಸಲಾಗುವುದೆAದು ಸಭೆಯ ಗಮನ ಸೆಳೆದರು.
ಸಭೆಯಲ್ಲಿದ್ದ ಸದಸ್ಯರುಗಳು ಸಂಘದಲ್ಲಾಗುತ್ತಿರುವ ಲಾಭ, ನಷ್ಟದ ಕುರಿತು ಚರ್ಚಿಸಿದರು. ನಿರ್ದೇಶಕರುಗಳಾದ ನಾಪಂಡ ರವಿಕಾಳಪ್ಪ, ಸುವಿನ್ ಗಣಪತಿ, ಪಿ.ಸಿ. ಕಾವೇರಮ್ಮ, ಚೆಟ್ರಂಡ ಲೀಲಾ ಮತ್ತಿತರರು ಉಪಸ್ಥಿತರಿದ್ದರು.