ಸೋಮವಾರಪೇಟೆ, ಡಿ. ೨೬: ಭೂಮಿಯ ಮೇಲಿನ ಸ್ವರ್ಗದಂತಿರುವ ಕೊಡಗಿನಲ್ಲಿ ಆಸ್ತಿ ಹೊಂದಿರುವವರು ಯಾವದೇ ಕಾರಣಕ್ಕೂ ಮಾರದೇ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಕರೆ ನೀಡಿದರು.
ಇಲ್ಲಿನ ಕೊಡವ ಸಮಾಜದ ವತಿಯಿಂದ ಆಯೋಜಿಸಿದ್ದ ಪುತ್ತರಿ ಊರೋರ್ಮೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಜೀವಿಸುತ್ತಿರುವ ಕೊಡಗು ಜಿಲ್ಲೆಯೇ ನಿಜವಾದ ಸ್ವರ್ಗಲೋಕ. ನಮ್ಮ ಹಿರಿಯರು ಉಳಿಸಿ, ಬೆಳೆಸಿ ಕೊಂಡು ನಮಗೆ ಹಸ್ತಾಂತರಿಸಿರುವ ಭೂಮಿಯನ್ನು ಅನ್ಯರಿಗೆ ಮಾರಾಟ ಮಾಡಲು ಮುಂದಾಗಬೇಡಿ ಎಂದರು.
ಕೊಡವರು ವೀರರು, ಶೂರರು ಆಗಿದ್ದಾರೆ. ಸೈನ್ಯ, ಕ್ರೀಡಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ, ರಾಷ್ಟçಕ್ಕೆ ಸೇವೆ ನೀಡಿದ್ದಾರೆ. ಕೊಡವ ಜನಾಂಗದ ಕಲೆ ಮತ್ತು ಸಂಸ್ಕೃತಿ, ಉಡುಗೆ-ತೊಡುಗೆಗಳು ವಿಶಿಷ್ಟವಾಗಿದ್ದು ಇದು ಪ್ರಪಂಚದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಕೊಡವ ಜನಾಂಗದ ಮೇಲೆ ಅಭಿಮಾನ ಹೊಂದಿ ಇತರ ಜನಾಂಗದವರನ್ನೂ ಪ್ರೀತಿಸುವಂತಾಗಬೇಕು ಎಂದು ರಂಜನ್ ಅಭಿಪ್ರಾಯಿಸಿದರು.
ಮುಖ್ಯ ಅತಿಥಿಯಾಗಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಡುವAಡ ಎಸ್. ಚಂಗಪ್ಪ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಪೈಪೋಟಿ ನಡೆಸಲು ಇಂಗ್ಲಿಷ್ ಭಾಷೆ ಅವಶ್ಯಕವಿರಬಹುದು, ಆದರೆ ನಮ್ಮ ಜನಾಂಗದ ಅಭಿವೃದ್ಧಿಗೆ ಮಾತೃಭಾಷೆ ಅತ್ಯಾವಶ್ಯಕವಾಗಿದ್ದು, ಭಾಷಾ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.
ಜನಾಂಗದವರ ಬಗ್ಗೆಯೇ ದೋಷಾರೋಪ ಮಾಡುತ್ತಾ ತುಳಿಯುವದನ್ನು ಬಿಟ್ಟು, ಜನಾಂಗ ಬಾಂಧವರೊAದಿಗೆ ಉತ್ತಮ ಬಾಂಧವ್ಯವನ್ನಿಟ್ಟುಕೊAಡು ಸಮಾಜಮುಖಿಯಾಗಿ ಸಾಗುವುದನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ಮತ್ತೋರ್ವ ಅತಿಥಿ ಉದ್ಯಮಿ ಕೊಂಗAಡ ವಿನಯ್ ಸೋಮಯ್ಯ ಮಾತನಾಡಿ, ಕೊಡಗಿನಿಂದ ಹೊರ ರಾಜ್ಯ, ರಾಷ್ಟçಗಳಿಗೆ ತೆರಳಿರುವವರು ಅಲ್ಲಲ್ಲಿ ಕೊಡವ ಕೂಟಗಳನ್ನು ಕಟ್ಟಿಕೊಂಡು ಸಂಭ್ರಮಿಸುತ್ತಿದ್ದಾರೆ. ವಿದೇಶಗಳಲ್ಲಿಯೂ ಕೊಡವರಿಗೆ ವಿಶೇಷ ಗೌರವವಿದೆ. ನಮ್ಮ ಯುವ ಜನಾಂಗ ವಿಶಿಷ್ಟ ಆಚಾರ ಪದ್ದತಿಗಳ ಬಗ್ಗೆ ತಿಳಿದುಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು ಎಂದು ಅಭಿಪ್ರಾಯಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಮಾಜದ ಅಧ್ಯಕ್ಷ ಮಾಳೇಟಿರ ಬಿ. ಅಭಿಮನ್ಯುಕುಮಾರ್ ಮಾತನಾಡಿ, ಕೊಡವರ ವಿರೋಧಿ ಟಿಪ್ಪುಸುಲ್ತಾನ್ ಜನ್ಮದಿನಾಚರಣೆ ನಡೆಸಲು ಹೋಗಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡಿದ್ದಾರೆ. ಇದೀಗ ರಾಜಕೀಯವಾಗಿ ಮೂಲೆ ಗುಂಪಾಗಿದ್ದರೂ ಸಹ ಕೊಡವರು ದನದ ಮಾಂಸ ತಿನ್ನುತ್ತಾರೆ ಎಂದು ಹೇಳಿ, ಜನಾಂಗವನ್ನು ನಿಂದಿಸಿರುವುದು ಖಂಡನೀಯ. ಕೊಡವರು ಗೋಮಾತೆ ಆರಾಧಕರಾಗಿದ್ದಾರೆಯೇ ಹೊರತು ಭಕ್ಷö್ಯಕರಾಗಿಲ್ಲ ಎಂದರು.
ಬೆಟ್ಟಗುಡ್ಡಗಳ ಮಧ್ಯೆ ನೆಲೆಸಿರುವ ಕೊಡವರು ನಿಜವಾಗಿಯೂ ಬುಡಕಟ್ಟು ಜನಾಂಗದವರು, ಇವರ ಮೀಸಲಾತಿಗಾಗಿ ಸಿ.ಎನ್.ಸಿ. ಹೋರಾಟ ನಡೆಸುತ್ತಿರುವುದು ಶ್ಲಾಘನೀಯ. ಮೀಸಲಾತಿ ಜಾರಿಗೆ ಬಂದರೆ ಜನಾಂಗ ಬಾಂಧವರು ಹೆಚ್ಚಿನ ಹುದ್ದೆ, ಅಧಿಕಾರ ಪಡೆಯಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ಕ್ರೀಡಾಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ವೇದಿಕೆಯಲ್ಲಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಕೋಚಮಂಡ ಮನುಬಾಯಿ ಚಿಣ್ಣಪ್ಪ, ಸಮಾಜ ಉಪಾಧ್ಯಕ್ಷ ಬಾಚಿನಾಡಂಡ ಪೂಣಚ್ಚ, ಕಾರ್ಯದರ್ಶಿ ಪಂದ್ಯAಡ ಶರತ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಅಜ್ಜಮಕ್ಕಡ ಅಕ್ಷಿತಾ ಕಾರ್ಯಪ್ಪ ಮತ್ತು ತಂಡದವರಿAದ ಉಮ್ಮತ್ತಾಟ್, ಕೊಡವ ನೃತ್ಯಗಳು ಹಾಗೂ ವಾಲಗತ್ತಾಟ್ ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.