ಸುಂಟಿಕೊಪ್ಪ, ಡಿ. ೨೬: ಸಂತ ಅಂತೋಣಿ ದೇವಾಲಯದಲ್ಲಿ ಕ್ರೆöÊಸ್ತ ಬಾಂಧವರು ಪವಿತ್ರ ಕ್ರಿಸ್ಮಸ್ ಹಬ್ಬವನ್ನು ಸರಳವಾಗಿ ಆಚರಿಸಿದರು. ಕೊರೊನಾ ಹಿನ್ನೆಲೆ ದೇವಾಲಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಹಬ್ಬಾಚರಣೆ ನೆರವೇರಿತು.

ಈ ವರ್ಷ ಕೊರೊನಾ ಹಿನ್ನೆಲೆ ಆರೋಗ್ಯ ದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ಸಂತ ಅಂತೋಣಿ ದೇವಾಲಯದ ಬಣ್ಣ ಬಣ್ಣದ ವಿದ್ಯುತ್ ದೀಪ ಗಮನಸೆಳೆಯಿತು. ಸರಕಾರದ ಆದೇಶದಂತೆ ಥರ್ಮಲ್ ಸ್ಕಿçÃನಿಂಗ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರದೊAದಿಗೆ ದೇವಾಲಯ ಮತ್ತು ಸಂತ ಮೇರಿ ಶಾಲಾ ಸಭಾಂಗಣದಲ್ಲಿ ಬಲಿಪೂಜೆಯನ್ನು ನಡೆಸಲಾಯಿತು.

ತಾ. ೨೪ ರಂದು ರಾತ್ರಿ ೭ ಗಂಟೆಗೆ ಹಾಗೂ ೨೫ ರಂದು ಬೆಳಿಗ್ಗೆ ೮.೩೦ ಗಂಟೆಗೆ ಸಂತ ಅಂತೋಣಿ ದೇವಾಲಯ ಹಾಗೂ ಸಂತ ಮೇರಿ ಶಾಲಾ ಸಭಾಂಗಣದಲ್ಲಿ ಗೋದಲಿ(ದನಕೊಟ್ಟಿಗೆ)ಯಲ್ಲಿ ಬಾಲಯೇಸುವನ್ನು ಪ್ರತಿಷ್ಠಾಪಿಸಿ ನಂತರ ವಿಶೇಷ ಗಾಯನ ಬಲಿಪೂಜೆಯನ್ನು ಧರ್ಮ ಗುರುಗಳಾದ ಅರುಳ್ ಸೆಲ್ವಕುಮಾರ್ ಹಾಗೂ ಸಹಾಯಕ ಧರ್ಮ ಗುರುಗಳಾದ ಮದಲೈಮುತ್ತು ಅವರುಗಳು ನೆರವೇರಿಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ ಕ್ರೆöÊಸ್ತ ಬಾಂಧವರು ಈ ದಿವ್ಯ ಬಲಿಪೂಜೆಯಲ್ಲಿ ಭಾಗವಹಿಸಿದ್ದರು.