*ಗೋಣಿಕೊಪ್ಪಲು: ವನಪಾಲಕ ಗುರುರಾಜ್ ಸಾವಿನ ಶವಸಂಸ್ಕಾರದಲ್ಲಿ ಭಾಗವಹಿಸಲು ಶುಕ್ರವಾರದ ಒಂದು ದಿನ ನಾಗರಹೊಳೆ ಸಫಾರಿಗೆ ಬಿಡುವು ನೀಡಲಾಗಿತ್ತು ಎಂದು ನಾಗರಹೊಳೆ ಅರಣ್ಯ ಅಧಿಕಾರಿ ಗೋಪಾಲ್ ತಿಳಿಸಿದ್ದಾರೆ.
ರಾಷ್ಟಿçÃಯ ಉದ್ಯಾನವನದಲ್ಲಿ ಕರ್ತವ್ಯ ನಿರತರಾಗಿದ್ದ ಸಂದರ್ಭ ವನಪಾಲಕ ಗುರುರಾಜ್ ಮೇಲೆ ಆನೆ ದಾಳಿ ನಡೆಸಿತ್ತು. ಈ ಹಿನ್ನೆಲೆ ಶುಕ್ರವಾರ ಅವರÀ ಸಾವಿಗೆ ಕಂಬನಿ ಮಿಡಿದು ನಾಗರಹೊಳೆ ಅರಣ್ಯ ವ್ಯಾಪ್ತಿಯ ಅಧಿಕಾರಿಗಳು, ಸಿಬ್ಬಂದಿ ಒಂದು ದಿನದ ಶೋಕಾಚರಣೆಯನ್ನು ನಡೆಸಿದರು. ಇದರಿಂದ ನಾಗರಹೊಳೆ ಸಫಾರಿಗೆ ಅವಕಾಶ ಕಲ್ಪಿಸದೇ ಬಿಡುವು ನೀಡಲಾಗಿತ್ತು. ಶನಿವಾರ ಸಂಜೆಯಿAದ ಮತ್ತೆ ಯಥಾಸ್ಥಿತಿಯಂತೆ ಸಫಾರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. -ಎನ್.ಎನ್. ದಿನೇಶ್