ಕಳೆದ ೪೨ ಸಂಚಿಕೆಯಲ್ಲಿ ‘ಕಾವೇರಿ ಕಥನ’ವನ್ನು ಬರೆದು ಪ್ರಕಟಿಸಿದ ಶಕ್ತಿ ದಿನ ಪತ್ರಿಕೆಗೆ ಕೃತಜ್ಞತೆಗಳು. ಈ ಮೂಲಕ ಕೊಡಗಿನವರಿಗೆ ಕಾವೇರಿಯ ಮಹಿಮೆಯನ್ನು ತಿಳಿಸಿದಂತಾಗಿದೆ. ಕೊಡಗಿನಲ್ಲಿ ಜನಿಸಿದ ನಾವೇ ಪುಣ್ಯವಂತರು. ಕಾವೇರಿಯು ಅವತರಿಸಿದ ಮತ್ತು ಕೊಡವರ ಕುಲದೇವಿ ಎಂದು ಗೌರವಿಸಲ್ಪಡುವ ಹಾಗೂ ಎಲ್ಲ ಹಿಂದೂ ಬಾಂಧವರ ಆರಾಧ್ಯ ದೈವವಾಗಿರುವ ಹಾಗೂ ಜಾತಿ ಮತ ರಹಿತವಾಗಿ ಸರ್ವರಿಗೂ ಜೀವನದಿಯಾಗಿರುವ ಸರ್ವ ಸಂರಕ್ಷಕಿ ಅವಳು. ಕೊಡಗಿನಲ್ಲಿ ಕಾವೇರಿ ಚರಿತ್ರೆ ಪ್ರಚಾರವಾಗಿ ಜನರಲ್ಲೂ ಧಾರ್ಮಿಕ ಪ್ರಜ್ಞೆಯು ಹೆಚ್ಚಿದಂತಾಯಿತು ಎಂದು ನನ್ನ ಅನಿಸಿಕೆ.

ಈ ಹಿಂದೆ ಖ್ಯಾತ ಸಾಹಿತಿ ಭಾಗಮಂಡಲ ಕ್ಷೇತ್ರದ ದಿ. ಎದುರ್ಕಳ ಶಂಕರನಾರಾಯಣ ಭಟ್ ಅವರು ರಚಿಸಿದ ‘ಕಾವೇರಿ ವೈಭವ’ ಗ್ರಂಥವು ಕೂಡಾ ಕೊಡಗಿನಾದ್ಯಂತ ಜನರಿಗೆ ಕಾವೇರಿಯ ಬಗ್ಗೆ ಜ್ಞಾನ ಯಜ್ಞವನ್ನು ಮಾಡಲು ಸಫಲವಾಗಿತ್ತು. ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ ಕಾವೇರಿ ನದಿಗೆ ನಮ್ಮ ಸಂಸ್ಕೃತಿಯಲ್ಲಿ ಬಹಳ ಮಹತ್ವವಿದೆ. ಪ್ರತಿ ಭಾರತೀಯನ ಜೀವನದ ಐಹಿಕ, ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ನದಿಗಳ ಪಾತ್ರ ಅಥವಾ ಮಹತ್ವ ಎದ್ದು ಕಾಣುತ್ತದೆ ಎಂಬುದನ್ನು ಕಾವೇರಿ ಕಥನದಲ್ಲಿ ಮನದಟ್ಟು ಮಾಡಿದ್ದಾರೆ. ಜನ ಜೀವನದಲ್ಲಿ ಕಾವೇರಿಯ ಪ್ರಭಾವ ಬೆಳಗಲು ಕಾರಣವಾಗಿದೆ.

ಈ ಆಧುನಿಕ ಕಾಲದಲ್ಲಿ ಕಾವೇರಿಯು ನಿತ್ಯ ನೂತನೆ ಮತ್ತು ಪವಿತ್ರಳಾದ ಕಾವೇರಿಯು ಭಕ್ತ ಕೋಟಿಯ ಪಾಲಿಗೆ ಪ್ರತ್ಯಕ್ಷ ಪರಮೇಶ್ವರಿಯೇ ಆಗಿದ್ದಾಳೆ. ಜನರ ಪಾಪವನ್ನು ಪರಿಹರಿಸಿ ಪುಣ್ಯವನ್ನು ನೀಡುವ ನದಿಗಳು ಈ ದೇಶದಲ್ಲಿ ಸಾಕಷ್ಟು ಇದ್ದರೂ. ಕಾವೇರಿಯು ಹರಿದು ತನ್ನ ಸುತ್ತಮುತ್ತಲಿನ ಪ್ರದೇಶವನ್ನು ಕೃಷಿ ಭೂಮಿಯನ್ನಾಗಿ ಮಾಡಿ ಪುಣ್ಯ ಸಂಪತ್ತಿನ ಜೊತೆಗೆ ಭೌತಿಕ ಸಂಪತ್ತನ್ನೂ ಕಾವೇರಿ ಮಾತ್ರ ನೀಡಿದ್ದಾಳೆ.

ಅನುಭವ ಸುರುಳಿ

ಕಾವೇರಿಯ ಮಹಿಮೆಯನ್ನು ಗೊತ್ತಿದ್ದವರು ಮಾತ್ರ ಅನುಭವಿಸಿದ್ದಾರೆ. ಈ ವಿಚಾರದಲ್ಲಿ ಒಂದು ಚಿಕ್ಕ ಘಟನೆಯನ್ನು ಜ್ಞಾಪಿಸುತ್ತಿದ್ದೇನೆ. ೧೯೮೨ರ ಅಕ್ಟೋಬರ್ ತಿಂಗಳಲ್ಲಿ ಪ್ರತಿವರ್ಷದಂತೆ ತೀರ್ಥೋದ್ಭವವು ರಾತ್ರಿ ವೇಳೆ ಸುಮಾರು ೧೨.೧೬ ಗಂಟೆಗೆ ನಿಗದಿಯಾಗಿತ್ತು. ಅಂದು ಕೊಡಗು ದೇವಸ್ಥಾನಗಳ ನಿಧಿ ವ್ಯವಸ್ಥಾಪನಾ ಸಮಿತಿ (ಕೂರ್ಗ್ ಟೆಂಪಲ್ ಫಂಡ್ಸ್ ಮ್ಯಾನೇಜ್‌ಮೆಂಟ್ ಕಮಿಟಿ)ಯು ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗಿತ್ತು. ರಾತ್ರಿಯ ವೇಳೆ ತೀರ್ಥೋದ್ಭವ ಆಗಿರುವುದರಿಂದ ಬೆಳಕಿನ ವ್ಯವಸ್ಥೆಗಾಗಿ ಜನರೇಟರ್ ಏರ್ಪಡಾಗಿತ್ತು. ಕೂರ್ಗ್ ಟೆಂಪಲ್ ಫಂಡ್ಸ್ ಮ್ಯಾನೇಜ್‌ಮೆಂಟ್ ಕಮಿಟಿಗೆ ಅಧ್ಯಕ್ಷರಾಗಿ ಕೊಡಗು ಜಿಲ್ಲಾಧಿಕಾರಿಗಳೇ ಆಗಿದ್ದರು. ತೀರ್ಥೋದ್ಭವವನ್ನು ಮುಹೂರ್ತಕ್ಕೆ ಸರಿಯಾಗಿ ಕಣ್ತುಂಬಿಸಿಕೊಳ್ಳಬೇಕೆAದು ತೀರ್ಥ ಕುಂಡಿಕೆಯ ಅತೀ ಸಮೀಪದಲ್ಲಿ ೧೦೦೦ ವೋಟ್‌ನ ಬಲ್ಬನ್ನು ಅಳವಡಿಸಲಾಗಿತ್ತು. ತೀರ್ಥೋದ್ಭವವು ಮುಹೂರ್ತಕ್ಕೆ ಸರಿಯಾಗಿ ಮೇಲೇರುತ್ತದೆ ಎಂಬದನ್ನು ಪರಿಶೀಲಿಸಲು ಈ ವ್ಯವಸ್ಥೆ ಮಾಡಲಾಗಿತ್ತು. ಮುಹೂರ್ತದ ವೇಳೆ ಸಮೀಪಿಸುತ್ತಿತ್ತು. ರಾತ್ರಿ ೧೨.೧೪ ಗಂಟೆಯಾಯ್ತು. ಜಿಲ್ಲಾಧಿಕಾರಿಯವರು ಮತ್ತು ತೀರ್ಥ ಕುಂಡಿಕೆಗೆ ವರ್ಷಂಪ್ರತಿಯAತೆ ಸುತ್ತುವರಿದ ಅರ್ಚಕರಾದಿ, ಭಕ್ತರು ಕಾವೇರಿಯ ಜಯಘೋಷ ಹಾಕುತ್ತಿದ್ದಾರೆ. ಗಂಟೆ ೧೨.೧೫ ಆಯ್ತು. ೧೦೦೦ ವೋಲ್ಟ್ ಬಲ್ಬ್ ಢಮಾರ್ ಎಂಬ ದೊಡ್ಡ ಶಬ್ದದೊಡನೆ ಒಡೆದು ಚೂರು ಚೂರಾಗಿ ಹೋಗಿದೆ. ಜಿಲ್ಲಾಧಿಕಾರಿ ಗಳು ಅವರ ಅಂಗರಕ್ಷಕರೊಡನೆ ಎಲ್ಲಿಗೆ ಹೋದರೆಂದೇ ಗೊತ್ತಾಗಿಲ್ಲ. ಭಕ್ತರು ಇದನ್ನು ನೋಡಿ ಮೂಕ ವಿಸ್ಮಿತ ರಾದರು. ಯಾರಿಗೂ ಯಾವುದೇ ತೊಂದರೆ ಆಗದೆ ತೀರ್ಥೋದ್ಭವ ಮುಹೂರ್ತದಂತೆ ಸಂಭವಿಸಿತಾ ದರೂ ಅಂದು ನಡೆದ ಘಟನೆ ಅಲ್ಲಿ ಆಗಮಿಸಿದ ಭಕ್ತರಿಗೆ ವಿದ್ಯುತ್ ಸಂಚಾರದAತಾಯಿತು. ಕಾವೇರಿ ಯನ್ನು ಪರೀಕ್ಷೆ ಮಾಡಿದ ಫಲವೆಂದು ಅಂದು ಆ ಸಮಯದಲ್ಲಿ ಹಾಜರಿದ್ದವರು ಉದ್ಗಾರ ಮಾಡಿರುತ್ತಾರೆ.

ನೈಜ ಘಟನೆ

ಇದೊಂದು ಘಟನೆ ಯಾದರೆ ಇನ್ನು ಅನೇಕ ಸತ್ಯ ಘಟನೆಗಳು ನಡೆದಿದೆ. ತೀರ್ಥ ಸ್ನಾನ ಮಾಡಿ ಚರ್ಮರೋಗ ನಿವಾರಣೆ, ಭಕ್ತಿಯಿಂದ ತೀರ್ಥ ಪೂಜೆ ಮಾಡಿದ ಮೀನು ಗಾರರು ಮೀನುಗಾರಿಕೆಯಿಂದ ಮುಂದೆ ಬಂದಿರುವ ಘಟನೆಗಳು ಸಾಕಷ್ಟು ಇದೆ. ವಿವಾಹಗಳ ಬಗ್ಗೆ ಪೂಜೆ, ಪ್ರಾರ್ಥನೆಯನ್ನು ನಡೆಸಿ ವಿವಾದ ಬಗೆ ಹರಿದು ಯಶಸ್ಸು ಕಂಡ ಅನೇಕ ಭಕ್ತರು ಇದ್ದಾರೆ.

ದೀಪದ ಗುಡಿ ನಿರ್ಮಾಣ

ತಲಕಾವೇರಿಯಲ್ಲಿ ಈ ಹಿಂದೆ ಅಂದಾಜು ೧೯೬೭ ಇರಬಹುದು. ಕೊಡಗಿನ ದಾನಿಗಳಾದ ಪಂದಿಕುತ್ತೀರ ಚೆಂಗಪ್ಪ ಅವರು ಕಾವೇರಿ ತೀರ್ಥ ಕುಂಡಿಕೆಯ ದೀಪದ ಗುಡಿಯನ್ನು ತೆಗೆದು ಅಲಂಕಾರದಿAದ ಕೂಡಿದ ಕೆತ್ತನೆ ಮಾಡಲ್ಪಟ್ಟ ಗುಡಿಯನ್ನು ನಿರ್ಮಿಸಿ ಕೊಟ್ಟಿರುತ್ತಾರೆ. ಈ ಬಗ್ಗೆ ತಂತ್ರಿಗಳಾದ ಬ್ರಹ್ಮ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳು ೨ ದಿವಸದಲ್ಲಿ ಶುದ್ಧ ಕಲಶ, ಬ್ರಹ್ಮಕಲಶ ವನ್ನು ಮಾಡಿ ತೆರಳಿರುತ್ತಾರೆ. ಆ ಸಮಯದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದೇವಸ್ಥಾನ ನಿಧಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಗಿದ್ದ ಸಿದ್ಧಯ್ಯ ಪುರಾಣಿಕ್ ಅವರ ನೇತೃತ್ವದಲ್ಲಿ ನಡೆಯಿತು. ಮುಂದಿನ ೨-೩ ವರ್ಷಗಳಲ್ಲಿ ಲಯನ್ಸ್ ಕ್ಲಬ್‌ನ ಪ್ರಾಯೋಜಕತ್ವದಲ್ಲಿ ಬ್ರಹ್ಮಗಿರಿಗೆ ಮೆಟ್ಟಿಲು ಗಳನ್ನು ನಿರ್ಮಿಸಿರುತ್ತಾರೆ. ಮಾಜಿ ಸಚಿವರಾಗಿದ್ದ ದಿ. ಡಿ. ಎ. ಚಿಣ್ಣಪ್ಪರವರು ಲಯನ್ಸ್ ಅಧ್ಯಕ್ಷರಾಗಿದ್ದು ಸಕ್ರಿಯ ಲಯನ್ಸ್ ಕ್ಲಬ್‌ನ ಸದಸ್ಯರಾಗಿದ್ದ ಭಾಗಮಂಡಲದ ನಿವಾಸಿ ಭಕ್ತ ಹೊಸೂರು ಡಿ. ಜೋಯಪ್ಪರವರ ನೇತೃತ್ವದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಯಿತು. ಅಷ್ಟರ ತನಕ ಪ್ರತಿವರ್ಷವೂ ಬ್ರಹ್ಮಗಿರಿಗೆ ಹತ್ತುವ ಅಥವಾ ಇಳಿಯುವ ಸಂದರ್ಭದಲ್ಲಿ ತುಂಬಾ ತೊಂದರೆ ಯನ್ನು ಮನಗಂಡು ಭಕ್ತರ ಬೇಡಿಕೆ ಯಂತೆ ಮೆಟ್ಟಿಲುಗಳನ್ನು ನಿರ್ಮಿಸ ಲಾಯಿತು. ಮೆಟ್ಟಿಲುಗಳಿಗೆ ಶಿಲೆಗಳನ್ನು ಕಾರ್ಕಳದಿಂದ ತರಿಸಲಾಗಿತ್ತು. ಆ ಬಳಿಕ ೧೯೯೫ರಲ್ಲಿ ಅಂದಿನ ಸಮಿತಿಯ ಕಡೆಯಿಂದ ಅಷ್ಟಮಂಗಲ ಪ್ರಶ್ನೆ ಜರುಗಿ ಅದಕ್ಕನುಗುಣ ವಾಗಿ ಮುಂದಿನ ಕ್ರಮ ವಹಿಸಲಾಯಿತು. ಪ್ರಾರಂಭ ದಲ್ಲಿ ಜೀರ್ಣೋದ್ಧಾರ ಗೊಳ್ಳುವ ಬಗ್ಗೆ ಹಲವು ವರ್ಷ ಗಳು ಕೊಡಗು ಏಕೀಕರಣ ರಂಗ ಮೊದಲಾಗಿ ವಿವಿಧ ಸಂಘಟನೆಗಳ ಬೇಡಿಕೆ, ಭಕ್ತರ ಆಗ್ರಹವು ಸಾಕಷ್ಟು ಸಲ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ.

‘‘ಶಕ್ತಿ’’ಯಲ್ಲಿ ಜನಾಭಿಪ್ರಾಯ

ಶಕ್ತಿ ಪತ್ರಿಕೆಯಲ್ಲಿಯೂ ೨ ತಿಂಗಳ ಕಾಲ ಜೀಣೋದ್ಧಾರದ ಪರವಾಗಿ ಲೇಖನಗಳು ಬಂದ ಹಿನ್ನೆಲೆಯಲ್ಲಿ ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳು ಸರ್ಕಾರದ ಮುಂದೆ ಬೇಡಿಕೆಯನ್ನು ಇಟ್ಟ ಹಿನ್ನೆಲೆಯಲ್ಲಿ ಅಂದಿನ ಸರ್ಕಾರವು ಆಗಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಸಹಕಾರದಿಂದ ಕಾವೇರಿ ನಿಗಮದ ಮೂಲಕ ಯೋಜನೆ ಸಿದ್ಧಪಡಿಸಿ ಕಾರ್ಯೋನ್ಮುಖರಾದರು. ಅದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಏಕರೂಪ ಶಾಸನವೂ ಜಾರಿಗೆ ಬಂತು. ಇದೇ ಸಂದರ್ಭದಲ್ಲಿ ಆಸ್ತಿಕ ಭಕ್ತರು ಧರ್ಮಸ್ಥಳಕ್ಕೂ ತೆರಳಿ ಧರ್ಮಾಧಿಕಾರಿಯವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಧರ್ಮಾಧಿಕಾರಿಗಳು ೧-೨ ದಿನ ಕ್ಷೇತ್ರಕ್ಕೆ ಬಂದು ಎಲ್ಲಾ ಮಾಹಿತಿಯನ್ನು ಪಡೆದು ಜೀರ್ಣೋದ್ಧಾರದ ಕ್ರಮವನ್ನು ಪರಿಶೀಲಿಸಿ ಕ್ರಮಕೈಗೊಳ್ಳುವ ತಾತ್ವಿಕ ಒಪ್ಪಿಗೆಯನ್ನು ನೀಡಿದರು. ಈ ಬಗ್ಗೆ ಅಂದಿನ ಮುಖ್ಯಮಂತ್ರಿಗಳು, ಮುಜರಾಯಿ ಸಚಿವರಾದಿಯಾಗಿ ಭಾಗಮಂಡಲ-ತಲಕಾವೇರಿಗೆ ಬಂದು ಪರಿಶೀಲಿಸಿ ಸರ್ಕಾರದಿಂದ ಜೀರ್ಣೋದ್ಧಾರ ಕೈಗೊಳ್ಳುವ ಭರವಸೆ ನೀಡಿದರು.

ಜೀರ್ಣೋದ್ಧಾರ ಕೈಗೊಳ್ಳುವ ಮುನ್ನ ಆಗಿನ ಸಮಿತಿ ಸದಸ್ಯರುಗಳಲ್ಲಿ ಕೆಲವರು ಮಂಗಳೂರಿನ ಸಮೀಪದ ಮರಕಡ ಎಂಬ ಧಾರ್ಮಿಕ ಕೇಂದ್ರಕ್ಕೆ ತೆರಳಿ ಅಲ್ಲಿನ ಗುರುಗಳಾದ ನಾಥ್ ಪಂತದ ಸ್ವಾಮಿ ಶ್ರೀ ನರೇಂದ್ರನಾಥ್ ಅವರೊಂದಿಗೆ ವಿಚಾರ ವಿನಿಮಯ ಮಾಡಿದರು. ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ಪ್ರಾರ್ಥನೆ ಮಾಡಿದರು. ಅಲ್ಲಿಂದ ಹೊರಗೆ ಬರುವ ವೇಳೆಯಲ್ಲಿ ಅತ್ಯಂತ ತೇಜಸ್ಸಿನಿಂದ ಕೂಡಿದ್ದ ಯುವತಿಯೋರ್ವರ ಮೈಯ್ಯಲ್ಲಿ ಆವೇಶ ಬಂದು ಆಕೆ ಸಾಂಸ್ಕೃತಿಕ ನೃತ್ಯದ ಭಂಗಿಯೊAದಿಗೆ ಕಾಣಿಸಿಕೊಂಡರು. ದೈವ ನಡೆಯಲ್ಲಿ ಮಾತನಾಡಿದ ಯುವತಿ ಕಾವೇರಿ ಅಸಾಮಾನ್ಯ ಶಕ್ತಿಯಾಗಿದ್ದಾಳೆ. ಆಕೆ ಅತ್ಯದ್ಭುತ ದೇವತೆಯಾಗಿದ್ದಾಳೆ. ‘‘ಸಮಿತಿಯಿಂದ ಕಾರ್ಯಪ್ರವೃತ್ತರಾಗಿ ನಿಮ್ಮ ಕೆಲಸ ಸಂಪೂರ್ಣ ಗೊಳ್ಳುತ್ತದೆ.’’ ಎಂಬ ಆಶೀರ್ವಾದ ನೀಡಲ್ಪಟ್ಟಿತು. ಇದರಿಂದ ಸಮಿತಿ ಪ್ರಮುಖರು ಸಂತೃಪ್ತಿಗೊAಡು ಶ್ರೀ ಸ್ವಾಮೀಜಿಯವರು ನೀಡಿದ ಪ್ರಸಾದವನ್ನು ಸ್ವೀಕರಿಸಿ ವಾಪಾಸಾದರು.

?ಎಸ್. ಎಸ್. ಸಂಪತ್‌ಕುಮಾರ್,

ಭಾಗಮಂಡಲ.