ಮಾಜಿ ಪ್ರಧಾನಿಯ ಗುಣಗಳನ್ನು ಪಾಲಿಸಲು ಸುನಿಲ್ ಕರೆ
ಮಡಿಕೇರಿ: ಅಟಲ್ ಬಿಹಾರಿ ವಾಜಪೇಯಿ ಅವರಲ್ಲಿದ್ದ ಸ್ವಲ್ಪಮಟ್ಟದ ಗುಣವನ್ನಾದರೂ ನಾವು ಪಾಲಿಸಿ ಬದುಕು ಸಾಗಿಸಲು ಪ್ರಯತ್ನಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸಬ್ರಮಣಿ ಅವರು ಕರೆ ನೀಡಿದರು.
ನಗರ ಬಿ.ಜೆ.ಪಿ. ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಮಾಜಿ ಪ್ರಧಾನಿ ವಾಜಪೇಯಿ ಅವರ ೯೬ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬಿ.ಜೆ.ಪಿ. ಪಕ್ಷವನ್ನು ಕಟ್ಟಲು ಪಕ್ಷದ ಹಿರಿಯರಾದ ಎಲ್.ಕೆ. ಅಡ್ವಾನಿ ಸೇರಿದಂತೆ ವಾಜಪೇಯಿ ಅವರುಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರುಗಳ ನೀತಿಯನ್ನು ಪಾಲಿಸಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕೆಂದರು. ವಾಜಪೇಯಿ ಅವರ ದಿಟ್ಟ, ನೇರ ಮಾತಿನಿಂದಾಗಿ ಸಂಸತ್ತಿನಲ್ಲಿ ಸಂಪೂರ್ಣ ನಿಶಬ್ಧ ಉಂಟಾಗುತ್ತಿತ್ತು. ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿಯವರನ್ನು ವಾಜಪೇಯಿ ಅವರು ದುರ್ಗಾ ಮಾತೆಗೆ ಹೋಲಿಸಿದ್ದರು. ಅವರ ಇಂತಹ ನೇರ ಮಾತು ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಅಜಾತಶತ್ರು ಎಂದೇ ಕರೆಯಲ್ಪಟ್ಟರು. ಅವರ ಹುಟ್ಟುಹಬ್ಬದ ದಿನವಾದ ಇಂದು ಪಕ್ಷದ ಕಾರ್ಯಕರ್ತರೆಲ್ಲ ಅವರನ್ನು ಸ್ಮರಣೆ ಮಾಡಬೇಕಾಗಿ ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ವಾಜಪೇಯಿ ಅವರ ಕುರಿತು ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಕಾರ್ಯಕರ್ತರೆಲ್ಲ ಸರಕಾರದಿಂದ ಒದಗಿಸಲ್ಪಡುವಂತಹ ಸೌಲಭ್ಯಗಳನ್ನು ಸಾಮಾನ್ಯ ಜನರಿಗೆ ತಲುಪಿಸುವಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಪಕ್ಷದ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು, ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಕಾಂಗೀರ ಸತೀಶ್, ನಗರ ಬಿ.ಜೆ.ಪಿ. ಅಧ್ಯಕ್ಷ ಮನು ಮಂಜುನಾಥ್, ಜಿಲ್ಲಾ ವಕ್ತಾರ ಮಹೇಶ್ ಜೈನಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.ಗೋಣಿಕೊಪ್ಪದಲ್ಲಿ ಗೋಪೂಜೆ
*ಗೋಣಿಕೊಪ್ಪಲು: ಭಾರತರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಯುವ ಮೋರ್ಚಾದ ವತಿಯಿಂದ ಗೋ ಶಾಲೆಯ ಸ್ವಚ್ಛತೆ ಮತ್ತು ಗೋಪೂಜೆಯನ್ನು ಮಾಡಿ ಆಚರಿಸಲಾಯಿತು. ಅಮ್ಮತ್ತಿಯ ಕಾವಾಡಿ ಕಾಮಧೇನು ಗೋ ಶಾಲೆಯಲ್ಲಿ ಯುವ ಮೋರ್ಚಾದ ಪದಾಧಿಕಾರಿಗಳು ಸ್ವಚ್ಛತಾ ಅಭಿಯಾನ ನಡೆಸಿ ಗೋವುಗಳಿಗೆ ಮೇವುಗಳನ್ನು ನೀಡಿದರು. ಮುಕ್ಕೋಟಿ ದೇವರುಗಳನ್ನು ನಾವು ಗೋವಿನಲ್ಲಿ ಕಾಣುತ್ತೇವೆ. ಇಂತಹ ಕಾಮದೇನುವನ್ನು ನಾವು ಪ್ರತಿ ಮನೆಗಳಲ್ಲಿ ಪೂಜಿಸಬೇಕಾಗಿದೆ. ನಮಗೆ ಕಾಣುವ ಪ್ರತ್ಯಕ್ಷ ದೇವರೆಂದರೆ ಅದು ಗೋವುಗಳು, ಗೋವಿನ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ದರ್ಶನ್ ಜೋಯಪ್ಪ ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಚೆಂಗಪ್ಪ, ಜಿಲ್ಲಾ ಉಪಾಧ್ಯಕ್ಷÀ ಅಂಜನ್ ಚೆಟ್ಟಳ್ಳಿ, ಜಿಲ್ಲಾ ಕಾರ್ಯದರ್ಶಿಗಳಾದ ಪ್ರೀತಮ್, ತಾತಂಡ ಹಿತೇಶ್, ವಿ. ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಭರತ್, ಕಾರ್ಯದರ್ಶಿ ಪ್ರಧಾನ್, ಜಿಲ್ಲಾ ಸಮಿತಿ ಸದಸ್ಯರುಗಳು, ಜಿಲ್ಲಾ ಬಿಜೆಪಿ ಪ್ರಮುಖರಾದ ಕಾಂತಿ ಸತೀಶ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಮಲಚೀರ ಕವಿತಾ, ಪ್ರಧಾನ ಕಾರ್ಯದರ್ಶಿ ನೂರೇರ ರತಿ ಅಚ್ಚಪ್ಪ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.‘‘ವಾಜಪೇಯಿ ಸೇವೆಯ ಗುರು’’
ವೀರಾಜಪೇಟೆ: ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರು ಎಲ್ಲಾ ರೀತಿಯಿಂದಲೂ ವಿಶ್ವಕ್ಕೆ ಸೇವೆಯ ಗುರುವಾಗಿದ್ದರು. ವಾಜಪೇಯಿ ಅವರು ದೇಶದಲ್ಲಿ ಶಾಲೆಗಳ ನಿರ್ಮಾಣ, ಮಕ್ಕಳಿಗೆ ಬಿಸಿ ಊಟ, ಅಡುಗೆ ಅನಿಲ ವಿತರಣೆಯಲ್ಲಿ ಸುಧಾರಣೆ, ಪೋಕ್ರಾನ್ ಅಣು ಪರೀಕ್ಷೆ, ಕಾರ್ಗಿಲ್ ಯುದ್ಧ ಹೀಗೆ ಹಲವಾರು ವಿಚಾರದಲ್ಲಿ ವಿಶ್ವದ ಗಮನ ಸೆಳೆದು ದೇಶವನ್ನು ವಿಶ್ವದಲ್ಲಿ ಪ್ರಮುಖ ಸ್ಥಾನದಲ್ಲಿರುವಂತೆ ಮಾಡಿದರು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್ ಹೇಳಿದರು.
ವೀರಾಜಪೇಟೆ ಪುರಭವನದÀಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ನಡೆದ ಸರಳ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ದೇಶಕ್ಕೆ ನೀಡಿದ ಅನನ್ಯ ಸೇವೆಯನ್ನು ಭಾರತೀಯರು ಮರೆಯಲು ಸಾಧ್ಯವಿಲ್ಲ. ಬಿಜೆಪಿ ಏನೂ ಅಲ್ಲದ ಕಾಲದಲ್ಲಿ ವಾಜಪೇಯಿ ಸಮರ್ಥ ನಾಯಕರಾಗಿ ಪಕ್ಷ ಸಂಘಟಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೇಶದ ಅಭಿವೃದ್ಧಿಗಾಗಿ ಯಾವ ರೀತಿ ಕೆಲಸ ಮಾಡಬಹುದು ಎಂದು ಮಾರ್ಗದರ್ಶನ ನೀಡಿ ದೇಶಕ್ಕೆ ಮಾದರಿಯಾಗಿ ಸದಾ ಜನಮಾನಸದಲ್ಲಿ ಉಳಿದು ಹೋಗಿದ್ದಾರೆ.
ವೇದಿಕೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್, ಪ.ಪಂ. ಅಧ್ಯಕ್ಷೆ ಸುಶ್ಮಿತಾ, ಜಿ.ಪಂ. ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಾಟೇರಿರ ಬೋಪಣ್ಣ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ, ನಗರ ಬಿಜೆಪಿ ಅಧ್ಯಕ್ಷ ಟಿ.ಪಿ. ಕೃಷ್ಣ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ವಾಜಪೇಯಿ ಅವರ ಭಾವಚಿತ್ರಕ್ಕೆ ಅತಿಥಿಗಳಿಂದ ಪುಷ್ಪ ನಮನ ಸಲ್ಲಿಸಿದರು.ಸೋಮವಾರಪೇಟೆಯಲ್ಲಿ ಸ್ಮರಣೆ
ಸೋಮವಾರಪೇಟೆ: ಬಿಜೆಪಿಯ ಹಿರಿಯ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣೆ ಕಾರ್ಯಕ್ರಮ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಅಜಾತ ಶತ್ರುವಾಗಿದ್ದ ವಾಜಪೇಯಿ ಅವರು ತಮ್ಮ ಆಡಳಿತಾವಧಿಯಲ್ಲಿ ಉತ್ತಮ ಆಡಳಿತ ನೀಡುತ್ತಿದ್ದರೂ ಸಹ ಕಾಂಗ್ರೆಸ್‌ನವರು ಕಿರುಕುಳ ನೀಡುವ ಮೂಲಕ ಅಧಿಕಾರದಿಂದ ಕೆಳಗಿಳಿಸಿದರು ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ಹೆಚ್ಚಿನ ನೆರವು ನೀಡುವ ಉದ್ದೇಶದಿಂದ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದು ರೈತರ ಖಾತೆಗೆ ನೇರವಾಗಿ ಹಣ ನೀಡುವ ಮೂಲಕ ಆರ್ಥಿಕ ಚೈತನ್ಯ ಒದಗಿಸುತ್ತಿದ್ದಾರೆ ಎಂದರು. ಆದರೆ ರೈತರ ಹೆಸರಿನಲ್ಲಿ ಡೋಂಗಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಮಾತ್ರ ಪ್ರತಿಭಟನೆ ನಡೆಯುತ್ತಿರುವದರ ಹಿಂದೆ ರಾಜಕೀಯ ಕುತಂತ್ರ ಅಡಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಕೃಷಿ ಮೋರ್ಚಾ ಕಾರ್ಯದರ್ಶಿ ಕುಂದಳ್ಳಿ ದಿನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಗೋಣಿಕೊಪ್ಪ: ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ಆಚರಣೆಯನ್ನು ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆ ತಾಲೂಕು ಕೃಷಿ ಮೋರ್ಚಾ ವತಿಯಿಂದ ಆಚರಿಸಲಾಯಿತು. ಪೊನ್ನಂಪೇಟೆ ಬಿಜೆಪಿ ಕಚೇರಿಯಲ್ಲಿ ತಾಲೂಕು ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿ ಜ್ಯೋತಿ ಬೆಳಗಿ ಹುಟ್ಟುಹಬ್ಬ ಆಚರಿಸಿದರು. ಜಿಲ್ಲಾ ಕೃಷಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮತ್ರಂಡ ಕಬೀರ್‌ದಾಸ್, ತಾಲೂಕು ಕೃಷಿ ಪ್ರಧಾನ ಕಾರ್ಯದರ್ಶಿ ತೋರಿರ ವಿನು, ತಾಲೂಕು ಕೃಷಿ ಮೋರ್ಚಾ ಸದಸ್ಯ ಕಟ್ಟೇರ ಕವನ್ ಪೊನ್ನಂಪೇಟೆ ಕೃಷಿ ಮೋರ್ಚಾ ಅಧ್ಯಕ್ಷ ನಿಲನ್ ಮಂದಣ್ಣ, ಪೊನ್ನಂಪೇಟೆ ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮೂಕಳೇರ ದಿಲುಕುಮಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.