ವೀರಾಜಪೇಟೆ ವರದಿ, ಡಿ. ೨೬: ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಫೆಡರೇಶನ್) ರೂ. ೮.೯೩ ಕೋಟಿ ಸರಕು ಮಾರಾಟ ವಹಿವಾಟು ನಡೆಸಿದ್ದು, ರೂ. ೬೮.೭೦ ಲಕ್ಷ ಲಾಭ ಗಳಿಸಿದೆ ಎಂದು ಅಧ್ಯಕ್ಷ ವಾಟೇರಿರ ಬೋಪಣ್ಣ ತಿಳಿಸಿದರು.

ನಗರದ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಮಾತನಾಡಿದರು. ಪ್ರಸ್ತುತ ಆಡಳಿತ ಮಂಡಳಿಗೆ ಇದು ಮೊದಲ ಮಹಾಸಭೆಯಾಗಿದೆ. ಎಲ್ಲರ ಸಹಕಾರದಿಂದ ಸಂಸ್ಥೆ ಮತ್ತಷ್ಟು ಉತ್ತಮವಾಗಿ ಮುನ್ನಡೆಯಲಿದೆ. ೧೯೪೩ ಆರಂಭಿಸಿದ ಫೆಡರೇಶನ್ ಸಂಸ್ಥೆಯು ಹಲವು ಕಷ್ಟಗಳನ್ನು ಎದುರಿಸಿ ಇದೀಗ ಲಾಭದ ಹಾದಿಯಲ್ಲಿ ಸಾಗಿದೆ.

ಮುಂಬರುವ ಅವಧಿಯಲ್ಲಿ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ಆರಂಭಿಸುವ ಯೋಜನೆ ಇದೆ. ಅಕ್ಕಿ ಗಿರಣಿಯನ್ನು ಆಧುನೀಕರಿಸುವುದು ಸೇರಿದಂತೆ ರಸಗೊಬ್ಬರ ಸಗಟು ವ್ಯಾಪಾರ ಮಾಡಲು ಯೋಜನೆ ಗಳಿವೆ. ಸಂಸ್ಥೆಯ ಲೆಕ್ಕಪತ್ರಗಳನ್ನು ಪೂರ್ಣ ಪ್ರಮಾಣದಲ್ಲಿ ಗಣಕೀಕೃತಗೊಳಿಸ ಬೇಕಿದೆ ಎಂದರು. ಉಪಾಧ್ಯಕ್ಷÀ ಟಿ.ಎಂ. ಕಾವೇರಪ್ಪ, ನಿರ್ದೇಶಕರಾದ ಎಂ.ಕೆ. ಭೀಮಯ್ಯ, ಕೆ.ಎಂ. ಪೂವಯ್ಯ, ಎಸ್.ಕೆ. ಮಂದಣ್ಣ, ಕೆ.ಎಂ. ಬಿದ್ದಪ್ಪ, ಕೆ.ಕೆ. ಮಂದಣ್ಣ, ಎಂ.ಕೆ. ಕಾವೇರಪ್ಪ, ಎಂ.ಎA. ಕುಟ್ಟಪ್ಪ, ಸಿ.ಈ. ಗಿರೀಶ್ ಪೂಣಚ್ಚ, ಎ.ಕೆ. ಚಿಣ್ಣಪ್ಪ, ಕೆ.ಆರ್. ವಿನೋದ್, .ಕೆ.ಬಿ. ಲತಾ, ವೀಣಾ ಮಹೇಶ್, ಹೆಚ್.ಟಿ. ಮರಿಯಪ್ಪ, ಹೆಚ್.ಎಸ್. ಚೆನಿಯ ಹಾಜರಿದ್ದರು.