ಮಡಿಕೇರಿ, ಡಿ.೨೬: ಸೋಮವಾರಪೇಟೆಯ ಸೃಷ್ಟಿಯ ಚಿಗುರು ಕವಿ ಬಳಗದ ವತಿಯಿಂದ ತಾ.೨೭ರಂದು (ಇಂದು) ಕವಿಗೋಷ್ಠಿ ಹಾಗೂ ಜಾನಪದ ಗೀತೆ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಹಿಳಾ ಸಮಾಜದಲ್ಲಿ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿರುವ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಕವಿ ಬಳಗದ ಅಧ್ಯಕ್ಷ ಕೆ.ಪಿ. ಸುದರ್ಶನ್ ವಹಿಸುವರು. ಪ.ಪಂ. ಉಪಾಧ್ಯಕ್ಷ ಉದ್ಘಾಟಿಸುವರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಜಲಕಾಳಪ್ಪ ವಹಿಸುವರು. ಪ.ಪಂ. ಅಧ್ಯಕ್ಷೆ ನಳನಿ ಗಣೇಶ್, ಸದಸ್ಯ ಬಿ.ಆರ್. ಮಹೇಶ್, ಕ.ರ.ವೇ. ಅಧ್ಯಕ್ಷ ಕೆ.ಎನ್. ದೀಪಕ್, ಜಾನಪದ ಪರಿಷತ್ ಹೋಬಳಿ ಅಧ್ಯಕ್ಷ ಎಸ್.ಎ. ಮುರಳೀಧರ್, ಕಸಾಪ ತಾಲೂಕು ಅಧ್ಯಕ್ಷ ಜವರಪ್ಪ, ಮಹಿಳಾ ಸಮಾಜ ಅಧ್ಯಕ್ಷೆ ಉಷಾ ತೇಜಸ್ವಿ, ಪ.ಪಂ.ಮಾಜಿ ಅಧ್ಯಕ್ಷೆ ವಿಜಯಲಕ್ಷಿö್ಮ ಸುರೇಶ್ ಅತಿಥಿಗಳಾಗಿ ಉಪಸ್ಥಿತರಿರು ವರು. ಇದೇ ಸಂದರ್ಭ ಬಿ.ಸಂಜೀವ, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಪತ್ರಕರ್ತ ಬಿ.ಎ.ಭಾಸ್ಕರ್, ಕಲಾವಿದ ಒಸ್ವಾಲ್ಡ್ ವೇಗಸ್ ಅವರುಗಳನ್ನು ಸನ್ಮಾನಿಸಲಾಗುವದೆಂದು ಬಳಗದ ಕಾರ್ಯದರ್ಶಿ ನ.ಲ.ವಿಜಯ, ಕಾರ್ಯಕ್ರಮ ಸಂಚಾಲಕಿ ಅಶ್ವಿನಿ ಕೃಷ್ಣಕಾಂತ್ ಅವರುಗಳು ತಿಳಿಸಿದ್ದಾರೆ.