ಮಡಿಕೇರಿ, ಡಿ.೨೬; ಇಲ್ಲಿಗೆ ಸಮೀಪದ ಕೈಕಾಡುವಿನಲ್ಲಿ ಕಾಡಾನೆಗಳು ದಾಳಿ ಮಾಡಿ ಕಾಫಿ ತೋಟಕ್ಕೆ ಹಾನಿಯುಂಟಾಗಿದೆ. ಕೈಕಾಡು ನಿವಾಸಿ ಕುಲ್ಲಚೆಟ್ಟಿ ಮುದ್ದಯ್ಯ ಅವರ ಕಾಫಿ ತೋಟಕ್ಕೆ ರಾತ್ರಿ ವೇಳೆ ದಾಳಿ ನಡೆಸಿರುವ ಕಾಡಾನೆಗಳು ಫಸಲು ತುಂಬಿದ ಗಿಡಗಳನ್ನು ಮುರಿದು, ತುಳಿದು ನಷ್ಟಪಡಿಸಿವೆ. ಅರಣ್ಯ ಇಲಾಖಾಧಿಕಾರಿಗಳು ಪರಿಶೀಲಿಸಿ ನಷ್ಟ ಪರಿಹಾರ ಒದಗಿಸಿಕೊಡುವಂತೆ ಮುದ್ದಯ್ಯ ಮನವಿ ಮಾಡಿಕೊಂಡಿದ್ದಾರೆ.