ವೀರಾಜಪೇಟೆ, ಡಿ. ೨೬ : ತಾಲೂಕಿನ ೩೫ ಗ್ರಾಮ ಪಂಚಾಯಿತಿಗಳ ೨ನೇ ಹಂತದ ಚುನಾವಣೆ ತಾ.೨೭ (ಇಂದು) ರಂದು ನಡೆಯಲಿದ್ದು, ತಾಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ತಹಶೀಲ್ದಾರ್ ಯೋಗಾನಂದ ತಿಳಿಸಿದರು.ವೀರಾಜಪೇಟೆಯ ಗ್ರಾಮ ಪಂಚಾಯಿತಿ ಚುನಾವಣೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮಸ್ಟರಿಂಗ್ ಕೇಂದ್ರಕ್ಕೆ ತೆರಳಿ ಪರಿಶೀಲನೆ ನಡೆಸಿದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕಿನಲ್ಲಿ ಒಟ್ಟು ೧.೨೪.೫೦೧ ಮತದಾರರಿದ್ದು ೩೫ ಗ್ರಾಮ ಪಂಚಾಯಿತಿಗಳಿಗೆ ನಡೆಯುವ ಚುನಾವಣೆಯಲ್ಲಿ ೩೭೦ ಸ್ಥಾನಗಳಿಗೆ ಒಟ್ಟು ೯೨೫ ಸ್ಪರ್ಧಿಗಳು ಕಣದಲ್ಲಿದ್ದಾರೆ. ೪೨೪ ಸ್ಥಾನಗಳಲ್ಲಿ ೫೪ ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೧೯೬ ಮತಗಟ್ಟೆಗಳನ್ನು ಮಾಡಲಾಗಿದೆ. ೧೭೦೦ ಜನರು ಸಿಬ್ಬಂದಿಗಳನ್ನು ನೀಯೋಜಿಸಲಾಗಿದೆ. ಬಿರುನಾಣಿ ೨, ಮಾಕುಟ್ಟ, ಪರಗಟಕೇರಿ ನಕ್ಸಲ್ ಪೀಡಿತ ಪ್ರದೇಶವಾಗಿದೆ. ಸೂಕ್ಷö್ಮ, ಅತೀ ಸೂಕ್ಷö್ಮ, ಮತಗಟ್ಟೆ ಗುರುತಿಸಿ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದರು.ಡಿವೈಎಸ್ಪಿ ಸಿ.ಟಿ ಜಯಕುಮಾರ್ ಮಾತನಾಡಿ, ೧ ಡಿವೈಎಸ್‌ಪಿ, ೪ ವೃತ್ತ ನಿರೀಕ್ಷಕರು, ೧೧ ಸಬ್ ಇನ್ಸ್ಪೆಕ್ಟರ್, ೩೩ ಎಎಸ್‌ಐ, ೨೬೦ ಪೋಲಿಸರು, ೧ ಕೆಎಸ್‌ಆರ್‌ಪಿ, ೩ ಡಿಎಆರ್ ತುಕಡಿ ಗಳನ್ನು ಚುನಾವಣಾ ಕಾರ್ಯಕ್ಕೆ ನಿ ಯೋಜಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶ ಗಳಿಗೆ ಹೆಚ್ಚುವರಿಯಾಗಿ ೩ ಶಸ್ತçಸಜ್ಜಿತ ಸಿಬ್ಬಂದಿಗಳನ್ನು ನಿಯೋಜಿಸಿರುವುದಾಗಿ ಮಾಹಿತಿ ನೀಡಿದರು.

(ಮೊದಲ ಪುಟದಿಂದ)

ಡಿಸಿ ಭೇಟಿ : ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿರುವ ಚುನಾವಣಾ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನ ಚುನಾವಣಾಧಿಕಾರಿ ಯೊಂದಿಗೆ ಚುನಾವಣೆ ಸಿದ್ಧತೆ ಬಗ್ಗೆ ಮಾಹಿತಿ ಪಡೆದುಕೊಂಡರು. ಮತದಾನದ ವೇಳೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಚುನಾವಣಾ ವೀಕ್ಷಕ ದೇವರಾಜ್ ಮಸ್ಟರಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್ ಮಾತನಾಡಿ, ತಾಲೂಕಿನಾದ್ಯಂತ ೩೬ ಕೊರೊನಾ ಸೋಂಕಿತರಿದ್ದು, ಈ ಪೈಕಿ ೭ ಮಂದಿ ಮತದಾನ ಮಾಡುವುದಿಲ್ಲ ಎಂದಿದ್ದಾರೆ. ಉಳಿದವರು ಮತದಾನ ಮಾಡಲು ಬಯಸಿದರೆ ಕೊನೆಯ ಒಂದು ಗಂಟೆ ಅವಧಿಯೊಳಗೆ ಮುಂಜಾಗ್ರತಾ ಕ್ರಮದೊಂದಿಗೆ ಮತಗಟ್ಟೆಗೆ ಕರೆತರಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಅಪರಾಹ್ನ ೧೨.೩೦ಕ್ಕೆ ಚುನಾವಣಾ ಸಿಬ್ಬಂದಿಗಳಿಗೆ ಮತ ಪೆಟ್ಟಿಗೆಯನ್ನು ವಿತರಿಸಲಾಯಿತು.