ಕುಶಾಲನಗರ, ಡಿ. ೨೬: ಕುಶಾಲನಗರ ಸಂಚಾರಿ ಪೊಲೀಸ್ ಅಧಿಕಾರಿಯಿಂದ ಆಟೋ ಚಾಲಕರಿಗೆ ಕಿರುಕುಳ ಉಂಟಾಗುತ್ತಿದೆ ಎಂದು ಆರೋಪಿಸಿ ಚಾಲಕರು ಆಟೋ ಚಾಲನೆ ಸ್ಥಗಿತಗೊಳಿಸಿ ಪಟ್ಟಣ ಠಾಣೆ ಮುಂಭಾಗ ಸೇರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಸಂಚಾರಿ ಪೊಲೀಸ್ ಅಧಿಕಾರಿ ಅಚ್ಚಮ್ಮ ಅವರು ಆಟೋ ಚಾಲಕರೊಂದಿಗೆ ಅನುಚಿತವಾಗಿ ವರ್ತಿಸಿ ಆಟೋಗಳಿಗೆ ವಿನಾಕಾರಣ ದಂಡ ವಿಧಿಸುತ್ತಿರುವ ಬಗ್ಗೆ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿ ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಆಟೋ ಚಾಲಕರು ಮಾಲೀಕರ ಸಂಘದ ಅಧ್ಯಕ್ಷರಾದ ಆರ್.ಮೋಹನ್ ನೇತೃತ್ವದಲ್ಲಿ ಪೊಲೀಸ್ ಠಾಣಾ ಆವರಣದಲ್ಲಿ ಸೇರಿದ ಚಾಲಕರು ಕಳೆದ ಹಲವು ಸಮಯದಿಂದ ಅಧಿಕಾರಿ ಯಿಂದ ತೊಂದರೆ ಉಂಟಾಗುತ್ತಿದೆ. ಸಾರ್ವಜನಿಕರ ಎದುರು ಅವಹೇಳನವಾಗಿ ಮಾತನಾಡುತ್ತಿದ್ದು ಇದರಿಂದ ಚಾಲಕರಿಗೆ ಅತೀವ ಬೇಸರ ಉಂಟಾಗಿದೆ. ತಕ್ಷಣ ಅವರನ್ನು ವರ್ಗಾಯಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಚಾಲಕರನ್ನು ಸಮಾಧಾನಿಸಿದ ವೃತ್ತ ನಿರೀಕ್ಷಕ ಮಹೇಶ್, ಈ ಬಗ್ಗೆ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಉಂಟಾಗದAತೆ ಕ್ರಮಕೈಗೊಳ್ಳಲಾಗು ವುದು ಎಂದು ಭರವಸೆ ನೀಡಿದರು.