ಮಡಿಕೇರಿ, ಡಿ. ೨೬: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ತಾ. ೨೯ ರಂದು ಮಧ್ಯಾಹ್ನ ೩ ಗಂಟೆಗೆ ರಾಷ್ಟçಕವಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಜೂಮ್ ಆಪ್ನಲ್ಲಿ ಆನ್ಲೈನ್ ಕುವೆಂಪು ರಚಿತ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕೊಡಗಿನ ಗಾಯಕರಿಗೆ ಮುಕ್ತ ಅವಕಾಶವಿದ್ದು, ಆಸಕ್ತರು ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ ಅವರ ದೂರವಾಣಿ ಸಂಖ್ಯೆ ೯೪೪೮೭ ೭೩೦೭೮ ಅಥವಾ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ೯೪೪೮೩ ೪೬೨೭೬ ಅನ್ನು ಸಂಪರ್ಕಿಸಿ ಹೆಸರು ನೋಂದಾ ಯಿಸಬೇಕಾಗಿ ಕೋರಲಾಗಿದೆ.