ಮಡಿಕೇರಿ, ಡಿ. ೨೬: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಕಟಣೆ ಯೋಜನೆಯಡಿ ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ. ಲೇಖಕರು ಅರೆಭಾಷೆ ಕಥೆ, ಕವನ, ಲೇಖನ, ವಿಚಾರ ಸಾಹಿತ್ಯ, ಲಲಿತ ಪ್ರಬಂಧ, ಸಂಶೋಧನ ಕೃತಿಗಳು ಇನ್ನಿತರ ಬರಹಗಳಿದ್ದಲ್ಲಿ ಹಸ್ತಪ್ರತಿಗಳನ್ನು ಅಕಾಡೆಮಿಗೆ ಸಲ್ಲಿಸುವಂತೆ ರಿಜಿಸ್ಟಾçರ್ ಚಿನ್ನಸ್ವಾಮಿ ಕೋರಿದ್ದಾರೆ.

ಬರಹವು ಕನಿಷ್ಟ ೭೦ ರಿಂದ ೮೦ ಪುಟಗಳಿರಬೇಕು. ತಮ್ಮ ಹಸ್ತಪ್ರತಿಗಳನ್ನು ಸಲ್ಲಿಸಲು ೨೦೨೧ ರ ಜನವರಿ ೨೦ ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ರಿಜಿಸ್ಟಾçರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ, ರಾಜಾಸೀಟ್ ರಸ್ತೆ, ಮಡಿಕೇರಿ, ಮೊ. ೬೩೬೨೫೨೨೬೭೭ ಹಾಗೂ ಚಿಡಿebಚಿse ಚಿಛಿಚಿಜemಥಿ @gmಚಿiಟ.ಛಿom. ಸಂಪರ್ಕಿಸಬಹುದು. ಪುಸ್ತಕಗಳ ಆಯ್ಕೆಯ ಹಕ್ಕು ಅಕಾಡೆಮಿ ಯದಾಗಿದೆ ಎಂದು ರಿಜಿಸ್ಟಾçರ್ ತಿಳಿಸಿದ್ದಾರೆ.