*ಗೋಣಿಕೊಪ್ಪಲು, ಡಿ. ೨೫: ತಿತಿಮತಿ ಗ್ರಾಮ ಪಂಚಾಯಿತಿಯಲ್ಲಿ ೧೫ ಸ್ಥಾನಗಳಿದ್ದು ಇದೀಗ ೧೧ಕ್ಕೆ ಇಳಿಮುಖವಾಗಿದೆ. ಅರಕೇರಿ ಅರಣ್ಯ ಪ್ರದೇಶಕ್ಕೆ ಸೇರಿದ ಗಣಗೂರು ಹಾಡಿಯ ೨೦೦ ಕುಟುಂಬಗಳನ್ನು ಹೆಚ್.ಡಿ. ಕೋಟೆ ಮತ್ತು ಹುಣಸೂರು ತಾಲೂಕಿನ ಪುನರ್ ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಿದ ಪರಿಣಾಮ ಮತದಾರರ ಸಂಖ್ಯೆ ಕ್ಷೀಣಿಸಿದ್ದು, ಇಲ್ಲಿನ ನಾಲ್ಕು ಕ್ಷೇತ್ರಕ್ಕೆ ಈ ಬಾರಿ ಯಾರೂ ನಾಮಪತ್ರ ಸಲ್ಲಿಸಿಲ್ಲ.

ತಿತಿಮತಿ ಗ್ರಾಮ ಪಂಚಾಯಿತಿ ಹಾಡಿ ಹಾಗೂ ಗಿರಿಜನರು ಹೆಚ್ಚಾಗಿ ಹೊಂದಿರುವ ಗ್ರಾಮ ಪಂಚಾಯಿತಿಯಾಗಿದೆ. ಇಲ್ಲಿನ ಒಟ್ಟು ೧೧ ಸ್ಥಾನಕ್ಕೆ ೨೬ ಜನ ಸ್ಪರ್ಧಿಗಳಿದ್ದಾರೆ. ಇವರಲ್ಲಿ ೧೧ ಸ್ಪರ್ಧಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ, ೬ ಜನ ಸ್ಪರ್ಧಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಒಬ್ಬರು ಅಲ್ಪಸಂಖ್ಯಾತರಿದ್ದಾರೆ. ಉಳಿದ ೮ ಸ್ಥಾನ ಸಾಮಾನ್ಯರಿಗೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೬ ಕ್ಷೇತ್ರಗಳಿವೆ. ನೋಕ್ಯ (೧) ವಾರ್ಡ್ನಲ್ಲಿ ೨ ಸ್ಥಾನಗಳಿದ್ದು ಒಂದು ಪರಿಶಿಷ್ಟ ಜಾತಿ ಸಾಮಾನ್ಯಕ್ಕೆ ಮೀಸಲಿದ್ದರೆ, ಮತ್ತೊಂದು ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.