ಮಡಿಕೇರಿ, ಡಿ. ೨೫: ಆಸ್ತಿ ವಿವಾದಕ್ಕೆ ಸಂಬAಧಿಸಿದAತೆ ರಾಜಕೀಯ ಪ್ರಭಾವಿ ವ್ಯಕ್ತಿಯೊಬ್ಬರಿಂದ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇರುವ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆAದು ಆರೋಪಿಸಿರುವ ಹೊಸ್ಕೇರಿ ಗ್ರಾಮದ ನಿವಾಸಿ ಮಂಡೀರ ವಿಮಾ ಹರೀಶ್ ಇಂದು ಎಸ್‌ಪಿ ಕಚೇರಿ ಮುಂದೆ ಧರಣಿ ಕುಳಿತಿದ್ದರು. ಬಳಿಕ ಪೊಲೀಸ್ ಅವರನ್ನು ಇಬ್ಬರು ಮಕ್ಕಳ ಸಹಿತ ವಶಕ್ಕೆ ತೆಗೆದುಕೊಂಡು ಬಿಡುಗಡೆ ಮಾಡಿದರು.

ಈ ಪ್ರಕರಣದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹಿಣಿ ವಿಮಾ ಹರೀಶ್ ತಮ್ಮ ಪತಿ ಮಂಡೀರ ಹರೀಶ್ ಹಾಗೂ ಮಾವನವರಿಗೆ ಸೇರಿದ ಹೊಸ್ಕೇರಿಯ ಸಿದ್ದಾಪುರ ರಸ್ತೆಯಲ್ಲಿರುವ ಆಸ್ತಿ ವಿವಾದಕ್ಕೆ ಸಂಬAಧಿಸಿದAತೆ ಪ್ರಕರಣ ನ್ಯಾಯಾಲಯದಲ್ಲಿದೆ. ಈ ನಡುವೆಯೇ ಪ್ರಭಾವಿ ರಾಜಕಾರಣಿಯೊಬ್ಬರು ತಮ್ಮ ಸಹೋದರರೊಂದಿಗೆ ತೋಟಕ್ಕೆ ಅಕ್ರಮ ಪ್ರವೇಶ ಮಾಡಿದ್ದಾರೆ. ಅಲ್ಲದೆ ಕಾನೂನಿಗೆ ವಿರುದ್ಧವಾಗಿ ಕುರುಬ ಸಮುದಾಯಕ್ಕೆ ಸೇರಿದ ಕಾರ್ಮಿಕರನ್ನು ಕೂಡ ತೋಟದೊಳಗೆ ಬಿಟ್ಟಿದ್ದಾರೆ.

ತಾವು ನೀಡಿದ ದೂರಿಗೆ ಸ್ಪಂದಿಸದ ಪೊಲೀಸ್ ಅಧಿಕಾರಿಗಳು ತನ್ನ ಪತಿಯ ವಿರುದ್ಧ ಕೆಲವರು ಮಾಡಿರುವ ಜಾತಿ ನಿಂದನೆಯ ಸುಳ್ಳು ಆರೋಪದ ದೂರನ್ನು ಪರಿಗಣಿಸಿ ಸಾರ್ವಜನಿಕವಾಗಿ ಬಂಧಿಸಿದ್ದಾರೆ. ಅದರ ವಿರುದ್ಧ ತಾನು ಹೋರಾಟ ನಡೆಸುವುದಾಗಿ ಸಮರ್ಥಿಸಿಕೊಂಡರು.

ಪತಿಯ ಬಂಧನವಾಗಿ ರುವುದರಿಂದ ತಾನು ಹಾಗೂ ಇಬ್ಬರು ಮಕ್ಕಳು ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದು, ಪೊಲೀಸರು ಸೂಕ್ತ ರಕ್ಷಣೆ ನೀಡಬೇಕು ಮತ್ತು ಪ್ರಭಾವಿ ರಾಜಕಾರಣಿಯನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.